newsfirstkannada.com

ಬರೋಬ್ಬರಿ 70 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಕದ್ದಿದ್ದ ಖದೀಮ ಅರೆಸ್ಟ್​.. ಈ ಮನೆಗಳೇ ಇವನ ಟಾರ್ಗೆಟ್​​!

Share :

21-11-2023

    3 ಬಾರಿ ಪೊಲೀಸರಿಂದ ತಪ್ಪಿಸಿಕೊಂಡು ಹೋಗಿದ್ದವ ಕೊನೆಗೂ ಲಾಕ್

    ಅಬ್ಬಬ್ಬಾ ಇಲ್ಲೊಬ್ಬ ಖತರ್ನಾಕ್ ಖದೀಮ, ಇವನ ಎಂತ ಕಳ್ಳ ಗೊತ್ತಾ?

    ಗೋವಾದ ಕೆಸಿನೋದಲ್ಲಿ ಗರ್ಲ್​ಫ್ರೆಂಡ್ ಜೊತೆ ಬಿಂದಾಸ್ ಆಗಿದ್ದ ಕಳ್ಳ

ಬೆಂಗಳೂರು: 80 ಕೇಸ್​ಗಳಲ್ಲಿ ಭಾಗಿಯಾಗಿದ್ದ 70 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಖತರ್ನಾಕ್​ ಖದೀಮನನ್ನು ಗೋವಿಂದರಾಜನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕಾರ್ತಿಕ್ ಅಲಿಯಾಸ್​ ಎಸ್ಕೇಪ್ ಕಾರ್ತಿಕ್ ಬಂಧನ. ಈ ಹಿಂದೆ 3 ಬಾರಿ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಗೋವಾದಲ್ಲಿ ಅರೆಸ್ಟ್ ಮಾಡಿ ಬೆಂಗಳೂರಿಗೆ ಕರೆ ತಂದಿದ್ದಾರೆ. ಇನ್ನು ಆರೋಪಿಯಿಂದ 1 ಕೆಜಿ 215 ಗ್ರಾಂ ಚಿನ್ನಾಭರಣ, 3 ಕೆಜಿ 500 ಗ್ರಾಂ ಬೆಳ್ಳಿ ಆಭರಣ ವಶಕ್ಕೆ ಪಡೆಯಲಾಗಿದೆ. ಇವುಗಳ ಒಟ್ಟು ಮೊತ್ತ ಸುಮಾರು 70 ಲಕ್ಷ ರೂಪಾಯಿ ಎಂದು ಹೇಳಲಾಗಿದೆ.

ಮಣ್ಣಲ್ಲಿ ಹೂತಿಟ್ಟಿದ್ದ ಚಿನ್ನಾಭರಣ ಹೊರ ತೆಗೆದ ಪೊಲೀಸರು

ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿಯು ಭಯಾನಕವಾದ ಸತ್ಯಗಳನ್ನು ಬಾಯಿಬಿಟ್ಟಿದ್ದಾನೆ. ಈ ಬಗ್ಗೆ ಮಾತನಾಡಿರುವ ಪೊಲೀಸ್ ಕಮಿಷನರ್ ದಯಾನಂದ್ ಅವರು, ಆರೋಪಿಯು 2005 ರಿಂದ ಕಳ್ಳತನ ಮಾಡುತ್ತಿದ್ದು ಡಬಲ್ ಸೈಟ್ ಇರೋ ಮನೆಗಳನ್ನ ಟಾರ್ಗೆಟ್ ಮಾಡುತ್ತಿದ್ದನು. ರಾತ್ರಿ ವೇಳೆ ಮನೆಗೆ ನುಗ್ಗಿ ಡೋರ್ ಲಾಕ್ ಒಡೆದು ನಂತರ ಕಳ್ಳತನ ಮಾಡುತ್ತಿದ್ದನು. ಈ ವೇಳೆ ಸಿಕ್ಕಂತಹ ಚಿನ್ನಾಭರಣಗಳನ್ನು ರೈಲ್ವೇ ಕಾಲೋನಿಯಲ್ಲಿ ಗುಂಡಿಯನ್ನು ಅಗೆದು ಚಿನ್ನಾಭರಣ ಅದರಲ್ಲಿ ಹಾಕಿ ಮಣ್ಣಿನಿಂದ ಮುಚ್ಚುತ್ತಿದ್ದನು. ಸದ್ಯ ಆರೋಪಿ ಮುಚ್ಚಿಟ್ಟಿದ್ದ ಆಭರಣಗಳನ್ನೆಲ್ಲ ಪೊಲೀಸರು ಹೊರ ತೆಗೆಸಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದಿದ್ದಾರೆ.

ಗೋವಿಂದರಾಜನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಗೋವಾದ ಕೆಸಿನೋದಲ್ಲಿ ಗರ್ಲ್ ಫ್ರೆಂಡ್ ಜೊತೆ ಇದ್ದ ಖದೀಮನನ್ನು ಅರೆಸ್ಟ್ ಮಾಡಿ ನಗರಕ್ಕೆ ಕರೆ ತಂದಿದ್ದಾರೆ. ಒಟ್ಟು 18 NBW ವಾರೆಂಟ್ ಇಶ್ಯೂ ಆಗಿದ್ದವು. ಆದರೂ ಆರೋಪಿ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದನು. ಅಲ್ಲದೇ ಬೆಂಗಳೂರು, ಚೆನ್ನೈ, ತಿರುಪತಿಯಲ್ಲೂ ಕಳ್ಳತನ ಮಾಡುತ್ತಿದ್ದನು. ಸದ್ಯ ಆರೋಪಿ ಜೊತೆ ಇನ್ನಿಬ್ಬರನ್ನು ಕೂಡ ಬಂಧಿಸಿ ಕರೆತರಲಾಗಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 70 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಕದ್ದಿದ್ದ ಖದೀಮ ಅರೆಸ್ಟ್​.. ಈ ಮನೆಗಳೇ ಇವನ ಟಾರ್ಗೆಟ್​​!

https://newsfirstlive.com/wp-content/uploads/2023/11/BNG_ESCAPE_KARTHIK.jpg

Load More