ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಉರುಳಿದ ಕಾರು
ಮೃತ ಐವರು ತಿಪಟೂರಿನ ಕೈದಾಳ ಗ್ರಾಮದವರು
ಶವಗಾರದ ಬಳಿ ಮೃತರ ಕುಟುಂಬಸ್ಥರ ಆಕ್ರಂದನ
ಮಂಡ್ಯ: 2018 ನವೆಂಬರ್‌ನ ಕನಕನಮರಡಿಯ ವಿಸಿ ನಾಲೆಯಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿ 39 ಜನ ಸಾವನ್ನಪ್ಪಿದ್ದರು. ಆ ದುರಂತದ ಬಳಿಕ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ಇದೀಗ ಬೀಗರ ಊಟ ಮುಗಿಸಿ ಊರಿಗೆ ಹೋಗುವ ಧಾವಂತದಲ್ಲಿ ಐವರು ಸಾವಿನ ನಾಲೆಗೆ ಬಲಿಯಾಗಿದ್ದಾರೆ. ಮಗನನ್ನು ಕಳೆದುಕೊಂಡು ಹೆತ್ತ ತಾಯಿ ಆಕ್ರಂದನ ಮುಗಿಲುಮುಟ್ಟಿತ್ತು. ನಿನ್ನೆ ಇದ್ದವರು ಇವತ್ತಿಲ್ಲ ಅನ್ನೋದನ್ನ ಅರಗಿಸಿಕೊಳ್ಳಲಾಗದೇ ಶವಗಾರ ಮುಂದೆ ಬಿಕ್ಕಿ ಬಿಕ್ಕಿ ಅಳ್ತಿರೋ ಕುಟುಂಬಸ್ಥರು. ಇಂತಹ ಮನಕಲಕುವ ಘಟನೆ ಕಂಡು ಬಂದಿದ್ದು ಮಂಡ್ಯ ಜಿಲ್ಲೆಯಲ್ಲಿ.
ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಉರುಳಿದ ಕಾರು
ಬೀಗರ ಊಟ ಮುಗಿಸಿ ಹೊರಟವರು ಜಲಸಮಾಧಿ
ವಿಸಿ ನಾಲೆ ವಾಹನ ಸವಾರರು ಕನಸಲ್ಲೂ ಒಂದು ಕ್ಷಣ ಬೆಚ್ಚಿ ಬೀಳುವಂತಾಗಿದೆ. ಸಾವಿನ ಕೂಪ ಅಂತಾ ಕರೆಸಿಕೊಳ್ಳೋ ಈ ವಿಸಿ ನಾಲೆ ಇದೀಗ ಮತ್ತೈದು ಜನರನ್ನ ತನ್ನ ಒಡಲಲ್ಲಿ ಸೇರಿಸಿಕೊಂಡಿದೆ. ಹೌದು. ಖುಷಿ ಖುಷಿಯಿಂದ ಸಂಬಂಧಿಕರ ಮನೆಗೆ ಬೀಗರ ಔತಣ ಕೂಟಕ್ಕೆ ಹೋಗಿ ವಾಪಸ್ ಬರುತ್ತಿದ್ದವರು ವಿಧಿಯಾಟಕ್ಕೆ ಬಾರದ ಲೋಕಕ್ಕೆ ತೆರಳಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಪಾಂಡವಪುರ ತಾಲೂಕಿನ ಬನಘಟ್ಟ ಬಳಿಯ ವಿಸಿ ನಾಲೆಯಲ್ಲಿ ಕಾರು ಬಿದ್ದು ಐವರು ಜಲ ಸಮಾಧಿಯಾಗಿದ್ದಾರೆ.
ತಿಪಟೂರು ಬಳಿಯ ಕೈದಾಳ ಗ್ರಾಮದಿಂದ ಮೈಸೂರಿನ ಬೆಟ್ಟದೂರು ಗ್ರಾಮಕ್ಕೆ ಬಾಬು ಎಂಬುವವರು ಸಂಬಂಧಿ ಬೀಗರ ಔತಣ ಕೂಟಕ್ಕೆ ಸ್ನೇಹಿತರೊಂದಿಗೆ ಹೋಗಿದ್ದರು. ಊಟ ಮುಗಿಸಿ ವಾಪಸ್ ಬರ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ನಾಲೆಗೆ ಉರುಳಿ ಬಿದ್ದಿದೆ. ದುರಂತದಲ್ಲಿ ಚಂದ್ರಪ್ಪ, ಕೃಷ್ಣಪ್ಪ, ಧನಂಜಯ, ಬಾಬು ಹಾಗೂ ಜಯಣ್ಣ ಮೃತಪಟ್ಟಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳೀಯ ಈಜುಗಾರರ ನೆರವಿನಿಂದ ಕಾರಿನಲ್ಲಿದ್ದ ಮೃತದೇಹಗಳನ್ನ ಹೊರತೆಗೆದ್ದಿದ್ದರು.
ಕಾರು ಹೊರ ತೆಗೆಯುವಾಗ ಮೃತನೋರ್ವನ ಮೊಬೈಲ್ ರಿಂಗ್ ಆಗಿದ್ದು, ಕರೆ ಸ್ವೀಕರಿಸಿದ ಸಿಬ್ಬಂದಿ ಕುಟುಂಬಸ್ಥರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಬಳಿಕ ಮೃತದೇಹಗಳನ್ನು ಪಾಂಡವಪುರ ತಾಲೂಕು ಆಸ್ಪತ್ರೆ ಶವಗಾರಕ್ಕೆ ರವಾನಿಸಿದ್ದು, ಇವತ್ತು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹಗಳನ್ನ ಹಸ್ತಾಂತರಿಸಲಿದ್ದಾರೆ. ಬ್ಯಾರಿಕೇಡ್ ಹಾಕದೇ ಇರೋದಕ್ಕೆ ಇಂತಹ ಘಟನೆ ನಡೆಯುತ್ತಿರೋದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ತಿಂಗಳಲ್ಲಿ ವಿಸಿ ನಾಲೆಗೆ ಮೂರು ಕಾರುಗಳು ಉರುಳಿ ಬಿದ್ದಿವೆ.
ಕಳೆದ ಜುಲೈ 27ರಂದು ತಿಬ್ಬನಹಳ್ಳಿ ವಿಸಿ ನಾಲೆಗೆ ಕಾರು ಬಿದ್ದು ಲೋಕೇಶ್ ಎಂಬಾತ ಸಾವನ್ನಪ್ಪಿದ್ದರು. ಜುಲೈ 29ರಂದು ಶ್ರೀರಂಗಪಟ್ಟಣದ ಗಾಮನಗಳ್ಳಿಯ ವಿಸಿ ನಾಲೆಗೆ ಕಾರು ಬಿದ್ದು ನಾಲ್ವರು ಮಹಿಳೆಯರು ಮೃತಪಟ್ಟಿದ್ದರು.
ಪದೇ ಪದೇ ವಿಸಿ ನಾಲೆಗೆ ಕಾರುಗಳು ಬೀಳ್ತಿದ್ದು ಮೃತರ ಸಂಖ್ಯೆ ಕೂಡ ಹೆಚ್ಚಾಗ್ತಿದೆ. ಅಮಾಯಕರು ಪ್ರಾಣ ಕಳೆದುಕೊಳ್ತಿದ್ರೂ ಕೂಡ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರಾ ಎಂಬ ಪ್ರಶ್ನೆ ಎದುರಾಗಿದೆ. ಈಗಾದ್ರೂ ಜಿಲ್ಲಾಡಳಿತ ಎಚ್ಚೆತ್ತು ಮುಂದಾಗುವ ಅನಾಹುತ ತಪ್ಪಿಸುತ್ತಾ ಎಂದು ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ