newsfirstkannada.com

ಅಬ್ಬಾ.. ಫಾಲ್ಸ್​ನಲ್ಲೇ ಸಿಲುಕಿದ್ದ ಮೂವರ ರಕ್ಷಣೆ; ಇಂಡಿಯನ್ ಕೋಸ್ಟ್​​ ಗಾರ್ಡ್ ಸಾಹಸ ಹೇಗಿತ್ತು ಗೊತ್ತಾ?

Share :

Published August 3, 2024 at 9:16pm

    ಫಾಲ್ಸ್​​ನಲ್ಲಿ ಸಿಲುಕಿದ್ದವರನ್ನು ಪತ್ತೆ ಹಚ್ಚಿದ್ದು ಹೇಗೆ, ರಕ್ಷಣಾ ಕಾರ್ಯ ಹೇಗಿತ್ತು?

    ಇಂಡಿಯನ್​ ಕೋಸ್ಟ್ ಗಾರ್ಡ್​ ರಕ್ಷಣೆ ಮಾಡಿದ ಕಾರ್ಯಕ್ಕೆ ಬಿಗ್ ಸೆಲ್ಯೂಟ್

    ಹೆಲಿಕಾಪ್ಟರ್ ಮೂಲಕ ಮೂವರನ್ನು ರಕ್ಷಿಸಿದ ಇಂಡಿಯನ್ ಕೋಸ್ಟ್ ಗಾರ್ಡ್

ವಯನಾಡಿನಲ್ಲಿ ಭೂಕುಸಿತದಲ್ಲಿನ ಸಾವಿನ ರೌದ್ರನರ್ತನದ ಸುದ್ದಿಗಳೇ ಕೇಳಿ ಬರುತ್ತಿವೆ. ಧಾರಾಕಾರ ಮಳೆ ಜೊತೆಗೆ ಗುಡ್ಡ ಕುಸಿದು ಇಂದಿಗೆ 4 ದಿನವಾಗಿದ್ದರೂ ಮಣ್ಣಿನಲ್ಲಿ ಮೃತದೇಹಗಳು ಸಿಗುತ್ತಿವೆ. ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 358ಕ್ಕೆ ಹೆಚ್ಚಳವಾಗಿದೆ. ನೂರಾರು ಜನರು ನಾಪತ್ತೆ ಆಗಿದ್ದಾರೆ. ಹೀಗಾಗಿ ಭಾರತೀಯ ಸೇನೆ ಸೇರಿ ಇತರೆ ರಕ್ಷಣಾ ಪಡೆಗಳು ಕಾರ್ಯಾಚರಣೆ ಮುಂದುವರೆಸಿದ್ದು ಕೇರಳದ ಸೂಜಿಪಾರಾ ಫಾಲ್ಸ್​​ನಲ್ಲಿ ಮೂವರನ್ನು ರಕ್ಷಣೆ ಮಾಡಲಾಗಿದೆ.

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ದುರಂತ.. ರೈಲಿನ ಅಡಿಯಲ್ಲೇ ಸಿಲುಕಿದ ಯುವಕನ ಮೃತದೇಹ; ಪ್ರಯಾಣಿಕರ ಪರದಾಟ

ಭೀಕರ ಭೂಕಸಿತದಿಂದ ಎಲ್ಲಿಯಾದರು ಜನರು ಸಿಲುಕಿರಬಹುದೆಂದು ಇಂಡಿಯನ್​ ಕೋಸ್ಟ್​ ಗಾರ್ಡ್​ ಸಿಬ್ಬಂದಿ ಹೆಲಿಕಾಪ್ಟರ್ ಮೂಲಕ ವೈಮಾನಿ ಸಮೀಕ್ಷೆ ನಡೆಸುತ್ತಿದ್ದರು. ಮುಂಡಕೈನಿಂದ ಸೂಜಿಪಾರಾವರೆಗೂ ಸಮೀಕ್ಷೆ ಸಾಗಿತ್ತು. ದಟ್ಟ ಅರಣ್ಯವನ್ನೆಲ್ಲ ಒಂದು ಕಡೆಯಿಂದ ನೋಡಿಕೊಂಡು ಬರುತ್ತಿದ್ದರು. ಈ ವೇಳೆ ಸೂಜಿಪಾರಾ ಫಾಲ್ಸ್​ ಬಳಿ ಮೂವರು ಆದಿವಾಸಿ ಸಮುದಾಯದವರು ಇರೋದು ಪತ್ತೆಯಾಗಿದೆ.

ಇದನ್ನೂ ಓದಿ: BREAKING: ನಮ್ಮ ಮೆಟ್ರೋದಲ್ಲಿ ಮತ್ತೊಂದು ದುರಂತ; ಟ್ರ್ಯಾಕ್​ಗೆ ಹಾರಿ ವ್ಯಕ್ತಿ ಆತ್ಮ*ತ್ಯೆ

ತಕ್ಷಣ ಕಾರ್ಯಾಚರಣೆ ಆರಂಭಿಸಿದ ಕೋಸ್ಟ್​ ಗಾರ್ಡ್​ ಸಿಬ್ಬಂದಿ ಸಾಹಸ ಮಾಡಿ ಮೂವರು ಆದಿವಾಸಿ ಸಮುದಾಯದವರನ್ನು ರಕ್ಷಣೆ ಮಾಡಿದ್ದಾರೆ. ಇನ್ನು ನಿನ್ನೆಯಷ್ಟೇ ಬೆಟ್ಟದ ಮೇಲಿನ ಗುಹೆಯಲ್ಲಿದ್ದ ನಾಲ್ವರು ಬುಡಕಟ್ಟ ಸಮುದಾಯದವರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ರಕ್ಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಇಂದು ಮತ್ತೆ ಮೂವರನ್ನು ರಕ್ಷಣೆ ಮಾಡಿದ್ದಾರೆ. ಆದರೂ ಇದುವರೆಗೂ ಜನರು ಬೆಟ್ಟ-ಗುಡ್ಡದಲ್ಲಿ ಸಿಲುಕಿಕೊಂಡಿರಬಹುದೆಂದು ರಕ್ಷಣಾ ಇಲಾಖೆಯಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: 100km ವೇಗದಲ್ಲಿ ಕಾರು ಸ್ಟಂಟ್ ಮಾಡ್ತಿದ್ದ ಅಪ್ರಾಪ್ತ.. ಸ್ಕೂಟರ್​ಗೆ ಡಿಕ್ಕಿಯಾಗಿ ತಾಯಿ ಸಾವು, ಮಗಳು ಚಿಂತಾಜನಕ

ಸೇನಾ ಸಮವಸ್ತ್ರದಲ್ಲಿ ಭೂಕುಸಿತ ಸ್ಥಳಕ್ಕೆ ಭೇಟಿ ನೀಡಿದ ನಟ

ಇನ್ನು ಟೆರಿಟೋರಿಯಲ್ ಆರ್ಮಿಯ ಲೆಫ್ಟಿನೆಂಟ್ ಕರ್ನಲ್ ಆಗಿರುವ ಮಲಯಾಳಂನ ಸೂಪರ್ ಸ್ಟಾರ್​ ಮೋಹನ್ ಲಾಲ್​ ಅವರು ವಯನಾಡಿನ ಭೂಕುಸಿತದ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಮೋಹನ್​ ಲಾಲ್ ಅವರು ಟೆರಿಟೋರಿಯಲ್ ಆರ್ಮಿಯ ಲೆಫ್ಟಿನೆಂಟ್ ಕರ್ನಲ್ ಆದ ಕಾರಣ ತಮ್ಮ 122 ಟಿಎ ಬಿಎನ್ ತಂಡದ ಜೊತೆಗೆ ಸೇನಾ ಸಮವಸ್ತ್ರದಲ್ಲಿ ಇದ್ದರು. ವಯನಾಡಿನ ಭೂಕುಸಿತದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಹತ್ತಿರದ ದುರಂತದ ಸ್ಥಳಗಳಿಗೂ ಭೇಟಿ ನೀಡಿ ಕಾರ್ಯಾಚರಣೆಗೆ ತಮ್ಮ ಶಕ್ತಿಯನ್ನು ಒಗ್ಗೂಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. ಫಾಲ್ಸ್​ನಲ್ಲೇ ಸಿಲುಕಿದ್ದ ಮೂವರ ರಕ್ಷಣೆ; ಇಂಡಿಯನ್ ಕೋಸ್ಟ್​​ ಗಾರ್ಡ್ ಸಾಹಸ ಹೇಗಿತ್ತು ಗೊತ್ತಾ?

https://newsfirstlive.com/wp-content/uploads/2024/08/WAYANAD_RESCUE.jpg

Load More