newsfirstkannada.com

ಓಮನ್ ದೇಶದಲ್ಲಿ ಬೆಳಗಾವಿ ಮೂಲದ 4 ಮಂದಿ ದಾರುಣ ಸಾವು; ಆಗಿದ್ದೇನು?

Share :

Published August 30, 2024 at 4:13pm

    ಬೆಳಗಾವಿ ಜಿಲ್ಲೆ ಗೋಕಾಕ ನಗರದ ನಿವಾಸಿಗಳ ದುರಂತ ಅಂತ್ಯ

    ಭಾರತಕ್ಕೆ ಮೃತದೇಹ ತರಲು ವಿದೇಶಾಂಗ ಇಲಾಖೆಗೆ ಮನವಿ

    ಓಮನ್‌ನ ಹೈಮಾ ನಗರದ ಬಳಿ ಸಂಭವಿಸಿದ ಭೀಕರ ದುರಂತ

ಬೆಳಗಾವಿ: ಓಮನ್ ದೇಶದಲ್ಲಿ ಭೀಕರ ಕಾರು ಅಪಘಾತ ಸಂಭವಿಸಿದ್ದು, ಗೋಕಾಕ್‌ ಮೂಲದ ನಾಲ್ವರು ಸಜೀವ ದಹನವಾಗಿದ್ದಾರೆ. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಮೃತ ದೇಹಗಳನ್ನು ಭಾರತಕ್ಕೆ ತರಲು ವಿದೇಶಾಂಗ ಇಲಾಖೆಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಗುಡ್‌ನ್ಯೂಸ್ ಕೊಟ್ಟ ಚಂದನ್ ಶೆಟ್ಟಿ, ನಿವೇದಿತಾ ಜೋಡಿ.. ವಿಚ್ಛೇದನದ ಬಳಿಕ ಹೊಸ ಜೀವನ ಆರಂಭ 

ಬೆಳಗಾವಿ ಜಿಲ್ಲೆ ಗೋಕಾಕ ನಗರದ ಪವನ್‌ ಕುಮಾರ್ ತಹಶೀಲ್ದಾರ್, ಪೂಜಾ ತಹಶೀಲ್ದಾರ್, ವಿಜಯಾ ತಹಶೀಲ್ದಾರ್, ಆದಿಶೇಷ ಬಸವರಾಜ್ ಮೃತರು.

ನಾಲ್ವರು ಕಾರಿನಲ್ಲಿ ಓಮನ್‌ಗೆ ತೆರಳುವಾಗ ಬೃಹತ್ ಗಾತ್ರದ ಲಾರಿಗೆ ಡಿಕ್ಕಿಯಾಗಿದೆ. ಲಾರಿ ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ಹೊತ್ತಿ ಉರಿದಿದ್ದು ಕಾರಿನಲ್ಲಿದ್ದ ನಾಲ್ವರು ಸುಟ್ಟು ಹೋಗಿದ್ದಾರೆ.

ಇದನ್ನೂ ಓದಿ: ದರ್ಶನ್‌ ಫ್ಯಾನ್ಸ್‌ಗೆ ಬಿಸಿ, ಬಿಸಿ ಕಜ್ಜಾಯ.. ಪೊಲೀಸರ ಲಾಠಿ ಚಾರ್ಜ್‌ಗೆ ಕರಿಯನ ಹುಡುಗರು ಚೆಲ್ಲಾಪಿಲ್ಲಿ! 

ಓಮನ್‌ನ ಹೈಮಾ ನಗರದ ಬಳಿ ಈ ಭೀಕರ ದುರಂತ ಸಂಭವಿಸಿದೆ. ಹೈಮಾ ಆಸ್ಪತ್ರೆಯ ಶವಾಗಾರದಲ್ಲಿ ಸಜೀವ ದಹನವಾದ ನಾಲ್ವರ ಶವವನ್ನು ಇರಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಓಮನ್ ದೇಶದಲ್ಲಿ ಬೆಳಗಾವಿ ಮೂಲದ 4 ಮಂದಿ ದಾರುಣ ಸಾವು; ಆಗಿದ್ದೇನು?

https://newsfirstlive.com/wp-content/uploads/2024/08/Belagavi-Family-Death.jpg

Load More