newsfirstkannada.com

ಆಕಸ್ಮಿಕವಾಗಿ ಬಲೆಗೆ ಬಿದ್ದ ಡಾಲ್ಫಿನ್​​ನನ್ನು ಮನೆಗೆ ತಂದು ತಿಂದ ಮೀನುಗಾರರು: ನಾಲ್ವರ ವಿರುದ್ಧ ಕೇಸ್

Share :

25-07-2023

    ಉತ್ತರ ಪ್ರದೇಶದ ನಸೀರ್​​ಪುರ ಗ್ರಾಮದಲ್ಲಿ ಘಟನೆ

    ವೈರಲ್ ಆಗಿರೋ ವಿಡಿಯೋ ಆಧರಿಸಿ ಕೇಸ್ ದಾಖಲು

    ಓರ್ವ ಆರೋಪಿ ಬಂಧನ, ಮೂವರು ನಾಪತ್ತೆ

ಯಮುನಾ ನದಿಯಲ್ಲಿ ಕಾನೂನು ಬಾಹೀರವಾಗಿ ಡಾಲ್ಫಿನ್ ಬೇಟೆಯಾಡಿದ ಆರೋಪದ ಮೇಲೆ ನಾಲ್ವರು ಮೀನುಗಾರರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿರೋದನ್ನು ಆಧರಿಸಿ ಓರ್ವ ಮೀನುಗಾರರನ್ನು ಬಂಧಿಸಲಾಗಿದೆ. ಅರಣ್ಯಾಧಿಕಾರಿ ರವೀಂದ್ರ ಕುಮಾರ್ ದಾಖಲಿಸಿರುವ ದೂರಿನ ಪ್ರಕಾರ, ಉತ್ತರ ಪ್ರದೇಶದ ನಸೀರ್​​ಪುರ ಗ್ರಾಮದ ನಾಲ್ವರು ಮೀನುಗಾರರು ಯಮುನಾ ನದಿಯಲ್ಲಿ ಮೀನಿಗಾಗಿ ಬಲೆ ಬೀಸಿದ್ದರು. ಈ ವೇಳೆ ಡಾಲ್ಫಿನ್ ಮೀನು ಆಕಸ್ಮಿಕವಾಗಿ ಬಲೆಗೆ ಸಿಕ್ಕಿಬಿದ್ದಿದೆ. ನದಿಯಿಂದ ಡಾಲ್ಫಿನ್ ಮೇಲಕ್ಕೆ ತಂದು ಹೆಗಲ ಮೇಲೆ ಇಟ್ಟುಕೊಂಡು ಮನೆಗೆ ತಂದು ತಿಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ರಂಜೀತ್ ಕುಮಾರ್, ಸಂಜಯ್, ದೀವನ ಮತ್ತು ಬಾಬಾ ವಿರುದ್ಧ ವನ್ಯಜೀವಿ ಸಂರಕ್ಷಣಾ ಆ್ಯಕ್ಟ್ (1972) ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಅದರಲ್ಲಿ ರಂಜೀತ್ ಕುಮಾರ್​ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆಯನ್ನು ಅಧಿಕಾರಿಗಳು ತೀವ್ರಗೊಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಕಸ್ಮಿಕವಾಗಿ ಬಲೆಗೆ ಬಿದ್ದ ಡಾಲ್ಫಿನ್​​ನನ್ನು ಮನೆಗೆ ತಂದು ತಿಂದ ಮೀನುಗಾರರು: ನಾಲ್ವರ ವಿರುದ್ಧ ಕೇಸ್

https://newsfirstlive.com/wp-content/uploads/2023/07/Dolphin.jpg

Load More