ಚಿಂಗಾರಿಯ ಬಂಗಾರದ ದಿನಗಳು ಮುಗಿಯುತ್ತಾ ಬರುತ್ತಿರುವ ಸೂಚನೆ ಸಿಕ್ತಾ?
ಜೋಕುಮಾರನ ಎದುರು ಭವಿಷ್ಯ ಕೇಳಿದ ಅಭಿಮಾನಿಗೆ ಸಿಕ್ಕ ಉತ್ತರವೇನು?
ದರ್ಶನ್ಗೆ ಈಗಲೂ ಕಂಟಕವಾಗಿ ಕಾಡುತ್ತಿರುವ ಆ ಮೂರು ಕುತ್ತುಗಳಾವುವು?
ಬೆಂಗಳೂರು: ದರ್ಶನ್ ಕುರಿತು ಅಭಿಮಾನಿಯೊಬ್ಬರು ಜೋಕುಮಾರನ ಬಳಿ ಭವಿಷ್ಯ ಕೇಳಿದ್ದಾರೆ. ಆ ಬುಟ್ಟಿ ಹಗುರವಾದ್ರೆ, ಅಂದುಕೊಂಡಿದ್ದು ಆಗುತ್ತೆ. ಭಾರವಾದ್ರೆ ಇಲ್ಲ ಅನ್ನೋ ನಂಬಿಕೆ. ಸಚಿನ್ ಜಮಾದಾರ್ ಅನ್ನೋ ದರ್ಶನ್ ಅಭಿಮಾನಿ ಜೋಕುಮಾರನ ಬುಟ್ಟಿ ಎತ್ತಿ ಪ್ರಶ್ನೆಗಳನ್ನ ಕೇಳಿದ್ರು. ಜೈಲಿಂದ ಮೂರು ತಿಂಗಳಲ್ಲಿ ಹೊರಗೆ ಬರ್ತಾರಾ? ಡೆವಿಲ್ ಸಿನಿಮಾದ ಬಗ್ಗೆ ಹಾಗೂ ಬಿಡುಗಡೆ ಬಗ್ಗೆ. ಹಾಗೇ ದರ್ಶನ್ ಮಂದಿನ ಜೀವನ ಹೇಗಿರಲಿದೆ? ಅನ್ನೋ ಪ್ರಶ್ನೆಗಳನ್ನ ಮುಂದಿಟ್ರು. ಆದ್ರೆ, ಈ ಎಲ್ಲಾ ಪ್ರಶ್ನೆಗಳಿಗೆ ಬುಟ್ಟಿ ಹಗುರವಾಗಲೇ ಇಲ್ಲ, ಭಾರವಾಗೇ ಇತ್ತು.
ಜೈಲು ಬದಲಾದ್ರು ದರ್ಶನ್ ಬೆನ್ನು ಬಿಡದ ಕಾನೂನು ಕಂಟಕ!
ಸಮಸ್ಯೆಗಳನ್ನ ದರ್ಶನ್ ಬಿಟ್ರು. ಸಮಸ್ಯೆಗಳು ದರ್ಶನ್ರನ್ನ ಬಿಟ್ಟೋಗ್ತಿಲ್ಲ.. ಯಾಕ್ ಈ ಮಾತಂದ್ರೆ ಬೆಂಗಳೂರು ಬಿಟ್ಟು ಬಳ್ಳಾರಿಗೋದ್ರು ದಾಸನ ವಿರುದ್ಧ ಕಾನೂನಿನ ಕುಣಿಕೆ ಬಿಗಿಯಾಗ್ತಿದೆ. ಒಂದುಕಡೆ, ದಾಸನಿಗೆ ಜಾಮೀನು ಸಲ್ಲಿಕೆಗೆ ವಕೀಲರ ತಂಡ ಸರ್ಕಸ್ ಮಾಡ್ತಿದೆ. ಮತ್ತೊಂದು ಕಡೆ ದರ್ಶನ್ಗೆ ಯಾವುದೇ ಕಾರಣಕ್ಕೂ ಜಾಮೀನು ಸಿಗದಂತೆ ಪೊಲೀಸರು ಆಕ್ಷೇಪಣೆ ಸಲ್ಲಿಸ್ತಿದ್ದಾರೆ. ಈ ಮಧ್ಯೆ ಪಂಜರದೊಳಗಿನ ದಾಸನ ಧಿಮಾಕಿನದ್ದು ಮತ್ತೊಂದು ಕಥೆ ತೆರೆದುಕೊಂಡಿದೆ.
ಇದನ್ನೂ ಓದಿ: ಜೈಲಿಗೆ ಹೋದ ಮೇಲೆ ಮತ್ತೆ ಮೂರು ತಪ್ಪು ಮಾಡಿದ ದರ್ಶನ್; ಜಾಮೀನು ಅಷ್ಟು ಸುಲಭ ಇಲ್ಲವೇ ಇಲ್ಲ..!
ಹಾಗಾದ್ರೆ, ಚಿಂಗಾರಿಗಿರುವ ಆ ಮೂರು ಕಾನೂನು ಟ್ರಬಲ್ಸ್ ಯಾವ್ಯಾವು? ದಾಸನ ಜಾಮೀನಿಗೆ ಅಡ್ಡಿಯಾಗೋ ಕಂಟಕಗಲು ಏನೇನು? ಅನ್ನೋದನ್ನ ನೋಡ್ತಾ ಹೋದ್ರೆ.
ಕಂಟಕ ನಂಬರ್ 1: ಪರಪ್ಪನ ಅಗ್ರಹಾರದಲ್ಲಿನ ರಾಜಾತಿಥ್ಯ ವಿಚಾರ
ಮೊದಲಿಗೆ ದರ್ಶನ್ ಜಾಮೀನು ಸಲ್ಲಿಕೆಗೆ ಪರಪ್ಪನ ಅಗ್ರಹಾರದ ರಾಜಾತಿಥ್ಯದ ವಿಚಾರ ಮುಳುವಾಗುವ ಸಾಧ್ಯತೆ ಇದೆ.
ಕಂಟಕ ನಂಬರ್ 2: ಪ್ರಭಾವ ಬಳಸಿ ಸಾಕ್ಷ್ಯ ನಾಶ ಮಾಡುವ ಆರೋಪ
ಎರಡನೇಯದ್ದು, ದರ್ಶನ್ ಒಬ್ಬ ಸ್ಟಾರ್ ನಟ.. ದೊಡ್ಡ ಅಭಿಮಾನಿ ಬಳಗ ಇದೆ. ಹೀಗಾಗಿ ತನ್ನ ಪ್ರಭಾವ ಬಳಸಿ ಸಾಕ್ಷ್ಯ ನಾಶ ಮಾಡುವ ಆರೋಪ ಇದೆ.
ಕಂಟಕ ನಂಬರ್ 3: ಜಾಮೀನಿಗೆ ವಿಡಿಯೋ ಕಾಲ್ ಕಂಟಕ ಸಾಧ್ಯತೆ
ಅದಲ್ಲದೇ, ಜಾಮೀನು ಸಲ್ಲಿಕೆಗೆ ವಿಡಿಯೊ ಕಾಲ್. ಜೈಲೊಳಗೆ ಕೂತು ವಿಡಿಯೋ ಕಾಲ್ನಲ್ಲಿ ಮಾತನಾಡಿದ್ದು ಕಂಟಕವಾಗೋ ಎಲ್ಲಾ ಲಕ್ಷಣ ಕಾಣಿಸ್ತಿದೆ.
ಇದನ್ನೂ ಓದಿ: ಅಯ್ಯೋ..ಹಸಿವು..ಹಸಿವು! ಬಳ್ಳಾರಿಯಲ್ಲಿ ತೂಕದ ಲೆಕ್ಕಚಾರದಲ್ಲಿ ಊಟ.. ಜೈಲೂಟ ಸಾಲದೆ ಪರದಾಡುತ್ತಿರೋ ದಾಸ
ಈ ಮೂರು ಸಂಕಷ್ಟಗಳನ್ನ ಆಧಾರವಾಗಿಡ್ಕೊಂಡು ಆಕ್ಷೇಪಣೆ ಸಲ್ಲಿಸೋಕೆ ಪೊಲೀಸರು ಪ್ಲಾನ್ ಮಾಡ್ಕೊಂಡಿದ್ದಾರೆ. ಅತ್ತ, ಪಂಜರದೊಳಗಿನ ಹಕ್ಕಿಯಾಗಿರೋ ದರ್ಶನ್ಗೆ ಅದೊಂದೇ ಚಿಂತೆಯಂತೆ.
ಬಳ್ಳಾರಿ ಬಿಸಿ ತಾಳಲಾರದೇ ಜೈಲಲ್ಲಿ ಬೆಂಡಾಗಿಬಿಟ್ರಾ ದರ್ಶನ್..?
ಅತ್ತ, ಬಳ್ಳಾರಿ ಬಂಧಿಖಾನೆ ಜಗ್ಗುದಾದನಿಗೆ ಅದ್ಯಾಕೋ ಒಗ್ಗುತ್ತಿಲ್ಲ. ಬಳ್ಳಾರಿಯಲ್ಲಿ ಏರಿರುವ ಬಿಸಿ ತಾಳಲಾರದೇ ದಾಸ ಹೈರಾಣಾಗಿದ್ದಾರಂತೆ. ತನ್ನ ಸೆಲ್ನ ತಾನೇ ಕ್ಲೀನ್ ಮಾಡ್ಕೊಂಡಿದ್ದಾರಂತೆ. ಜೊತೆಗೆ ಹೆಚ್ಚಿನ ಬೇಡಿಕೆಗಳಿಗೆ ಡಿಮ್ಯಾಂಡ್ ಮಾಡ್ತಿದ್ದಾರಂತೆ. ಆದ್ರೆ, ಇದ್ಯಾವುದಕ್ಕೂ ಸೊಪ್ಪು ಹಾಕದ ಜೈಲು ಸಿಬ್ಬಂದಿ ಜೈಲಿನ ಶಿಸ್ತನ್ನು ಉಲ್ಲಂಘನೆ ಮಾಡುತ್ತಿದ್ದೀರಿ. ನಾವು ಕಾನೂನು ಪ್ರಕಾರ ಏನು ಸಾಧ್ಯವಾಗುತ್ತೋ ಅಷ್ಟು ಮಾತ್ರ ಕೊಡುತ್ತೇವೆ ಅಂತಾ ಎಚ್ಚರಿಕೆ ಕೊಟ್ಟಿದ್ದಾರಂತೆ.
ಇದನ್ನೂ ಓದಿ: ನಾನಿನ್ನೂ ಆರೋಪಿ ಅಪರಾಧಿ ಅಲ್ಲ.. ಬಳ್ಳಾರಿ ಜೈಲಲ್ಲಿ ದರ್ಶನ್ ಮತ್ತೊಂದು ಕಿರಿಕ್; ಏನಂದ್ರು?
ಅತ್ತ, ಮೂರು ದಿನಗಳು ರಜೆ ಇರುವ ಕಾರಣ ಟೈಂ ಪಾಸ್ ಮಾಡೋದೆ ಚಿಂಗಾರಿಗೆ ದೊಡ್ಡ ಸವಾಲು. ಹೀಗಾಗಿ ಹೊಸ ಪುಸ್ತಕಗಳಿಗೆ ದರ್ಶನ್ ಬೇಡಿಕೆ ಇಟ್ಟಿದ್ದಾರೆ. ಅದೇನೆ ಹೇಳಿ, ದರ್ಶನ್ಗೆ ದಿನದಿನಕ್ಕೂ ಕಾನೂನಿನ ಕಂಟಕ ಬಿಗಿಯಾಗ್ತಿದೆ. ಇದ್ರಿಂದ ದಾಸ ಹೇಗೆ ಬಿಡುಗಡೆಯಾಗ್ತಾರೆ ಅನ್ನೋದೇ ಸದ್ಯದ ಪ್ರಶ್ನೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ