newsfirstkannada.com

ನಂಬಿ ಬಂದವಳ ಕೈ ಹಿಡಿದ ಅಜ್ಜ; 35 ವರ್ಷದ ಮಹಿಳೆಯನ್ನು ಮದುವೆಯಾದ 75 ವರ್ಷದ ವೃದ್ಧ

Share :

09-09-2023

  ನಂಬಿ ಬಂದವಳಿಗೆ ಮಾಂಗಲ್ಯ ಧಾರಣೆ ಮಾಡಿದ ವೃದ್ಧ

  ಮೇಲೂರು ಗ್ರಾಮದಲ್ಲಿ ನಡೆದ ಅಪರೂಪದ ಘಟನೆ ಇದು!

  ತನ್ನ ಲಾಲನೆ, ಪಾಲನೆಗೆ ಯುವತಿಯನ್ನ ಮದುವೆಯಾಗಿದ ಅಜ್ಜ

ಚಿಕ್ಕಬಳ್ಳಾಪುರ: ನಂಬಿ ಬಂದವಳಿಗೆ ಮಾಂಗಲ್ಯ ಧಾರಣೆ ಮಾಡಿ, ವೃದ್ಧಾಪ್ಯ ವಯಸ್ಸಿನಲ್ಲಿ ಅರುಂಧತಿ ನಕ್ಷತ್ರ ತೋರಿಸುತ್ತಿರುವ 75 ವರ್ಷದ ವೀರಣ್ಣ. ಹುಣಸೇಮರ ಮುಪ್ಪಾದರೂ ಹುಳಿ ಮುಪ್ಪೆ ಎನ್ನುವ ಹಾಗೆ ವೃದ್ಧಾಪ್ಯದಲ್ಲಿಯೂ ಸೊಲ್ಲಾಪುರ ಮೂಲದ ಚಿಕ್ಕಬಳ್ಳಾಪುರ ನಿವಾಸಿ 35 ವರ್ಷದ ಅನುಶ್ರೀ ಎಂಬ ಮಹಿಳೆಯ ಜೊತೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

75 ವರ್ಷದ ವೀರಣ್ಣನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆತನ ಪತ್ನಿ ಮೃತಪಟ್ಟು ಐದಾರು ವರ್ಷಗಳೇ ಕಳೆದಿವೆ. ಸಿರಿವಂತರಿಗೆ ಕೊಟ್ಟು ಮಗಳಿಗೆ ವಿವಾಹ ಮಾಡಿಕೊಟ್ಟಿದ್ದಾನೆ. ಮಗ-ಮಗಳು ಯಾರೂ ವೀರಣ್ಣನನ್ನು ನೋಡಿಕೊಳ್ಳುತ್ತಿರಲಿಲ್ಲ. ವೃದ್ಧನಿಗೆ ಹೃದಯ ಸಮಸ್ಯೆ, ಬಿಪಿ, ಶುಗರ್ ಇದೆಯಂತೆ. ಲಾಲನೆ, ಪಾಲನೆ, ಪೋಷಣೆಗೋಸ್ಕರ ಮತ್ತೊಂದು ಮದುವೆಯಾಗುವ ಆಸೆ ವ್ಯಕ್ತಪಡಿಸಿದ್ದ. ತಂದೆ, ತಾಯಿ, ಬಂಧು-ಬಳಗ ಇಲ್ಲದೇ ಮಹಿಳೆ ಅನುಶ್ರೀ ಒಂಟಿಯಾಗಿದ್ದಳು. ಪ್ರೀತಿಸಿ ಮದುವೆಯಾಗಿದ್ದ ಗಂಡ ಆಕೆಯನ್ನು ತೊರೆದಿದ್ದ.

6 ವರ್ಷದ ಮಗನಿರುವ ಅನುಶ್ರೀ ಈಗ ವೀರಣ್ಣನನ್ನು ಮದುವೆ ಮಾಡಿಕೊಂಡು ಹೊಸ ಬಾಳಿನ ಕನಸ್ಸನ್ನು ಕಂಡಿದ್ದಾಳೆ. ಇದರಿಂದ ವೀರಣ್ಣ ತನ್ನ ಆಸ್ತಿಯಲ್ಲಿ ಒಂದು ಭಾಗವನ್ನು ಅನುಶ್ರೀಗೆ ಮಾಡಿಕೊಡುವುದಾಗಿ ಆಕೆಯನ್ನು ಪ್ರಾಣದಂತೆ ಪ್ರೀತಿಸುವುದಾಗಿ ವೀರಣ್ಣ ಹೇಳಿಕೊಂಡಿದ್ದಾನೆ. 2ನೇ ಮದುವೆಗೆ ವೀರಣ್ಣನ ಮಗಳು ಹಾಗೂ ಅಳಿಯ ಗಲಾಟೆ ಮಾಡಿ ಬೆದರಿಕೆ ಹಾಕಿದ್ದಾರಂತೆ. ಯಾವುದಕ್ಕೂ ಜಗ್ಗದ ವೀರಣ್ಣ ಅನುಶ್ರೀ ಜೊತೆ ಹೊಸ ಬಾಳಿಗೆ ಮುನ್ನುಡಿ ಬರೆದಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಂಬಿ ಬಂದವಳ ಕೈ ಹಿಡಿದ ಅಜ್ಜ; 35 ವರ್ಷದ ಮಹಿಳೆಯನ್ನು ಮದುವೆಯಾದ 75 ವರ್ಷದ ವೃದ್ಧ

https://newsfirstlive.com/wp-content/uploads/2023/09/marriage.jpg

Load More