newsfirstkannada.com

ಕಾರಿನಲ್ಲಿ ನಿಮ್ಮ ಮೌಲ್ಯದ ವಸ್ತುಗಳು ಸುರಕ್ಷಿತ ಅಲ್ಲವೇ ಅಲ್ಲ.. ಇಲ್ಲಿ ಏನ್ ಮಾಡಿದ್ರು ಗೊತ್ತಾ ಕಳ್ಳರು..?

Share :

07-11-2023

    ಚಿನಕುರಳಿ ಗ್ರಾಮದ ಪರಮೇಶ್ ಹಣ ಕಳೆದುಕೊಂಡ ವ್ಯಕ್ತಿ

    ಕಾರನ್ನು ಹಿಂಬಾಲಿಸಿ ಹಣವನ್ನು ದೋಚಿದ ಆರೋಪಿಗಳು

    ನೋಡ ನೋಡ್ತಿದ್ದಂತೆ ಹಣ ಕದ್ದು ಆರೋಪಿಗಳು ಎಸ್ಕೇಪ್​

ಮಂಡ್ಯ: ಹಾಡಹಗಲೇ ಕಾರಿನ ಗ್ಲಾಸ್ ಒಡೆದು 4.5 ಲಕ್ಷ ರೂಪಾಯಿ ಕಳ್ಳತನ ಮಾಡಿ ಪರಾರಿಯಾಗಿರೋ ಘಟನೆ ನಗರಸಭೆ ಆವರಣದಲ್ಲಿ ನಡೆದಿದೆ. ಚಿನಕುರಳಿ ಗ್ರಾಮದ ಪರಮೇಶ್ ಹಣ ಕಳೆದುಕೊಂಡ ವ್ಯಕ್ತಿ.

ನಗರಸಭೆ ಆವರಣದಲ್ಲಿ ಪರಮೇಶ್ ಎಂಬುವವರು ರಿಜಿಸ್ಟರ್ ಆಫೀಸ್​ನಿಂದ ನಗರಸಭೆ ಬಳಿ ಬಂದಿದ್ದರು. ಕಾರು ನಿಲ್ಲಿಸಿ ಪಕ್ಕದ ರಸ್ತೆಯ SBI ಬ್ಯಾಂಕ್​ಗೆ ತೆರಳಿದ್ದರು. ಇದನ್ನೇ ಗಮನಿಸಿಕೊಂಡು ಕೂತಿದ್ದ ಖತರ್ನಾಕ್ ಕಳ್ಳ ಬ್ರೀಜಾ ಕಾರಿನ ಎಡಭಾಗದ ಡೋರ್ ಗ್ಲಾಸ್ ಹೊಡೆದು ಹಣ ದೋಚಿ ಪರಾರಿಯಾಗಿದ್ದಾರೆ.

ಬಳಿಕ ಬ್ಯಾಂಕ್​ನಿಂದ ಪರಮೇಶ್ ವಾಪಸ್ ಕಾರಿನ ಬಳಿ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಮಂಡ್ಯದ ಪಶ್ಚಿಮ‌ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ಪೊಲೀಸ್​​ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಕಳ್ಳರ ಕೃತ್ಯ ನಗರಸಭೆ ಕಚೇರಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾರಿನಲ್ಲಿ ನಿಮ್ಮ ಮೌಲ್ಯದ ವಸ್ತುಗಳು ಸುರಕ್ಷಿತ ಅಲ್ಲವೇ ಅಲ್ಲ.. ಇಲ್ಲಿ ಏನ್ ಮಾಡಿದ್ರು ಗೊತ್ತಾ ಕಳ್ಳರು..?

https://newsfirstlive.com/wp-content/uploads/2023/11/mandya.jpg

Load More