ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಶರಣು!
ಮೂರ್ನಾಲ್ಕು ದಿನಗಳ ಬಳಿಕ ಪತ್ತೆಯಾದ ಶವಗಳು
ಎಲ್ಲವೂ ಚೆನ್ನಾಗಿದ್ದ ಕುಟುಂಬದಲ್ಲಿ ಅದೇನಾಯ್ತು..?
ಮೈಸೂರು: ದುಡಿಯುವ ಅಪ್ಪ- ಅಮ್ಮ. ಮುದ್ದಾದ ಎರಡು ಮಕ್ಕಳು. ತಾವಾಯ್ತು, ತಮ್ಮ ಪಾಡಾಯ್ತು ಅಂತ ಇದ್ದ ಕುಟುಂಬ. ಆದ್ರೆ ಇಡೀ ಕುಟುಂಬ ಆತ್ಮಹತ್ಯೆಗೆ ಬಲಿಯಾಗಿದೆ. ಕೊಳೆತು ನಾರುತ್ತಿದ್ದ ಶವಗಳನ್ನು ಹೊರತೆಗೆದಿರುವ ಪೊಲೀಸರು, ಸಾವಿಗೆ ಕಾರಣ ಹುಡುಕುತ್ತಿದ್ದಾರೆ. ತಂದೆ ಮಹದೇವಸ್ವಾಮಿ, ತಾಯಿ ಅನಿತಾ, ಇಬ್ಬರು ಮಕ್ಕಳು ಚಂದ್ರಕಲಾ, ಮಹಾಲಕ್ಷ್ಮಿ ಮೃತ ದುರ್ದೈವಿಗಳು.
ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಲೂಕಿನ ಬರಡನಪುರ ಗ್ರಾಮದ ನಿವಾಸಿ ಮಹದೇವಸ್ವಾಮಿ, ಹುಣಸೂರು ತಾಲೂಕಿನ ಕರ್ಣಕುಪ್ಪೆ ಮೂಲದ ಅನಿತಾ, ಇವರ ಮಕ್ಕಳಾದ ಚಂದ್ರಕಲಾ ಮತ್ತು ಮಹಾಲಕ್ಷ್ಮಿ ಮೃತರು. ಮೈಸೂರು ನಗರದ ಚಾಮುಂಡಿಪುರಂ 3ನೇ ಕ್ರಾಸ್ನಲ್ಲಿ ಬಾಡಿಗೆಗೆ ಪಡೆದುಕೊಂಡಿದ್ದ ಮನೆಯಲ್ಲಿ ನಾಲ್ವರೂ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಾಲ್ವರೂ ಮೃತಪಟ್ಟು ಮೂರ್ನಾಲ್ಕು ದಿನಗಳಾಗಿದ್ದು, ಶವಗಳು ಕೊಳೆತು ನಾರುತ್ತಿವೆ.
ಮಹದೇವಸ್ವಾಮಿ ಹಾಗೂ ಅನಿತಾ ಅತ್ಯಂತ ಅನ್ಯೋನ್ಯವಾಗಿದ್ದ ದಂಪತಿ. ಮಹದೇವಸ್ವಾಮಿ ಮೈಸೂರಿನ ಬಂಡೀಪುರದಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ದಲ್ಲಾಳಿಯಾಗಿದ್ದರು. ಪತ್ನಿ ಅನಿತಾ ಕೂಡ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಜೀವನಕ್ಕೆ ಸಾಕಾಗುವಷ್ಟು ಆಸ್ತಿಪಾಸ್ತಿಯೂ ಇತ್ತು. ಆದ್ರೆ ಮಹದೇವಸ್ವಾಮಿ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದರು. ಕಾರಣವೇ ಇಲ್ಲದೆ ಲಕ್ಷ ಲಕ್ಷ ರೂಪಾಯಿ ಸಾಲದ ಹೊರೆಯನ್ನು ಮೈಮೇಲೆ ಏರಿಕೊಂಡಿದ್ದರು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂತ ಕುಟುಂಬಸ್ಥರು ಅಂದಾಜಿಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ