newsfirstkannada.com

ಮಹಾಮಳೆಗೆ ತತ್ತರಿಸಿದ ಉತ್ತರ ಭಾರತ.. ಕುಸಿದ ಭೂಮಿ, ಉಕ್ಕಿಹರಿದ ನದಿಗಳು.. ಪ್ರವಾಹದಿಂದ ಏನೆಲ್ಲಾ ಅನಾಹುತ ಆಗ್ತಿದೆ..?

Share :

11-07-2023

  ಥುನಾಗ್‌ನಿಂದ ಹಠಾತ್ ಪ್ರವಾಹ.. ಭೂಕುಸಿತ

  ಕಲ್ಕಾ-ಶಿಮ್ಲಾ ಹೆದ್ದಾರಿ ಸಂಪೂರ್ಣ ಜಲಾವೃತ

  ಅಂಬಾಲಾ-ಚಂಡೀಗಢ ಹೆದ್ದಾರಿಯಲ್ಲಿ ಜಲದಿಗ್ಬಂಧನ

ಉತ್ತರ ಭಾರತದಲ್ಲಿ ವರುಣ ಆರ್ಭಟ ಮುಂದುವರಿದಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಈಗಾಗಲೇ 37ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳು ಸಂಪೂರ್ಣ ಜಲಾವೃತಗೊಂಡಿವೆ. ನದಿಗಳೆಲ್ಲಾ ಉಕ್ಕಿ ಹರಿಯುತ್ತಿವೆ. ಇನ್ನು ಉತ್ತರ ಭಾರತದ ಹಲವಾರು ನಗರಗಳು ಮತ್ತು ಪಟ್ಟಣಗಳಲ್ಲಿ ರಸ್ತೆಗಳು ನದಿಗಳಾಗಿ ಮಾರ್ಪಟ್ಟಿದೆ.

ದೇಶದ ಹಲವೆಡೆ ಪ್ರವಾಹ, ಭೂಕುಸಿತ ಸಾಮಾನ್ಯ ಎಂಬಂತಾಗಿದ್ದು ಹಿಮಾಚಲದಲ್ಲಂತೂ ಅಲ್ಲೋಲ-ಕಲ್ಲೋಲವಾಗಿದೆ. ನದಿಗಳೆಲ್ಲಾ ಅಪಾಯದ ಮಟ್ಟ ಮೀರಿದ್ದು, ಸಿಕ್ಕಿದ್ದನ್ನೆಲ್ಲಾ ಆಪೋಷನ ಪಡೆಯುತ್ತಿವೆ.

ಥುನಾಗ್‌ನಿಂದ ಹಠಾತ್ ಪ್ರವಾಹ.. ಭೂಕುಸಿತ

ಹಿಮಾಚಲ ಪ್ರದೇಶದ ಮಂಡಿಯ ಥುನಾಗ್​ನಲ್ಲಿ ಮೇಘಸ್ಫೋಟಗೊಂಡು ಮಳೆರಾಯ ಧುಮ್ಮಿಕ್ಕುತ್ತಿದ್ದು, ಸೋಲನ್‌ನ ಚೆವಾ ಗ್ರಾಮದಲ್ಲಿ ದೊಡ್ಡ ಭೂಕುಸಿತವನ್ನು ಉಂಟುಮಾಡಿದ ಹಠಾತ್ ಪ್ರವಾಹದ ದೃಶ್ಯಗಳು ಸ್ಥಳೀಯರ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಳೆಯ ಅಬ್ಬರ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಮಳೆಯಾಗಿದ್ದು, ಹುಲ್ಲುಹಾಸಿನ ಅಂಡರ್‌ಪಾಸ್‌ನಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿ ವಾಹನ ಸವಾರರು ಪರದಾಡಿದ್ದಾರೆ.

ಕಲ್ಕಾ-ಶಿಮ್ಲಾ ಹೆದ್ದಾರಿ ಸಂಪೂರ್ಣ ಜಲಾವೃತ

ಕಲ್ಕಾ-ಶಿಮ್ಲಾ ಹೆದ್ದಾರಿ ಇದೀಗ ಭಾರೀ ಮಲೆಯ ಎಫೆಕ್ಟ್​ನಿಂದ ಸಂಪೂರ್ಣ ಜಲಾವೃತವಾಗಿದೆ.

ಅಂಬಾಲಾ-ಚಂಡೀಗಢ ಹೆದ್ದಾರಿಯಲ್ಲಿ ಜಲದಿಗ್ಬಂಧನ

ಹರಿಯಾಣ ರಾಜ್ಯದ ಅಂಬಾಲಾ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಅಂಬಾಲಾ-ಚಂಡೀಗಢ ಹೆದ್ದಾರಿಯಲ್ಲಿ ನೀರು ನಿಂತಿದೆ. ಮೊಣಕಾಲಿನ ಮಟ್ಟಕ್ಕೆ ನಿಂತ ನೀರಲ್ಲೇ ವಾಹನ ಸವಾರರು ಪರದಾಡಿದರು.

ಮುಳುಗುತ್ತಿದ್ದ ಯುವಕನ ಜೀವ ರಕ್ಷಿಸಿದ ಜನರು

ಹರಿಯಾಣ ಭಾಗಗಳಲ್ಲಿ ಮಳೆಯಿಂದಾಗಿ ಭಾರೀ ಅವಾಂತರಗಳೇ ಸೃಷ್ಟಿಯಾಗಿದ್ದು, ಪಂಚಕುಲದ ಸೆಕ್ಟರ್-16ರಲ್ಲಿ ಉಂಟಾದ ಪ್ರವಾಹದಲ್ಲಿ ಮುಳುಗುತ್ತಿದ್ದ ಯುವಕನ ಜೀವವನ್ನು ಜನರೇ ರಕ್ಷಿಸಿದ್ದಾರೆ. ಚಂಡೀಗಢದ ಪ್ರದೇಶದಲ್ಲಿ ನಿರಂತರ ಭಾರೀ ಮಳೆಯ ಪರಿಣಾಮ ಸುಖನಾ ಸರೋವರವು ಉಕ್ಕಿ ಹರಿಯುತ್ತಿದ್ದು, ಅಪಾಯ ಮಟ್ಟ ತಲುಪಿದೆ. ಸರೋವರ ಪಾತ್ರದ ಜನರನ್ನು ಸ್ಥಳಾಂತರಕ್ಕೆ ಸರ್ಕಾರ ಸೂಚನೆ ನೀಡಿದೆ.

ಮಂಡಿಯಲ್ಲಿರುವ ಪಂಚವಕ್ತ್ರ ದೇವಾಲಯದಲ್ಲಿ ಜಲಸ್ಫೋಟ

ಹಿಮಾಚಲ ಪ್ರದೇಶದ ಬಿಯಾಸ್ ನದಿಯಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ಮಂಡಿಯಲ್ಲಿರುವ ಪಂಚವಕ್ತ್ರ ಶಿವನ ದೇವಾಲಯವು ಮುಳುಗಿದೆ. ಇನ್ನು ಈ ಭಾಗಗಳಲ್ಲಿ 13 ಭೂಕುಸಿತಗಳು ಮತ್ತು 9 ಹಠಾತ್ ಪ್ರವಾಹಗಳು ಉಂಟಾಗಿದೆ.

ಪರ್ವಾನೂ ಭಾಗದಲ್ಲೂ ಮಳೆ.. ಭಾರೀ ಪ್ರಮಾಣದಲ್ಲಿ ಹಾನಿ

ನಿನ್ನೆ ಸುರಿದ ಮಳೆಗೆ ಹಿಮಾಚಲ ಪ್ರದೇಶದಲ್ಲಿ ಭಾರೀ ಪ್ರಮಾಣದ ಹಾನಿಯಾಗಿದೆ. ಸೋಲನ್​ನ ಪರ್ವಾನೂ ಭಾಗದಲ್ಲೂ ಕೂಡ ಭೂಕುಸಿತ ಉಂಟಾಗಿದೆ.

ನೀರಿನ ಮಟ್ಟದಲ್ಲಿ ಏರಿಕೆ.. ನದಿ ತೀರದ ಜನರು ಸ್ಥಳಾಂತರ

ಹಿಮಾಚಲ ಪ್ರದೇಶದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನೀರಿನ ಮಟ್ಟ ಹೆಚ್ಚುತ್ತಿದ್ದು, ಪರಿಣಾಮ ಮಂಡಿ ಜಿಲ್ಲೆಯ ಬಿಯಾಸ್ ನದಿ ತೀರದ ಮನೆಗಳಲ್ಲಿ ವಾಸವಿದ್ದ ಜನರನ್ನು ಸ್ಥಳಾಂತರಿಸಲಾಗಿದೆ. ಇತ್ತ ಹಿಮಾಚಲ ಪ್ರದೇಶದ ಕಿನ್ನೌರ್ ಪ್ರದೇಶದಲ್ಲೂ ಭೂಕುಸಿತ ಉಂಟಾಗಿದ್ದು, ದೃಶ್ಯಗಳು ಅತಿ ಭಯಾನಕವಾಗಿದೆ. ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಚರಣೀಯ ಸೇತುವೆ ಕೊಚ್ಚಿ ಹೋದ ದೃಶ್ಯಗಳು ಮೊಬೈಲ್​ನಲ್ಲಿ ಸೆರೆಯಾಗಿದೆ.

ಉತ್ತರಾಖಂಡ್​ ರಾಜ್ಯದ ಜೋಶಿಮಠದಿಂದ ಮಲಾರಿ ಭಾಗದ ಸುಮಾರಿಗೆ ಜುಮ್ಮಾದಲ್ಲಿ ಹಿಮನದಿ ಸ್ಫೋಟಗೊಂಡಿದೆ. ಬೆಟ್ಟದಲ್ಲಿನ ಹಿಮನದಿ ಒಡೆದು ಧೌಲಿ ನದಿ ಉಕ್ಕಿ ಹರಿಯುತ್ತಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿ ಮಾಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಹಲವು ಪ್ರದೇಶಗಳು ಮುಳುಗಡೆಯಾಗಿವೆ. 1982 ರ ನಂತರ ಒಂದೇ ದಿನದಲ್ಲಿ 15 ಸೆಮೀ ಗಿಂತ ಹೆಚ್ಚು ಮಳೆಯಾಗಿದೆ. ಹಲವು ಪ್ರದೇಶಗಳಲ್ಲಿ ವಿದ್ಯುತ್ ಹಾಗೂ ಇಂಟರ್‌ನೆಟ್ ಸಂಪರ್ಕ ಕಡಿತಗೊಂಡಿದೆ.
ಒಟ್ಟಾರೆ ದೇಶದ ಮೇಲೆ ಕರುಣೆ ತೋರೋದಕ್ಕೆ ಧರೆಗಿಳಿದ ಮಳೆರಾಯ ಸಿಕ್ಕ ಸಿಕ್ಕವರ ಜೀವನವನ್ನ ಹಿಂಡಿ ಹಿಪ್ಪೆ ಮಾಡ್ತಿದ್ದಾನೆ. ದೆಹಲಿ, ಹರ್ಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಪಂಜಾಬ್, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಾಗಿದ್ದು ಇಂದು ಕೂಡ ವರುಣ ಅಬ್ಬರಿಸಲಿದ್ದಾನೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಾಮಳೆಗೆ ತತ್ತರಿಸಿದ ಉತ್ತರ ಭಾರತ.. ಕುಸಿದ ಭೂಮಿ, ಉಕ್ಕಿಹರಿದ ನದಿಗಳು.. ಪ್ರವಾಹದಿಂದ ಏನೆಲ್ಲಾ ಅನಾಹುತ ಆಗ್ತಿದೆ..?

https://newsfirstlive.com/wp-content/uploads/2023/07/RAIN-12.jpg

Load More