newsfirstkannada.com

×

VIDEO: ಕೇಶಮುಂಡನ ಮಾಡಿಸಿ ಹಿಂದೂ ಧರ್ಮಕ್ಕೆ ಮತಾಂತರವಾದ 35 ಮುಸ್ಲಿಂ ಕುಟುಂಬ; ಈ ನಿರ್ಧಾರಕ್ಕೆ ಕಾರಣವೇನು?

Share :

Published August 2, 2023 at 6:12pm

Update August 2, 2023 at 6:17pm

    ಹಿಂದೂ ಧರ್ಮಕ್ಕೆ ಮತಾಂತರಗೊಂಡ 35 ಮುಸ್ಲಿಂ ಕುಟುಂಬ

    ಕೇಶಮುಂಡನ ಮಾಡಿಸಿದ 190 ಜನರಿಂದ ಹೋಮ, ಹವನ

    4 ತಲೆಮಾರುಗಳ ಹಿಂದೆ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದರು

ಭೋಪಾಲ್‌: ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ 35 ಮುಸ್ಲಿಂ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಕೇಶಮುಂಡನ ಮಾಡಿಸಿದ 190 ಜನರು ನರ್ಮದಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಹಿಂದೂ ಧರ್ಮದ ವಿಧಿವಿಧಾನಗಳನ್ನು ಪಾಲಿಸುವ ಸಂಕಲ್ಪ ಮಾಡಿದ್ದಾರೆ. ಇದೇ ವೇಳೆ ನರ್ಮದಾ ನದಿಯ ದಂಡೆಯಲ್ಲಿ ಹೋಮ, ಹವನಗಳು ನೆರವೇರಿದೆ.

ಇನ್ನೂ ಅಚ್ಚರಿಯ ಸಂಗತಿ ಏನಂದ್ರೆ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಈ 35 ಮುಸ್ಲಿಂ ಕುಟುಂಬಸ್ಥರು ತಲತಲಾಂತರಗಳಿಂದ ಚಾಮುಂಡಿ ಮಾತೆಯನ್ನು ಪೂಜಿಸುತ್ತಿದ್ದರು. ಇವರ ಮದುವೆ ಆಚರಣೆಗಳಲ್ಲೂ ಹಿಂದೂ ಸಂಪ್ರದಾಯವನ್ನೇ ಆಚರಿಸಲಾಗುತ್ತಿತ್ತು. ಈ ಕುಟುಂಬದ ಸದಸ್ಯರು ನಾಲ್ಕು ತಲೆಮಾರುಗಳ ಹಿಂದೆ ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರಂತೆ. ಇದೀಗ ಯುವಪೀಳಿಗೆಗೆ ಹಿಂದೂ ಧರ್ಮದ ಮೇಲೆ ಒಲವು ಬಂದಿದ್ದು ವಾಪಸ್ ಮುಸ್ಲಿಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎನ್ನಲಾಗಿದೆ. ನಾಲ್ಕು ತಲೆಮಾರುಗಳ ನಂತರ 35 ಮುಸ್ಲಿಂ ಕುಟುಂಬಗಳು ಮತ್ತೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, ನರ್ಮದಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲಾಗಿದೆ.

ಸಂತ ಆನಂದಗಿರಿ ಮಹಾರಾಜ್ ಅವರ ಪ್ರಕಾರ, ಈ ಕುಟುಂಬಗಳು ಮೂಲತಃ ರತ್ಲಂ ಜಿಲ್ಲೆಯ ಅಂಬಾ ಗ್ರಾಮದಿಂದ ಬಂದವರು. ಅವರು ವೃತ್ತಿಯಿಂದ ಮದರಿಗಳು, ಅವರು ಕರಡಿಗಳು, ಮಂಗಗಳು ಇತ್ಯಾದಿಗಳ ಪ್ರದರ್ಶನಗಳನ್ನು ಪ್ರದರ್ಶಿಸುವ ಮೂಲಕ ಜೀವನ ಸಾಗಿಸುತ್ತಿದ್ದರು. 200 ವರ್ಷಗಳ ಹಿಂದೆ ಮುಸ್ಲಿಂ ಜಮೀನ್ದಾರರು ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿದರು. ಅಲೆಮಾರಿ ಬುಡಕಟ್ಟುಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿದರು ಎನ್ನಲಾಗಿದೆ. ಇಷ್ಟಾದ್ರೂ ಈ ಬುಡಕಟ್ಟಿನ ಜನರು ತಮ್ಮ ಕುಟುಂಬ ದೇವತೆಗಳನ್ನು ಪೂಜಿಸುವುದನ್ನು ಮುಂದುವರೆಸಿದರು. ಚಾಮುಂಡಿ ಮಾತೆಯನ್ನು ಈ ಬುಡಕಟ್ಟು ಜನಾಂಗದವರು ಪೂಜಿಸುತ್ತಿದ್ದಾರೆ. ಈಗ ರಾಮ್‌ ಸಿಂಗ್ ಎಂದು ಬದಲಾಗಿರುವ ಮೊಹಮ್ಮದ್ ಶಾ ಪೂರ್ವಜರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಇದೀಗ ಹಿಂದೂ ಧರ್ಮದ ಮಹತ್ವವನ್ನು ಅರಿತು ವಾಪಸ್ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಕೇಶಮುಂಡನ ಮಾಡಿಸಿ ಹಿಂದೂ ಧರ್ಮಕ್ಕೆ ಮತಾಂತರವಾದ 35 ಮುಸ್ಲಿಂ ಕುಟುಂಬ; ಈ ನಿರ್ಧಾರಕ್ಕೆ ಕಾರಣವೇನು?

https://newsfirstlive.com/wp-content/uploads/2023/08/Muslim-Converter.jpg

Load More