ಕಳೆದ ಸೆಪ್ಟೆಂಬರ್ನಲ್ಲಿ ಬಂಧನವಾಗಿದ್ದ ಮೀನುಗಾರರು
ಬ್ರಿಟನ್ ಅಧಿಕಾರಿಗಳು ವಿಧಿಸಿದ ದಂಡ ಎಷ್ಟು ಗೊತ್ತಾ?
ಮೀನುಗಾರರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ
ಕಳೆದ ಸೆಪ್ಟೆಂಬರ್ ತಿಂಗಳನಲ್ಲಿ ಬ್ರಿಟಿಷ್ ಹಿಂದೂ ಮಹಾಸಾಗರ ಪ್ರಾಂತ್ಯದ ಬಳಿ ಮೀನುಗಳನ್ನು ಹಿಡಿಯಲು ತಮಿಳುನಾಡಿನ ಮೀನುಗಾರರು ಹೋಗಿದ್ದರು. ಈ ವೇಳೆ 36 ಮೀನುಗಾರರನ್ನ ಬ್ರಿಟನ್ ಅಧಿಕಾರಿಗಳು ಬಂಧಿಸಿದ್ದು 26 ಲಕ್ಷ ದಂಡವನ್ನ ವಿಧಿಸಿತ್ತು.
ಒಂದು ತಿಂಗಳ ನಂತರ ಭಾರತೀಯ ಕರಾವಳಿ ರಕ್ಷಣಾ ಪಡೆ ದಂಡವನ್ನು ಪಾವತಿಸಿ 36 ಮೀನುಗಾರರನ್ನು ಸುರಕ್ಷಿತವಾಗಿ ಕರೆತಂದಿದೆ. ಬಿಡುಗಡೆಯಾದ 36 ಮೀನುಗಾರರನ್ನು ಕೇರಳದ ಮಿಝಿಂಜಂ ಲೈಟ್ಹೌಸ್ ಬಳಿ ಕರೆತಂದಿದ್ದು, ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. 36 ಮೀನುಗಾರರನ್ನ ವಿಚಾರಣೆಗೆ ಒಳಪಡಿಸಿದ ನಂತರ ತಮಿಳುನಾಡಿನ ತೆಂಗೈಪಟ್ಟಣಂಗೆ ಸುರಕ್ಷಿತವಾಗಿ ಹಸ್ತಾಂತರ ಮಾಡಲಾಗುತ್ತದೆ ಎಂದು ರಕ್ಷಣಾ ಪಡೆ ತಿಳಿಸಿದೆ.
ಸುಮಾರು 640,000 ಚದರ ಕಿಲೋ ಮೀಟರ್ ಸಾಗರವನ್ನು ಒಳಗೊಂಡಿರುವ 58 ದ್ವೀಪಗಳ ದ್ವೀಪಸಮೂಹ ಬ್ರಿಟಿಷ್ ಇಂಡಿಯನ್ ಒಷನ್ ಟೆರಿಟರಿ (BIOT) ಬಳಿ ಸುಮಾರು 230 ನಾಟಿಕಲ್ ಮೈಲುಗಳಷ್ಟು ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ