newsfirstkannada.com

×

‘ಗೃಹಜ್ಯೋತಿ’ ವಿಸ್ತರಣೆಗೆ ಮುಂದಾದ ‘ಗ್ಯಾರಂಟಿ’ ಸರ್ಕಾರ; ಯಾವ್ಯಾವ ದೇವಾಲಯಗಳಿಗೆ ‘ಜ್ಯೋತಿ’?

Share :

Published October 26, 2023 at 6:47am

Update October 26, 2023 at 6:48am

    ರೈತರು ಮತ್ತು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾದ ಕಾಂಗ್ರೆಸ್​ ಸರ್ಕಾರ!

    ಶೀಘ್ರದಲ್ಲೇ ಸಿಗಲಿದೆ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್​​

    ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಿಗೂ ಗೃಹಜ್ಯೋತಿ

ಬೆಂಗಳೂರು: ಗೃಹಜ್ಯೋತಿ ಕಾಂಗ್ರೆಸ್​ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ರಾಜ್ಯದ ಕೋಟಿ ಕೋಟಿ ಮನೆಗಳಿಗೆ ಉಚಿತವಾಗಿ ಬೆಳಕು ನೀಡ್ತಿರೋ ಈ ಯೋಜನೆ. ದೇವರ ಅಂಗಳಕ್ಕೂ ಕಾಲಿಡಲಿದೆ. ಅಂದ್ರೆ ಮುಜರಾಯಿ ಇಲಾಖೆಯ ಅಧೀನದಲ್ಲಿ ಬರೋ ದೇವಾಲಯಗಳಿಗೂ ಶೀಘ್ರದಲ್ಲೇ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್​​ ಸಿಗಲಿದೆ. ಕೋಟಿ ಕುಟುಂಬಗಳ ಮನೆ ಮನಗಳಿಗೆ ಬೆಳಕು ನೀಡ್ತಿರೋ ಯೋಜನೆ ಗೃಹಜ್ಯೋತಿ ಆಗಿದೆ.

ಈ ಯೋಜನೆಯನ್ನ ರಾಜ್ಯದ ಸಾಕಷ್ಟು ಮಂದಿ ಬಳಸುತ್ತಿದ್ದಾರೆ. 200 ಯೂನಿಟ್​​ನಷ್ಟು ಉಚಿತವಾಗಿ ವಿದ್ಯುತ್​ ಪಡೆಯುತ್ತಿದ್ರೂ ಕೆಲವರು ಯೋಜನೆಯ ವಿರುದ್ಧ ಕಿಡಿಕಾರ್ತಿದ್ದಾರೆ. ಇತ್ತೀಚಿಗೆ ಅಪಸ್ವರವೂ ಕೇಳಿ ಬರ್ತಿದೆ. ಉಚಿತ ಯೋಜನೆ ಅಂತ ಲೋಡ್​ ಶೆಡ್ಡಿಂಗ್​ ಮಾಡ್ತಿದ್ದಾರೆ ಅಂತ ರೈತರು ಮತ್ತು ವಿಪಕ್ಷಗಳ ಕೆಂಗಣ್ಣಿಗೆ ಸರ್ಕಾರ ಗುರಿಯಾಗಿದೆ. ಇದರ ಬೆನ್ನಲ್ಲೇ ಕೈ ಪಾಳಯ ಮತ್ತೊಂದು ನಿರ್ಧಾರಕ್ಕೆ ಮುಂದಾಗಿದೆ. ಗೃಹಜ್ಯೋತಿ ಜಾರಿಯಾಗಿ 4 ತಿಂಗಳಿಗೆ ಯೋಜನೆಯ ವಿಸ್ತರಣೆಗೆ ಮುಂದಾಗಿದೆ.

ಅದುವೇ ಮುಜರಾಯಿ ಇಲಾಖೆಗೆ ಸೇರುವ ಆಯ್ದ ದೇವಾಲಯಗಳಿಗೂ ಗೃಹಜ್ಯೋತಿ ಯೋಜನೆಯನ್ನ ವಿಸ್ತರಿಸೋದು. ಮುಜರಾಯಿ ಇಲಾಖೆ ಅಧೀನದಲ್ಲಿ ಬರುವ ಸಿ ಗ್ರೇಡ್‌ ದೇವಾಲಯಗಳು, ಅಂದ್ರೆ ವಾರ್ಷಿಕ 5 ಲಕ್ಷ ರೂಪಾಯಿಗೂ ಕಡಿಮೆ ಆದಾಯ ಇರುವ ದೇವಾಲಯಗಳಿಗೆ ಉಚಿತ ವಿದ್ಯುತ್‌ ಸೌಕರ್ಯ ದೊರೆಯಲಿದೆ. ರಾಜ್ಯದಲ್ಲಿ ಬರೊಬ್ಬರಿ 34,219 ದೇವಸ್ಥಾನಗಳು ಗ್ರೇಡ್-ಸಿ ನಲ್ಲಿ ಬರುತ್ತವೆ.

ಅಷ್ಟೂ ದೇವಾಲಯಗಳಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲೇ ಇದ್ದು, ಅವರು ಬಂದ ಬಳಿಕ ಮುಜರಾಯಿ ಸಚಿವರು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಿದ್ದಾರೆ. ಇನ್ನು ಈ ಮನವಿಗೆ ಸಿಎಂ ಅಸ್ತು ಅಂದ್ರೆ 34,700ಕ್ಕೂ ಅಧಿಕ ಸಿ ಗ್ರೇಡ್ ದೇವಸ್ಥಾನಗಳು ಗೃಹ ಜ್ಯೋತಿ ಪ್ರಯೋಜನ ಪಡೆಯಲಿವೆ. ನೀರಿನ ಬಿಲ್, ಕರೆಂಟ್ ಬಿಲ್ ಕಟ್ಟುವುದಕ್ಕೂ ಪರದಾಡುತ್ತಿರುವ ಹಲವು ದೇವಸ್ಥಾನಗಳಿಗೆ ಈ ಯೋಜನೆಯಿಂದ ಪ್ರಯೋಜನವಾಗಲಿದೆ. ಈ ಮಧ್ಯೆ ದೇವಾಲಯಗಳಿಗೆ ಉಚಿತ ವಿದ್ಯುತ್‌ ನೀಡುವ ಮೂಲಕ ಕರ್ನಾಟಕ ಕಾಂಗ್ರೆಸ್‌, ಬಿಜೆಪಿಗೆ ನೇರ ಕೌಂಟರ್‌ ಕೊಟ್ಟಿದೆ. ಈ ಸಂಬಂಧ ಟ್ವೀಟ್‌ ಮಾಡಿರುವ ಕೆಪಿಸಿಸಿ ಘಟಕ, ಇದುವೇ ನಿಜವಾದ ಹಿಂದುತ್ವ ಅಂತಾ ಬಿಜೆಪಿಯ ಕಾಲೆಳೆದಿದೆ.

ಧಾರ್ಮಿಕ ಪರಿಷತ್​ ಮೀಟಿಂಗ್​ ಆಯ್ತು. ಆ ಸಂದರ್ಭದಲ್ಲಿ ಕೆಲವೊಂದು ಸದಸ್ಯರು ಸಿ ಗ್ರೇಡ್​​ ದೇವಸ್ಥಾನಗಳಿಗೆ ಗೃಹಜ್ಯೋತಿ ಕೊಡಬೇಕು ಎಂದು ಮುಖ್ಯಮಂತ್ತಿಗಳ ಜತೆ ಚರ್ಚೆ ಮಾಡಿದ್ದಾರೆ. 34,700 ಕ್ಕೂ ಅಧಿಕ ಸಿ ಗ್ರೇಡ್ ದೇವಸ್ಥಾನಗಳು ಗೃಹ ಜ್ಯೋತಿ ಪ್ರಯೋಜನ ಪಡೆಯಲಿವೆ. ಈ ಕುರಿತು ಒಂದು ಲೇಟರ್​ ಕೂಡ ರೆಡಿ ಮಾಡಿದ್ದೇವೆ.

– ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಧರ್ಮದ ಹೆಸರಲ್ಲಿ ರಾಜಕಾರಣ ಮಾಡುವ ಬಿಜೆಪಿ ತನ್ನ ಆಡಳಿತಾವಧಿಯಲ್ಲಿ ಐತಿಹಾಸಿಕ ದೇವಾಲಯಗಳನ್ನ ಒಡೆದು ಹಾಕಿದ ಕರಾಳ ಇತಿಹಾಸ ಹೊಂದಿದೆ. ನಮ್ಮ ಸರ್ಕಾರ ದೇವಾಲಯಗಳಿಗೆ ಸೌಲಭ್ಯ ನೀಡುತ್ತಿದೆ. ಇದೇ ನಮ್ಮ ನೈಜ ಧಾರ್ಮಿಕತೆಗೂ ಬಿಜೆಪಿಯ ಡೋಂಗಿ ಹಿಂದುತ್ವಕ್ಕೂ ಇರುವ ವ್ಯತ್ಯಾಸ. ಬಿಜೆಪಿಗೆ ಬೇಕಿರೋದು ಧರ್ಮ ಶ್ರದ್ಧೆಯಲ್ಲ, ಧರ್ಮದ ಹೆಸರಿನ ದ್ವೇಷದ ರಾಜಕಾರಣ. ಇನ್ನು ಗೃಹಜ್ಯೋತಿ ಜೊತೆಗೆ ಉಚಿತ ನೀರನ್ನೂ ಪೂರೈಸಲು ಸರ್ಕಾರದ ಮುಂದೆ ಬೇಡಿಕೆ ಇಡಲಿದ್ದು, ಸಿಎಂ ನಿರ್ಧಾರವೇ ಪೈನಲ್​ ಆಗಲಿದೆ. ವಿದ್ಯುತ್‌ ಬಿಲ್‌ ಪಾವತಿಗೂ ಪರದಾಡುತ್ತಿದ್ದ ಗ್ರಾಮೀಣ ಭಾಗದ ಹಲವು ದೇವಾಲಯಗಳಿಗೆ ಈ ಯೋಜನೆಯಿಂದ ಅನುಕೂಲವಂತೂ ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಗೃಹಜ್ಯೋತಿ’ ವಿಸ್ತರಣೆಗೆ ಮುಂದಾದ ‘ಗ್ಯಾರಂಟಿ’ ಸರ್ಕಾರ; ಯಾವ್ಯಾವ ದೇವಾಲಯಗಳಿಗೆ ‘ಜ್ಯೋತಿ’?

https://newsfirstlive.com/wp-content/uploads/2023/10/SIDDU-15.jpg

Load More