ಹೈದರಾಬಾದ್: ಮಾಜಿ ಸಿಎಂ ವೈ.ಎಸ್​ ಜಗನ್​ಮೋಹನ್ ರೆಡ್ಡಿ ಅಧಿಕಾರಾವಧಿಯಲ್ಲಿ 30 ಸಾವಿರಕ್ಕೂ ಅಧಿಕ ಬಾಲಕಿಯರು, ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಆಂಧ್ರಪ್ರದೇಶದ ಡಿಸಿಎಎಂ ಪವನ್ ಕಲ್ಯಾಣ್ ಅವರು ಆರೋಪಿಸಿದ್ದಾರೆ.
ಎನ್​​ಟಿಆರ್​ ಜಿಲ್ಲೆಯಲ್ಲಿ ಕಾಣೆಯಾಗಿದ್ದ ಬಾಲಕಿ, ಮಹಿಳೆಯರ ಪ್ರಕರಣಕ್ಕೆ ಸಂಬಂಧಿಸಿದಂತೆ 18 ಕೇಸ್​ಗಳನ್ನು ಪರಿಹರಿಸಿದ್ದಕ್ಕಾಗಿ ವಿಜವಾಡದ ಸ್ಪೆಷಲ್ ಟಾಸ್ಕ್​ ಫೋರ್ಸ್​ ಹಾಗೂ ಗೃಹಸಚಿವೆ ವಂಗಲಪುಡಿ ಅನಿತಾ ಅವರಿಗೆ ಪವನ್ ಕಲ್ಯಾಣ್ ಅವರು ಧನ್ಯವಾದ ತಿಳಿಸಿದ್ದಾರೆ. ಇದೇ ವೇಳೆ ತಮ್ಮ ಎಕ್ಸ್​ ಅಕೌಂಟ್​ನಲ್ಲಿ ಈ ಹಿಂದಿನ ವೈ.ಎಸ್ ಜಗನ್​ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ನಾಪತ್ತೆ ಪ್ರಕರಣಗಳ ಬಗ್ಗೆ ಪವನ್ ಕಲ್ಯಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
/newsfirstlive-kannada/media/post_attachments/wp-content/uploads/2023/06/Jagan-Mohan-Reddy.jpg)
ಈ ಸಂಬಂಧ ಎಕ್ಸ್​ ಅಕೌಂಟ್​ನಲ್ಲಿ ಪೋಸ್ಟ್ ಮಾಡಿರುವ ಪವನ್ ಕಲ್ಯಾಣ್ ಅವರು, ಈ ಹಿಂದಿನ ವೈಸಿಪಿ ಸರ್ಕಾರದಲ್ಲಿ 30 ಸಾವಿರಕ್ಕೂ ಅಧಿಕ ಬಾಲಕಿಯರು, ಮಹಿಳೆಯರು ಕಾಣೆಯಾಗಿದ್ದರು. ಆದರೆ ಈ ಬಗ್ಗೆ ಒಂದೂ ಸ್ಟೇಟ್​​ಮೆಂಟ್​ ಕೂಡ ಜಗನ್​ಮೋಹನ್ ರೆಡ್ಡಿ ಸರ್ಕಾರ ನೀಡಿರಲಿಲ್ಲ. ಈಗ ಎಲ್ಲವೂ ಬದಲಾಗಿದ್ದು ಆಂಧ್ರದಲ್ಲಿ ಎನ್​​ಡಿಎ ನೇತೃತ್ವದ ಸರ್ಕಾರ ಹೊಸ ಕಾನೂನು ಜಾರಿ ಮಾಡಿದೆ. ಹೀಗಾಗಿಯೇ 18 ಪ್ರಕರಣಗಳನ್ನು ಪರಿಹರಿಸಿದ್ದಕ್ಕೆ ಹೆಮ್ಮೆ ಆಗುತ್ತಿದೆ. ರಾಜ್ಯದಲ್ಲಿ ಬಾಲಕಿಯರಿಗೆ, ಮಹಿಳೆಯರಿಗೆ ಸೇರಿದಂತೆ ಎಲ್ಲರಿಗೂ ಸುರಕ್ಷತೆ, ರಕ್ಷಣೆ ಇದೆ ಎಂದು ಪವನ್ ಕಲ್ಯಾಣ್ ಅವರು ಹೇಳಿದ್ದಾರೆ.
">November 19, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
ಜಗನ್ ಆಡಳಿತದಲ್ಲಿ 30,000ಕ್ಕೂ ಹೆಚ್ಚು ಹೆಣ್ಮಕ್ಕಳು ಮಿಸ್ಸಿಂಗ್ -ಆಂಧ್ರದಲ್ಲಿ DCM ಹೇಳಿಕೆಯಿಂದ ಹೊಸ ಸಂಚಲನ

LATEST UPDATES