ಇಡೀ ವಿಶ್ವದಲ್ಲೇ ಅತಿ ದೊಡ್ಡ ನ್ಯೂಕ್ಲಿಯರ್ ಬಾಂಬ್ ಟೆಸ್ಟ್‌ಗೆ ಸಿದ್ಧತೆ
B61-13 ಅನ್ನೋ ಬೃಹತ್ ಅಣು ಬಾಂಬ್ ಎಷ್ಟು ಬಲಶಾಲಿ ಗೊತ್ತಾ?
2ನೇ ವಿಶ್ವ ಯುದ್ಧದ ಅಣು ಬಾಂಬ್ 15 ಕಿಲೋ ಟನ್ ಪ್ರಭಾವ
ನ್ಯೂಯಾರ್ಕ್: ವಿಶ್ವದ ದೊಡ್ಡಣ್ಣ ಅಂತ ಕರೆಸಿಕೊಳ್ಳುವ ಅಮೆರಿಕ ಮತ್ತೊಂದು ಅಪಾಯಕಾರಿ ಅನ್ವೇಷಣೆಗೆ ಮುಂದಾಗಿದೆ. 1945ರ 2ನೇ ವಿಶ್ವಯುದ್ಧದ ಸಂದರ್ಭದಲ್ಲಿ ಜಪಾನ್‌ನ ಹಿರೋಶಿಮಾ, ನಾಗಾಸಾಕಿ ಮೇಲೆ ಹಾಕಲಾದ ಒಂದು ಬಾಂಬ್‌ನ 24ರಷ್ಟು ದೊಡ್ಡ ಸಾಮರ್ಥ್ಯದ ಅಣು ಬಾಂಬ್ ಅನ್ನ ತಯಾರಿಸಲು ಮುಂದಾಗಿದೆ. ಇದರ ಸಾಮರ್ಥ್ಯ ಏನು ಅನ್ನೋದನ್ನ ಅಂದಾಜು ಮಾಡಿದ್ರೆ ನಿಜಕ್ಕೂ ಇದು ಅಪಾಯಕಾರಿ ಬೆಳವಣಿಗೆ ಅನ್ನಿಸೋದ್ರಲ್ಲಿ ಅನುಮಾನವೇ ಇಲ್ಲ.
ಅಮೆರಿಕ ಇಡೀ ವಿಶ್ವದಲ್ಲೇ ಅತಿ ದೊಡ್ಡ ನ್ಯೂಕ್ಲಿಯರ್ ಬಾಂಬ್ ಉತ್ಪಾದಿಸಲು ಮುಂದಾಗಿದೆ. ಇದು ಎಷ್ಟು ಪವರ್ ಫುಲ್ ಅಂದ್ರೆ ಊಹಿಸಿಕೊಳ್ಳುವುದು ಅಸಾಧ್ಯವಾಗಿದೆ. ನಾವು ಮೊದಲೇ ಹೇಳಿದಂತೆ 2ನೇ ವಿಶ್ವಯುದ್ಧದ ಸಂದರ್ಭದಲ್ಲಿ ಜಪಾನ್ ಮೇಲೆ ಅಮೆರಿಕಾ ಹಾಕಿದ ಒಂದು ಅಣು ಬಾಂಬ್‌ನ 24ರಷ್ಟು ಬಲಿಷ್ಟವಾದ ನ್ಯೂಕ್ಲಿಯರ್ ಬಾಂಬ್ ಇದಾಗಲಿದೆಯಂತೆ.
ವಿಶ್ವದ ಬಲಶಾಲಿ ನ್ಯೂಕ್ಲಿಯರ್ ಬಾಂಬ್ ತಯಾರಿಸಲು ಅಮೆರಿಕಾದ ರಕ್ಷಣಾ ಇಲಾಖೆ ಮುಂದಾಗಿದೆ. ಇತ್ತೀಚೆಗೆ B61 ಅನ್ನೋ ನ್ಯೂಕ್ಲಿಯರ್ ಬಾಂಬ್ ತಯಾರಿಸಿದ್ದ ಅಮೆರಿಕ ಇದೀಗ ಅತಿದೊಡ್ಡ ನ್ಯೂಕ್ಲಿಯರ್ ಬಾಂಬ್‌ಗೆ B61-13 ಎಂದು ಕರೆಯಲಾಗುತ್ತಿದೆ.
B61-13 ಎಷ್ಟು ಪವರ್‌ಫುಲ್ ಗೊತ್ತಾ?
B61-13 ಅನ್ನೋ ಬೃಹತ್ ಅಣುಬಾಂಬ್ ಎಷ್ಟು ಬಲಶಾಲಿ ಅನ್ನೋದೇ ಆಶ್ಚರ್ಯಕ್ಕೆ ಕಾರಣವಾಗಿದೆ. ಈ ಹೊಸ ಬಾಂಬ್ ಗರಿಷ್ಠ 360 ಕಿಲೋ ಟನ್ ತೂಕ ಇರುತ್ತದೆ ಎನ್ನಲಾಗಿದೆ. 1945ರಲ್ಲಿ ಜಪಾನ್‌ನ ಹಿರೋಶಿಮಾದ ಮೇಲೆ ಅಮೆರಿಕಾ ಹಾಕಿದ್ದ ಅಣು ಬಾಂಬ್ 15 ಕಿಲೋ ಮೀಟರ್ ಅಷ್ಟೇ ಪ್ರಭಾವ ಬೀರಿತ್ತು. ಇದೀಗ ಅಮೆರಿಕ ಕಂಡು ಹಿಡಿಯುತ್ತಿರುವ B61-13 ನ್ಯೂಕ್ಲಿಯರ್ ಬಾಂಬ್ 24ರಷ್ಟು ದೊಡ್ಡದು ಆಗಿದೆ.
ರಷ್ಯಾ, ಚೀನಾಕ್ಕೆ ಹೊಸ ಟೆನ್ಷನ್!
ಅತಿ ದೊಡ್ಡ ಅಣುಬಾಂಬ್ ತಯಾರಿಸುವ ಅಮೆರಿಕದ ಈ ಹೆಜ್ಜೆ ರಷ್ಯಾ ಹಾಗೂ ಚೀನಾ ದೇಶಕ್ಕೆ ಆತಂಕಕಾರಿಯಾದ ಸುದ್ದಿಯಾಗಿದೆ. ವಿಶ್ವಯುದ್ಧದ ಬಳಿಕ ಅಣು ಬಾಂಬ್ ಅನ್ನ ಪರೀಕ್ಷೆ ಮಾಡೋದನ್ನೇ ಬ್ಯಾನ್ ಮಾಡುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ರಷ್ಯಾ ಇತ್ತೀಚೆಗೆ ಆ ಒಪ್ಪಂದಕ್ಕೆ ಸೆಡ್ಡು ಹೊಡೆದು ನ್ಯೂಕ್ಲಿಯರ್ ಪರೀಕ್ಷೆಯನ್ನು ನಡೆಸಿತ್ತು. ಇದೀಗ ರಷ್ಯಾ ಹಾಗೂ ಚೀನಾದ ಸೂಪರ್ ಪವರ್ ದೇಶಗಳಿಗೆ ಸಡ್ಡು ಹೊಡೆಯಲು ಅಮೆರಿಕ ಮುಂದಾಗಿದೆ. ನಮ್ಮ ಸಂಶೋಧನೆ ಅತ್ಯಾಧುನಿಕವಾದದ್ದು. ಹೊಸ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ನಾವು ಅತಿ ದೊಡ್ಡ ನ್ಯೂಕ್ಲಿಯರ್ ಟೆಸ್ಟ್‌ಗೆ ಮುಂದಾಗುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದೆ. ಅಮೆರಿಕಾದ ಈ ನಡೆ ವೈರಿ ದೇಶಗಳಾದ ರಷ್ಯಾ ಹಾಗೂ ಚೀನಾಕ್ಕೆ ಬಹಳ ದೊಡ್ಡ ಎಚ್ಚರಿಕೆಯನ್ನು ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ