newsfirstkannada.com

ಜೆಸ್ಕಾಂ ಅಧಿಕಾರಿಗಳ ಯಡವಟ್ಟು.. 1 BHK ಮನೆಗೆ 4 ಲಕ್ಷ ರೂಪಾಯಿ ಕರೆಂಟ್​ ಬಿಲ್​! ಇದೆಂಥಾ ಅವಸ್ಥೆ

Share :

Published July 10, 2023 at 11:59am

    ಸಾವಿರ ಅಲ್ವೇ ಅಲ್ಲ, ನಾಲ್ಕು ಲಕ್ಷ ರೂಪಾಯಿ ಕರೆಂಟ್ ಬಿಲ್​

    ಪ್ರತಿ ತಿಂಗಳು ಸಾವಿರ ಬಿಲ್ ಬರ್ತಿದ್ದ ಮನೆಗೆ 4 ಲಕ್ಷ ಹೇಗೆ?

    ಜೆಸ್ಕಾಂ ಅಧಿಕಾರಿಗಳ ಯಡವಟ್ಟಿನಿಂದ ಗ್ರಾಹಕನಿಗೆ ಪ್ರಾಣ ಸಂಕಟ

ಬಳ್ಳಾರಿ: ಸಿಂಗಲ್ ಬೆಡ್ ರೂಂ ಮನೆಗೆ ಬರೋಬ್ಬರಿ ನಾಲ್ಕು ಲಕ್ಷ ಕರೆಂಟ್ ಬಿಲ್ ಬಂದ ಘಟನೆ ಬಳ್ಳಾರಿಯ ಇಂದ್ರಾ ನಗರದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಮಹೇಶ್ ಎಂಬುವರ ಮನೆಗೆ 4,25,852 ರೂಪಾಯಿ ಕರೆಂಟ್ ಬಿಲ್ ಬಂದದ್ದನ್ನು ಕಂಡು ಅಚ್ಚರಿಗೊಂಡಿದ್ದಾರೆ.

ಮಹೇಶ್ 1 BHK ಮನೆಯಲ್ಲಿ ವಾಸವಿದ್ದು, ಜೆಸ್ಕಾಂ ಸಿಬ್ಬಂದಿ ಎರಡು ದಿನಗಳ ಹಿಂದೆ ವಿದ್ಯುತ್ ಬಿಲ್ ಕೊಟ್ಟಿದ್ದಾರೆ. ಬಿಲ್​ ನೋಡಿದ ಮಹೇಶ್​ 4 ಲಕ್ಷಕ್ಕೂ ಅಧಿಕ ಮೊತ್ತ ಬಂದದ್ದನ್ನು ಗಮನಿಸಿ ಆತನನ್ನು ಪ್ರಶ್ನಿಸಿದ್ದಾರೆ. ಆದರೆ ಸಿಬ್ಬಂದಿ ಮಾತ್ರ ಆನ್​ಲೈನ್‍ನಲ್ಲಿ ಬಿಲ್ ಚೆಕ್ ಮಾಡಿ ಅಂತ ಬಿಲ್ ಪಾವತಿ ವಾಪಾಸ್ ತೆಗೆದುಕೊಂಡಿದ್ದಾರೆ.

ಇನ್ನು ಮಹೇಶ್​ ಆನ್‌ಲೈನ್‌, ಜೆಸ್ಕಾಂ ಇಲಾಖೆ ಸೈಟ್‍ನಲ್ಲೂ ಬಿಲ್​​ ಪರಿಶೀಲಿಸಿದ್ದಾರೆ. ಈ ವೇಳೆಯೂ 4,25,852 ರೂಪಾಯಿ ಕರೆಂಟ್ ಬಿಲ್ ಬಂದಿರುವುದನ್ನು ಕಂಡಿದ್ದಾರೆ.
ಪ್ರತಿ ತಿಂಗಳು ಸಾವಿರ ಬಿಲ್ ಬರ್ತಿದ್ದ ಮನೆಗೆ 4 ಲಕ್ಷ ಹೇಗೆ ಅಂತಾ ಆಚ್ಚರಿಗೊಂಡಿದ್ದಾರೆ. ಸದಸ್ಯ ಜೆಸ್ಕಾಂ ಅಧಿಕಾರಿಗಳು ಯಡವಟ್ಟಿನಿಂದಾಗಿ ಗ್ರಾಹಕ ಮಹೇಶ್​ ಮಾತ್ರ ತಲೆಕೆಡಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೆಸ್ಕಾಂ ಅಧಿಕಾರಿಗಳ ಯಡವಟ್ಟು.. 1 BHK ಮನೆಗೆ 4 ಲಕ್ಷ ರೂಪಾಯಿ ಕರೆಂಟ್​ ಬಿಲ್​! ಇದೆಂಥಾ ಅವಸ್ಥೆ

https://newsfirstlive.com/wp-content/uploads/2023/07/Electricity-Bill.jpg

Load More