newsfirstkannada.com

ಭಗ್ನಪ್ರೇಮಿಯಿಂದ ಗುಂಡಿನ ದಾಳಿ; ಒಂದೇ ಕುಟುಂಬದ ಮೂವರು ಸಾವು, ಮೂವರು ಗಂಭೀರ

Share :

20-11-2023

  ಮದುವೆ ನಿರಾಕರಿಸಿದ್ದಕ್ಕೆ ಗುಂಡಿನ ದಾಳಿ

  ಯುವತಿ ಸೇರಿ ಮೂವರು ಸ್ಥಳದಲ್ಲೇ ಸಾವು

  ಭಗ್ನಪ್ರೇಮಿಯ ಹುಚ್ಚಾಟಕ್ಕೆ ಪ್ರಾಣತೆತ್ತ ಮೂವರು

ಬಿಹಾರ: ಭಗ್ನಪ್ರೇಮಿಯೊಬ್ಬ ಒಂದೇ ಕುಟುಂಬದ ಆರು ಜನರ ಮೇಲೆ ಗುಂಡು ಹಾರಿಸಿದ ಘಟನೆ ಲಖಿಸರಾಯ್​ ನಗರದ ಪಂಜಾಬಿ ಪ್ರದೇಶದಲ್ಲಿ ನಡೆದಿದೆ. ವ್ಯಕ್ತಿಯ ಗುಂಡಿನ ದಾಳಿಗೆ ಮೂವರು ಸಾವನ್ನಪ್ಪಿದ್ದು, ಇನ್ನುಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಲಖಿಸರಾಯ್ ಪ್ರದೇಶದಲ್ಲಿಂದು ಜನರು ಛತ್​ ಹಬ್ಬ ಆಚರಣೆಯಲ್ಲಿ ತೊಡಗಿದ್ದರು. ಆದರೆ ಇದೇ ಸಂಸತದಲ್ಲಿದ್ದ ಕುಟುಂಬದವರ ಮೇಲೆ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದಾನೆ. ಗಾಯಗೊಂಡ ಮೂವರನ್ನು ಪಿಎಂಸಿಎಚ್​ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಘಟನೆ ಬಗ್ಗೆ ಕುಟುಂಬದ ಸದಸ್ಯರೊಬ್ಬರು ಮಾತನಾಡಿದ್ದು, ‘ನಾವು ಛತ್​ಘಾಟ್​​ನಿಂದ ಬರುವ ವೇಳೆ ಆಶಿಶ್​ ಚೌಧರಿ ಹಿಂದಿನಿಂದ ಬಂದು ಗುಂಡು ಹಾರಿಸಿದ್ದಾನೆ. ಅತ್ತಿಗೆ, ಮಾವ ಸೇರಿದಂತೆ ಆರು ಜನರ ಮೇಲೆ ಟಾರ್ಗೆಟ್​ ಮಾಡಿ ಗುಂಡು ಹಾರಿಸಿದ್ದಾನೆ’ ಎಂದು ಹೇಳಿದ್ದಾರೆ.

ಬಳಿಕ ಮಾತು ಮುಂದುವರಿಸಿದ ಅವರು, ‘ಆರೋಪಿಯು ನಮ್ಮ ಮನೆಯ ಯುವತಿಯನ್ನು ಪ್ರೀತಿಸುತ್ತಿದ್ದು, ಆತನ ಜೊತೆಗೆ ಫೋನ್​ನಲ್ಲಿ ಮಾತನಾಡುತ್ತಿದ್ದಳು. ಆದರೆ ಆತ ಆಕೆಯನ್ನು ವಿವಾಹವಾಗಲು ಬಯಸಿದ್ದ. ಆಕೆ ಮಾತ್ರ ಅದನ್ನು ನಿರಾಕರಿಸಿದ್ದಕ್ಕೆ ಕೋಪಗೊಂಡು ಗುಂಡು ಹಾರಿಸಿದ್ದಾನೆ’ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಗ್ನಪ್ರೇಮಿಯಿಂದ ಗುಂಡಿನ ದಾಳಿ; ಒಂದೇ ಕುಟುಂಬದ ಮೂವರು ಸಾವು, ಮೂವರು ಗಂಭೀರ

https://newsfirstlive.com/wp-content/uploads/2023/11/Fire.jpg

Load More