15 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಸಾವು ಗೆದ್ದು ಬರಲಿಲ್ಲ ರುಕ್ಮಿಣಿ
ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಬಾಲಕಿ ಶವ ಇಟ್ಟು ಪ್ರತಿಭಟನೆ
ಕುಟುಂಬಸ್ಥರ ಮನವೊಲಿಸಲು ಶಾಸಕರು, ಅಧಿಕಾರಿಗಳ ಹರಸಾಹಸ
ಚಾಮರಾಜನಗರ: ಕಾಡುಪ್ರಾಣಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ 3 ವರ್ಷದ ಕಂದಮ್ಮ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿ ಮೃತಪಟ್ಟಿದೆ. ಯಳಂದೂರು ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಮಗುವಿನ ಶವ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರುಕ್ಕಿಣಿ (3) ಮೃತ ಮಗು.
ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಯರಿಯೂರು ಗ್ರಾಮದ ಮೂರು ವರ್ಷದ ಮಗು ರುಕ್ಕಿಣಿ ಮೇಲೆ 15 ದಿನಗಳ ಹಿಂದೆ ಕಾಡು ಪ್ರಾಣಿಯೊಂದು ದಾಳಿ ನಡೆಸಿತ್ತು. ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಈ ದಾಳಿ ನಡೆದಿತ್ತು. ದಾಳಿಗೊಳಗಾದ ಮಗು ಮನೆಯ ಅಂಗಳದಲ್ಲಿ ಬಿದ್ದಿತ್ತು. ಯಾವ ಪ್ರಾಣಿ ಮಗುವಿನ ಮೇಲೆ ದಾಳಿ ಮಾಡಿದೆ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಹೀಗಾಗಿ ಗ್ರಾಮಸ್ಥರು ಚಿರತೆ ದಾಳಿ ಎಂದು ಶಂಕಿಸಿದ್ದಾರೆ. ಆದರೆ ಮಗುವಿನ ಮೇಲೆ ನಾಯಿ ದಾಳಿ ನಡೆಸಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ವಾದಿಸುತ್ತಿದ್ದಾರೆ.
ಇನ್ನು, ಪ್ರತಿಭಟನಾಕಾರರ ಮನವೊಲಿಸಲು ಶಾಸಕ ಎ.ಆರ್. ಕೃಷ್ಣಮೂರ್ತಿ, ಪುಟ್ಟರಂಗಶೆಟ್ಟಿ ಹಾಗೂ ಮಾಜಿ ಶಾಸಕ ಎನ್. ಮಹೇಶ್ ಬರಬೇಕಾಯಿತು. ಮರಣೋತ್ತರ ಪರೀಕ್ಷೆ ಬಂದ ಬಳಿಕವೇ ಮಗುವಿನ ಮೇಲೆ ಯಾವ ಪ್ರಾಣಿ ದಾಳಿ ನಡೆದಿದೆ ಎಂಬುದು ತಿಳಿಯಲಿದೆ. ಶಾಸಕರು, ಸ್ಥಳೀಯರ ಮನವೊಲಿಕೆ ಬಳಿಕ ಮಗುವಿನ ಸಂಬಂಧಿಕರು ಅಂತ್ಯಕ್ರಿಯೆಗೆ ಒಪ್ಪಿಕೊಂಡಿದ್ದಾರೆ. ಮಾಜಿ ಶಾಸಕ ಎನ್. ಮಹೇಶ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮೃತ ರುಕ್ಮಿಣಿ ಮೇಲೆ ದಾಳಿ ನಡೆಸಿದ್ದು ಚಿರತೆ. ನಾಯಿಯ ಉಗುರಿಗೂ ಚಿರತೆ ಉಗುರಿಗೂ ವ್ಯತ್ಯಾಸವಿದೆ. ಘಟನೆ ನಡೆದ ದಿನ ಬಾಲಕಿ ತಂದೆ ಆತಂಕದಲ್ಲಿ ಏನೋ ಹೇಳಿಕೆ ನೀಡಿದ್ದಾರೆ. ಅರಣ್ಯ ಇಲಾಖೆ ಕಾನೂನು ಪ್ರಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ