newsfirstkannada.com

×

ಗಣಪತಿ ಬಪ್ಪ ಮೋರಿಯ.. ವಿನಾಯಕನ ಮೂರ್ತಿ ಜೊತೆ 4 ಲಕ್ಷದ ಬಂಗಾರದ ಸರ ವಿಸರ್ಜನೆ; ಆಮೇಲೇನಾಯ್ತು?

Share :

Published September 8, 2024 at 10:34pm

    ಗಣೇಶ ಹಬ್ಬದ ಜೋಶ್‌ನಲ್ಲಿ ಕಳೆದುಕೊಂಡ ಚಿನ್ನದ ಸರ ಏನಾಯ್ತು?

    ಸಂಜೆ 7 ಗಂಟೆಗೆ 60 ಗ್ರಾಂ ಚಿನ್ನದ ಸರದ ಜೊತೆ ಗಣಪತಿ ವಿಸರ್ಜನೆ

    ರಾತ್ರಿ 10 ಗಂಟೆಯ ಸುಮಾರಿಗೆ ಚಿನ್ನದ ಸರ ನೆನಪಾಗಿ ಎಲ್ರೂ ಗಾಬರಿ

ಬೆಂಗಳೂರು: ಗಣಪತಿ ಹಬ್ಬ ಬಂದ್ರೆ ಉಳಿದ ಎಲ್ಲಾ ಹಬ್ಬಗಳಿಗಿಂತ ಸ್ವಲ್ಪ ಜೋಶ್ ಜಾಸ್ತಿನೇ ಇರುತ್ತೆ. ರೋಡ್‌, ರೋಡಲ್ಲೂ ನಮ್ ಹುಡುಗರು ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಟಪ್ಪಾಂಗುಚಿ ಡ್ಯಾನ್ಸ್ ಮಾಡಿ ವಿಸರ್ಜನೆ ಮಾಡುತ್ತಾರೆ. ಸಿಲಿಕಾನ್‌ ಸಿಟಿಯಲ್ಲಿ ಇದೇ ಜೋಶ್‌ ಒಂದು ಯಡವಟ್ಟಿಗೆ ಕಾರಣವಾಗಿದ್ದು, ಆದ್ರೆ ವಿಘ್ನ ನಿವಾರಕ ವಿನಾಯಕನ ದಯೆಯಿಂದ ಆಗುತ್ತಿದ್ದ ಪ್ರಮಾದವೊಂದು ಸ್ವಲ್ಪದರಲ್ಲೇ ತಪ್ಪಿದೆ.

ಇದನ್ನೂ ಓದಿ: ಅಮೆರಿಕಾ ಎಲೆಕ್ಷನ್‌ಗೂ ಡಿಕೆಶಿ ಯಾಕೆ ಬೇಕು? ಕಮಲಾ ಹ್ಯಾರಿಸ್ ಆಹ್ವಾನ ಕೊಟ್ಟಿದ್ದೇಕೆ? ಅಸಲಿ ಕಾರಣ ಇಲ್ಲಿದೆ! 

ಮಾಗಡಿ ರೋಡ್‌ನ ದಾಸರಹಳ್ಳಿಯ ಬಿ.ಆರ್.ಐ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಹಬ್ಬದ ದಿನ ಬೆಳಗ್ಗೆ ಮನೆಯವರು ಗಣೇಶನ ಮೂರ್ತಿಗೆ 60 ಗ್ರಾಂ ಚಿನ್ನದ ಸರ ಹಾಕಿ ಪೂಜೆ ಮಾಡಿದ್ದಾರೆ. ಸಂಜೆಯಾಗುತ್ತಲೇ ಚಿನ್ನದ ಸರದ ಸಮೇತ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಿದ್ದಾರೆ.

ಗಣೇಶ ವಿಸರ್ಜನೆಗಾಗಿ ಬಿಬಿಎಂಪಿಯಿಂದ ಟ್ರಕ್ ನೀರಿನ ವ್ಯವಸ್ಥೆ ಮಾಡಿತ್ತು. ಹೀಗಾಗಿ ಈ ಮನೆಯವರು ಸಂಜೆ 7 ಗಂಟೆ ಸುಮಾರಿಗೆ ಟ್ರಕ್ ಬಳಿ ಹೋಗಿ 60 ಗ್ರಾಂ ಬೆಲೆ ಬಾಳುವ ಚಿನ್ನದ ಸರದ ಸಮೇತ ಗಣೇಶ ಮೂರ್ತಿ ವಿಸರ್ಜನೆ ಮಾಡಿ ಬಂದಿದ್ದಾರೆ. ರಾತ್ರಿ 10 ಗಂಟೆಯ ಸುಮಾರಿಗೆ ಚಿನ್ನದ ಸರದ ನೆನಪಾಗಿ ಮನೆಯವರೆಲ್ಲಾ ಗಾಬರಿಯಾಗಿದ್ದಾರೆ.

ಇದನ್ನೂ ಓದಿ: BREAKING: ಭೀಕರ ಅಪಘಾತಕ್ಕೆ ನಜ್ಜುಗುಜ್ಜಾದ ಎರಡು ಕಾರುಗಳು; ಐವರು ದಾರುಣ ಸಾವು 

ಚಿನ್ನದ ಸರ ಸಿಕ್ಕಿದ್ದೇ ರೋಚಕ!
ತಕ್ಷಣವೇ ಎಲ್ಲರೂ ಟ್ರಕ್‌ನ ಚಾಲಕ ಹಾಗೂ ಬಿಬಿಎಂಪಿ ಸಿಬ್ಬಂದಿಗೆ ಈ ವಿಚಾರ ತಿಳಿಸಿದ್ದಾರೆ. ಸ್ಥಳೀಯ ಕಾಂಗ್ರೆಸ್ ಶಾಸಕರಾದ ಪ್ರಿಯ ಕೃಷ್ಣ ಅವರಿಗೂ ಈ ಮಾಹಿತಿ ನೀಡಿ ಸಹಾಯ ಕೋರಿದ್ದಾರೆ. ಶಾಸಕರ ಬೆಂಬಲಿಗರು ಮನೆಯವರ ನೆರವಿಗೆ ಬಂದು ಚಿನ್ನದ ಸರ ಹುಡುಕಾಡಲು ಯತ್ನಿಸಿದ್ದಾರೆ.

ಆಗ ಬಿಬಿಎಂಪಿ ಸಿಬ್ಬಂದಿ ಹೌದು ನಮಗೆ ವಿಸರ್ಜನೆ ಮಾಡುವಾಗ ಚಿನ್ನದ ಸರ ಸಿಕ್ಕಿತ್ತು. ಅದು ಇಲ್ಲೇ ಇದೆ. ಅದು ನಕಲಿ ಸರ ಎಂದು ನಾವು ಸುಮ್ಮನಾದೆವು ಎಂದು ಹೇಳುತ್ತಾರೆ. ಕೂಡಲೇ ನೀರನ್ನು ಖಾಲಿ ಮಾಡಿ ಗಣೇಶ ಮೂರ್ತಿ ಕರಗಿದ್ದ ಮಣ್ಣಲ್ಲಿ ಚಿನ್ನದ ಸರ ಹುಡುಕಿದ್ರೆ ಅದು ಸಿಗೋದೇ ಇಲ್ಲ. ರಾತ್ರಿಯೆಲ್ಲ ಹುಡುಕಾಡಿದವರಿಗೆ ಬೆಳಗಿನ ಜಾವ ಚಿನ್ನದ ಸರ ಸಿಕ್ಕಿದ್ದು ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ. 4 ಲಕ್ಷ ಮೌಲ್ಯದ ಚಿನ್ನದ ಸರ ಹುಡುಕಿಕೊಟ್ಟ ಎಲ್ಲರಿಗೂ ವಿಶೇಷ ಧನ್ಯವಾದ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಣಪತಿ ಬಪ್ಪ ಮೋರಿಯ.. ವಿನಾಯಕನ ಮೂರ್ತಿ ಜೊತೆ 4 ಲಕ್ಷದ ಬಂಗಾರದ ಸರ ವಿಸರ್ಜನೆ; ಆಮೇಲೇನಾಯ್ತು?

https://newsfirstlive.com/wp-content/uploads/2024/09/Bangalore-Ganesh-Gold.jpg

Load More