7 ತಿಂಗಳಿಂದ ಇಡೀ ಜಿಲ್ಲೆಯಲ್ಲಿ ಭಾರೀ ಆತಂಕ ಸೃಷ್ಠಿಸಿದ ಚಿರತೆ
35 ಚಿರತೆಗಳನ್ನು ಹಿಡಿದಿದ್ದರೂ ಆ ನರಭಕ್ಷಕ ಚಿರತೆ ಯಾವುದು?
ಮೂರು ಚಿರತೆಗಳ ಮೇಲೆ ಅನುಮಾನ ವ್ಯಕ್ತಪಡಿಸಿದ ಸಿಬ್ಬಂದಿ
ಭೋಪಾಲ್: ಕಳೆದ 7 ತಿಂಗಳಿನಿಂದ ಮಧ್ಯಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನರಭಕ್ಷಕ ಚಿರತೆಯೊಂದು ಭಾರೀ ಆತಂಕವನ್ನು ಸೃಷ್ಟಿ ಮಾಡಿದ್ದು ಇಲ್ಲಿವರೆಗೆ ಬರೋಬ್ಬರಿ 15 ಜನರನ್ನು ಬಲಿ ಪಡೆದಿದೆ. ಜೊತೆಗೆ 50ಕ್ಕೂ ಹೆಚ್ಚು ಜನರಿಗೆ ಗಾಯಗೊಳಿಸಿದೆ. ಈ ಸಂಬಂಧ ಅಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ಸುಮಾರು 35 ಚಿರತೆಗಳನ್ನು ಹಿಡಿದಿದ್ದರೂ ಆ ನರಭಕ್ಷಕ ಚಿರತೆ ಮಾತ್ರ ಸಿಗುತ್ತಿಲ್ಲವೆಂದು ಹೇಳುತ್ತಿದ್ದಾರೆ.
ಸದ್ಯ ನರಭಕ್ಷಕ ಚಿರತೆಯಿಂದ ಜಿಲ್ಲೆಯ ರೈತರು, ಮಹಿಳೆಯರು ಹಾಗೂ ಮಕ್ಕಳು ಭಾರೀ ಆತಂಕಗೊಂಡಿದ್ದು ಮನೆಯಿಂದ ಹೊರ ಬರಲು ಭಯಪಡುತ್ತಿದ್ದಾರೆ. ಕಳೆದ ಫೆಬ್ರವರಿಯಿಂದ ಇಲ್ಲಿವರೆಗೆ 15 ಜನರ ಸಾವಿಗೆ ಹಾಗೂ 50 ಮಂದಿಗೆ ಗಾಯಗಳನ್ನು ಮಾಡಿರುವ ಚಿರತೆ ಮಾತ್ರ ಬೋನಿಗೆ ಬೀಳುತ್ತಿಲ್ಲ. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗೆ ಇದು ತಲೆ ನೋವಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿ. ಹೀಗಾಗಿ ಜಿಲ್ಲೆಯಲ್ಲಿ ಇನ್ನು ಹೆಚ್ಚಿನ ಶೋಧನೆಯನ್ನು ಅಧಿಕಾರಿಗಳು ಕೈಗೊಂಡಿದ್ದಾರೆ ಎನ್ನಲಾಗಿದೆ.
ಗುರುವಾರ, ಶುಕ್ರವಾರದಂದು ಜಿಲ್ಲೆಯ ಎರಡು ಗ್ರಾಮಗಳಲ್ಲಿ ಒಂದೊಂದು ಚಿರತೆ ಹಿಡಿಯಲಾಗಿದೆ. ಇಲ್ಲಿವರೆಗೆ ಆ ನರಭಕ್ಷಕ ಚಿರತೆಯನ್ನು ಹಿಡಿಯುವುದಕ್ಕಾಗಿ ಒಟ್ಟು 35 ಚಿರತೆಗಳನ್ನು ಸೆರೆ ಹಿಡಿದಿದ್ದು 5 ಚಿರತೆಗಳು ಸಾವನ್ನಪ್ಪಿವೆ. ಆದ್ರೆ ಇವುಗಳಲ್ಲಿ ಯಾವುದು ನರಭಕ್ಷಕ ಎಂದು ಖಚಿತ ಪಡಿಸಿಕೊಳ್ಳಲಾಗುತ್ತಿಲ್ಲ ಎನ್ನಲಾಗುತ್ತಿದೆ.
ಜಿಲ್ಲೆಯ ಅರಣ್ಯಾಧಿಕಾರಿ ಅರುಣ್ ಕುಮಾರ್ ಸಿಂಗ್ ಮಾತನಾಡಿ, ಇನ್ನು ಆ ನರಭಕ್ಷಕ ಚಿರತೆಗಾಗಿ ಹುಡುಕಾಟ ನಡೆಯುತ್ತಿದೆ. ಚಿರತೆ ದಾಳಿಗಳನ್ನು ತಡೆಯಲು ಸಾಕಷ್ಟು ಮುಂಜಾಗ್ರತೆ ವಹಿಸಿದರು ಕೆಲವೊಂದು ಕಡೆ ನಡೆಯುತ್ತಲಿವೆ. ಈಗಾಗಲೇ ಸೆರೆ ಹಿಡಿಯಲಾದ ಚಿರತೆಗಳನ್ನು ಕಾನ್ಪುರ್, ಗೋರಾಖ್ಪುರ್, ಲಕ್ನೋದ ಝೂಗಳಿಗೆ ರವಾನೆ ಮಾಡಲಾಗಿದೆ. ಇವುಗಳಲ್ಲಿ ಮೂರು ಚಿರತೆಗಳ ಮೇಲೆ ಅನುಮಾನ ವ್ಯಕ್ತಪಡಿಸಲಾಗಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ