ಕಿರುತೆರೆ ವೀಕ್ಷಕರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದ ಬಿಗ್ಬಾಸ್ ಶೋ
4 ಸ್ಪರ್ಧಿಗಳಲ್ಲಿ ಈ ವಾರ ಮನೆಯಿಂದ ಆಚೆ ಹೋಗೋರು ಯಾರು?
ಗೌರೀಶ್, ಸಂಗೀತಾ, ಭಾಗ್ಯಶ್ರೀ, ತನಿಷಾ ಇವರಲ್ಲಿ ಯಾರು ಆಚೆ ಬರ್ತಾರೆ
ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಈಗ ಎರಡು ವಾರ ಪೂರೈಸಿ ಮೂರನೇ ವಾರಕ್ಕೆ ಕಾಲಿಡುತ್ತಿದೆ. ಮೊದಲ ವಾರ ಬಿಗ್ಬಾಸ್ ಮನೆಯಿಂದ ಮೈಸೂರಿನ ಸ್ನೇಕ್ ಶ್ಯಾಮ್ ಅವರು ಹೊರಬಿದ್ದರು. ಎರಡನೇ ವಾರ ಔಟ್ ಆಗೋದು ಯಾರು ಎಂಬ ಪ್ರಶ್ನೆ ಈಗ ವೀಕ್ಷಕರಿಗೆ ಕಾಡುತ್ತಿದೆ. ಇಂದು ಇದಕ್ಕೆಲ್ಲ ಕಿಚ್ಚ ಸುದೀಪ್ ತೆರೆ ಎಳೆಯಲಿದ್ದಾರೆ.
ಇದನ್ನು ಓದಿ: BIGG BOSS Kannada: ಎರಡನೇ ವಾರಕ್ಕೆ ಬಿಗ್ಬಾಸ್ ಮನೆಯಿಂದ ಔಟ್ ಆಗೋದು ಇವರೇನಾ..?
ಹೌದು, ಬಿಗ್ಬಾಸ್ ಸೀಸನ್ 10ರಲ್ಲಿ ಈಗ ಒಟ್ಟು 16 ಜನ ಇದ್ದಾರೆ. ಈ 16 ಜನರಲ್ಲಿ ಒಬ್ಬರು ಇಂದು ಬಿಗ್ಬಾಸ್ ಮನೆಯಿಂದ ಆಚೆ ಬರೋದು ಪಕ್ಕಾ. ಬಿಗ್ಬಾಸ್ ಸೀಸನ್ 10ರ ಎರಡನೇ ವಾರದಲ್ಲಿ ಭಾಗ್ಯಶ್ರೀ, ತುಕಾಲಿ ಸಂತು, ಗೌರೀಶ್ ಅಕ್ಕಿ, ಸಂಗೀತಾ ಶೃಂಗೇರಿ, ತನಿಷಾ ಕುಪ್ಪಂಡ ಮತ್ತು ಕಾರ್ತಿಕ್ ಮಹೇಶ್ ಒಟ್ಟು ಆರು ಮಂದಿ ನಾಮಿನೇಟ್ ಆಗಿದ್ದರು. ಈ ಆರು ಜನರ ಪೈಕಿ ನಿನ್ನೆ ತುಕಾಲಿ ಸಂತೋಷ್ ಹಾಗೂ ಕಾರ್ತಿಕ್ ಮಹೇಶ್ ಈ ಇಬ್ಬರನ್ನು ಕಿಚ್ಚ ಸುದೀಪ್ ಸೇಫ್ ಮಾಡಿದ್ದಾರೆ. ಇನ್ನೂ ಇಂದಿನ ಕಿಚ್ಚನ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ 4 ಜನರಲ್ಲಿ ಬಿಗ್ಬಾಸ್ ಮನೆಯಿಂದ ಆಚೆ ಬರುವ ಸ್ಪರ್ಧಿಯ ಹೆಸರನ್ನು ಹೇಳುತ್ತಾರೆ. ಈ ಮೂಲಕ ಆ ಸ್ಪರ್ಧಿಯ ಪಯಣ ಅಂತ್ಯವಾಗಲಿದೆ.
ಮೂಲಗಳ ಮಾಹಿತಿ ಪ್ರಕಾರ ಕಿರುತೆರೆ ನಟಿ ಭಾಗ್ಯಶ್ರೀ ಅವರು ಬಿಗ್ಬಾಸ್ ಮನೆಯಿಂದ ಹೊರಗೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ಜೊತೆಗೆ ಪತ್ರಕರ್ತ ಗೌರೀಶ್ ಅಕ್ಕಿ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಈ ಹಿಂದೆ ಗೌರೀಶ್ ಅಕ್ಕಿ ಅವರು ಬಿಗ್ಬಾಸ್ ಮನೆಯಲ್ಲಿ ನಾನು ಮಿನಿಮಂ ಎರಡು ವಾರ, ಮ್ಯಾಕ್ಸಿಮಂ ನಾಲ್ಕು ವಾರ ಇರಬಹುದು ಅಂತ ಅಂದುಕೊಂಡು ಬಂದಿದ್ದೀನಿ ಎಂದು ಹೇಳಿದ್ದರು. ಹೀಗಾಗಿ, ಈ ವಾರ ತಾವೇ ಔಟ್ ಆಗಬಹುದು ಎಂದು ಗೌರೀಶ್ ಅಕ್ಕಿ ಊಹಿಸಿದ್ದಾರೆ. ಇದಕ್ಕೆಲ್ಲ ಇಂದು ಕಿಚ್ಚನ ಪಂಚಾಯಿತಿಯಲ್ಲಿ ಬಹಿರಂಗವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ