newsfirstkannada.com

ಪ್ರೀತಿಸಿದ ಹುಡುಗಿ ಬೇರೆಯವರ ಜೊತೆ ಮದುವೆಗೆ ರೆಡಿ; ಕೋಪಗೊಂಡ ಹುಚ್ಚು ಪ್ರೇಮಿ ಮಾಡಿದ್ದೇನು ಗೊತ್ತಾ..?

Share :

11-09-2023

    ಪ್ರೀತಿಸಿದ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಯುವಕ

    ಕೊಲೆ ಮಾಡಿ ಭೀಮಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಆರೋಪಿ!

    ಪೊಲೀಸ್ ಆಗಬೇಕು ಅಂದುಕೊಂಡಿದ್ದ ಯುವಕ ಹೀಗೆ ಮಾಡಿದ್ದೇಕೆ..?

ಕಲಬುರಗಿ: ಈ ಯುವತಿಗೆ ಗಂಡು ನೋಡಿ ಇನ್ನೇನು ಮದುವೆ ಮಾಡಿ ಕೊಡಬೇಕು ಅಂತಾ ಇಡೀ ಕುಟುಂಬ ನಿರ್ಧರಿಸಿತ್ತು. ಹುಡುಗನನ್ನ ಕೂಡ ಹುಡುಕಿ ಕಳೆದ ನಾಲ್ಕೈದು ದಿನಗಳ ಹಿಂದೆಯೆಷ್ಟೆ ನಿಶ್ಚಿತಾರ್ಥ ಕೂಡ ಮಾಡಿದ್ದರು. ಆದ್ರೆ ಈ ವಿಚಾರ ತಿಳಿಯುತ್ತಿದ್ದಂತೆ ಆ ಯುವತಿಯನ್ನು ಪ್ರೀತಿಸುತ್ತಿದ್ದ ಪ್ರೇಮಿಯೊಬ್ಬ ಆಕೆಯನ್ನು ಮನೆಯಿಂದ ಕರೆದೊಯ್ದು ಕೊಲೆ ಮಾಡಿ ಬಳಿಕ ತಾನು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಬೇರೆ ಯುವಕನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮೃತ ಯುವತಿ!

ಸವಿತಾ ರಾಠೋಡ್ (35) ಮೃತ ಯುವತಿ. ಸವಿತಾ ರಾಠೋಡ್ ಮೂಲತಃ ಯಾದಗಿರಿ‌ ಜಿಲ್ಲೆಯ ಮುದ್ನಾಳ್ ತಾಂಡಾದ ನಿವಾಸಿ. ಮೊನ್ನೆಯಷ್ಟೇ ಎಂದಿನಂತೆ ಮೃತ ಸವಿತಾ ಮನೆ ಕೆಲಸ ಮುಗಿಸಿಕೊಂಡು ಜಮೀನಿನಲ್ಲಿ ತೊಗರಿ ಕಳೆ‌ ಕಿತ್ತಲು ಹೋಗುತ್ತಿದ್ದಳು. ಈ ವೇಳೆ ಸವಿತಾಳ ಅಳಿಯಾ ಸಚಿನ್​ಗೆ ಜಮೀನಿಗೆ ಬೈಕ್​ನಲ್ಲಿ ಬಿಟ್ಟು ಬಾ ಎಂದು ಕೇಳಿಕೊಂಡಿದ್ದಳಂತೆ. ಆದ್ರೆ ಸಚಿನ್ ಸವಿತಾಳನ್ನು ಕಂಚಗಾರಹಳ್ಳಿ ಕ್ರಾಸ್ ಬಳಿ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಕುತ್ತಿಗೆ ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇನ್ನೂ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸವಿತಾಳನ್ನು ಕಲಬುರಗಿ‌ಯ ಖಾಸಗಿ‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸವಿತಾ ಮೃತಪಟ್ಟಿದ್ದಾಳೆ.

ಇದನ್ನು ಓದಿ: ಕೆ.ಎಲ್​ ರಾಹುಲ್​ ಸ್ಟ್ರಾಂಗ್​ ಕಮ್​ಬ್ಯಾಕ್​​.. ಪಾಕ್​ ವಿರುದ್ಧ ಶತಕ ಸಿಡಿಸಿ ದಾಖಲೆ ಬರೆದ ಕನ್ನಡಿಗ

ಕೊಲೆಯಾದ ಸವಿತಾಗೆ ತಂದೆ ಹಾಗೂ ತಾಯಿ ಇಲ್ಲದ ಕಾರಣ ವಿಕಲಚೇತನ ಸಹೋದರನ ಜೊತೆ ಮುದ್ನಾಳ ತಾಂಡಾದಲ್ಲಿ ವಾಸವಾಗಿದ್ದಳು. ಜಮೀನುವೊಂದರಲ್ಲಿ‌ ಸವಿತಾ ಕೆಲಸ ಮಾಡಿಕೊಂಡು ಜೀವನ‌ ನಡೆಸುತ್ತಿದ್ದಳು. ಸಚಿನ್​ ಹಾಗೂ ಸವಿತಾ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರಂತೆ. ಈ ಇವರಿಬ್ಬರ ಪ್ರೀತಿ ವಿಚಾರ ಯಾರಿಗೂ ಗೋತ್ತಿರಲಿಲ್ಲ. ಹೀಗಾಗಿ ತಂದೆ ತಾಯಿ ಇಲ್ಲದ ಸವಿತಾಳನ್ನ ಒಂದು ಒಳ್ಳೆಯ ಕಡೆ ನೋಡಿ ಮದುವೆ ಮಾಡಿಸಬೇಕು ಅಂತಾ ಸಂಬಂಧಿಕರು ವಧುವನ್ನು ನೋಡಿದ್ದಾರೆ. ಅಲ್ಲದೇ ಕಳೆದ ನಾಲ್ಕೈದು ದಿನದ ಹಿಂದೆ ಸವಿತಾಳ ನಿಶ್ಚಿತಾರ್ಥ ಕೂಡ ಆಗಿದೆಯಂತೆ. ಸವಿತಾಳ ನಿಶ್ಚಿತಾರ್ಥ ಸಚಿನ್​​​ಗೆ ತಿಳಿಯುತ್ತಿದ್ದಂತೆ ಕೋಪಗೊಂಡಿದ್ದಾನೆ. ಬಳಿಕ ಆಕೆಯನ್ನು ಕರೆದೊಯ್ದು ಅತ್ಯಾಚಾರ ಎಸಗಿ ಕೊಲೆಗೈದಿದ್ದಾನೆ ಅಂತಾ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಬಂಧಿತ ಆರೋಪಿ ಪೊಲೀಸ್ ಆಗಬೇಕು ಅಂದುಕೊಂಡಿದ್ದ!

ಇನ್ನೂ, ಸವಿತಾಳ ಕೊಲೆ ಮಾಡಿದ ಬಳಿಕ ಸಚಿನ್​​ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಸಿದ್ದನಂತೆ. ಆದ್ರೆ ಅದೃಷ್ಟವಶಾತ್ ಸ್ಥಳೀಯರ ಸಹಾಯದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿ ಸಚಿನ್ ಜೀವನದಲ್ಲಿ ಪೊಲೀಸ್ ಆಗಬೇಕು ಎಂದು ಅಂದುಕೊಂಡಿದ್ದ. ಹೀಗಾಗಿ ಪೊಲೀಸ್ ಕಾನ್ಸ್ಟೇಬಲ್ ಹುದ್ದಗೆ ಅರ್ಜಿ ಕೂಡ ಹಾಕಿದ್ದನಂತೆ. ಅಲ್ಲದೆ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ಪರೀಕ್ಷೆಯನ್ನು ನಿನ್ನೆ ಬರೆಯಬೇಕಿತ್ತು. ಆದ್ರೆ ಸವಿತಾಳನ್ನು ಕೊಲೆ ಮಾಡಿ ಬಳಿಕ ತಾನೂ ಭೀಮಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ ಕೊನೆಗೆ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಸದ್ಯ ಈ ಸಂಬಂಧ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ವಿಚಾರಣೆ ನಡೆಸೋದಕ್ಕೆ ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತಿಸಿದ ಹುಡುಗಿ ಬೇರೆಯವರ ಜೊತೆ ಮದುವೆಗೆ ರೆಡಿ; ಕೋಪಗೊಂಡ ಹುಚ್ಚು ಪ್ರೇಮಿ ಮಾಡಿದ್ದೇನು ಗೊತ್ತಾ..?

https://newsfirstlive.com/wp-content/uploads/2023/09/death-52.jpg

Load More