newsfirstkannada.com

ಒಂದಲ್ಲ, ಎರಡಲ್ಲ, 25 ಕೋಟಿ! ಅಂಬರ್​ ಗ್ರೀಸ್​ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಅರೆಸ್ಟ್​

Share :

Published May 23, 2023 at 10:10am

Update September 25, 2023 at 10:18pm

    25 ಕೋಟಿ ಬೆಲೆಬಾಳುವ ಅಂಬರ್​ ಗ್ರೀಸ್

    ಕೇರಳ ಮೂಲದ ಮೂವರು ಅರೆಸ್ಟ್​

    ಕೊಚ್ಚೀನ್​ ಸಮುದ್ರದಿಂದ ತಂದ ಅಂಬರ್​ ಗ್ರೀಸ್

ಮೈಸೂರು: 25 ಕೋಟಿ ಬೆಲೆಬಾಳುವ ತಿಮಿಂಗಿಲದ ಅಪರೂಪದ ಅಂಬರ್ ಗ್ರೀಸ್ ಅನ್ನು ಎಚ್.ಡಿ.ಕೋಟೆ ಮತ್ತು ಜಿಲ್ಲಾ ಸೆನ್  ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರಿನಲ್ಲಿರಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಸುಮಾರು ಒಂಭತ್ತುವರೆ ಕೆಜಿ ತಿಮಿಂಗಿಲ ವಾಂತಿ ಸಮೇತ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.

ಕೇರಳ ಮೂಲದ ಮೂವರು ಕೊಚ್ಚೀನ್​ ಸಮುದ್ರದಿಂದ ಅಂಬರ್​ ಗ್ರೀಸ್​​ ಅನ್ನು ತಂದಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಇವರನ್ನು ಹಿಡಿಯಲು ಜಿಲ್ಲಾ ಎಸ್ಪಿ ಸೀಮಾ ಲಟ್ಕರ್, ಅಡಿಷಿನಲ್ ಎಸ್ಪಿ ನಂದಿನಿ, ಡಿವೈಎಸ್ ಪಿ ಮಹೇಶ್ ಮಾರ್ಗದರ್ಶನದಲ್ಲಿ ತಂಡ ರಚನೆ ಮಾಡಲಾಗಿತ್ತು. ಎಚ್.ಡಿ.ಕೋಟೆ ಇನ್ಸ್ ಪೆಕ್ಟರ್ ಶಭ್ಬೀರ್ ಹುಸೇನ್, ಮೈಸೂರು ಕ್ರೈಂ ಬ್ರಾಂಚ್​ ಇನ್ಸ್ ಪೆಕ್ಟರ್ ಪುರುಷೋತ್ತಮ ತಂಡದಿಂದ ಕಾರ್ಯಾಚರಣೆ ನಡೆಸಿ ತಿಮಿಂಗಿಲ ವಾಂತಿಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.

ಪೊಲೀಸರು ಎಚ್.ಡಿ.ಕೋಟೆ ಹ್ಯಾಂಡ್ ಪೋಸ್ಟ್ ನಲ್ಲಿ ಸಮವಸ್ತ್ರ ಧರಿಸದೆ ಸಾಧಾರಣ ವ್ಯಕ್ತಿಗಳಂತೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಹಡಗು ನಡೆಸುವ ನಾವಿಕರು ಎಂದು ತಿಳಿದುಬಂದಿದೆ. ಇನ್ನು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಅಂಬರ್ ಗ್ರೀಸ್ ಎಂದು ಖಚಿತ ಪಡಿಸಿದ್ದಾರೆ.

ಅಂಬರ್ ಗ್ರೀಸ್ ವಿದೇಶದಲ್ಲೂ ಅಪಾರವಾದ ಬೇಡಿಕೆ ಇದ್ದು, ಅಧಿಕ ಬೆಲೆ ಕೂಡ ಇದೆ. ಸದ್ಯ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕರೆದೊಯ್ದಿದ್ದಾರೆ. ಇನ್ನು ಎಚ್.ಡಿ.ಕೋಟೆ ಪೋಲೀಸರ ಮಿಂಚಿನ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದಲ್ಲ, ಎರಡಲ್ಲ, 25 ಕೋಟಿ! ಅಂಬರ್​ ಗ್ರೀಸ್​ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಅರೆಸ್ಟ್​

https://newsfirstlive.com/wp-content/uploads/2023/05/whale.jpg

Load More