ದೀಪಾವಳಿ ಆಚರಿಸುವ ವೇಳೆ ನಡೆದ ದುರಂತ
ಮಗುವಿನ ಮೇಲೆ ಬಿದ್ದ ಪಟಾಕಿ, ತೀವ್ರ ಗಾಯ
ಮಗುವಿನ ಎದೆ ಮತ್ತು ಕೈಗಳಿಗೆ ಸುಟ್ಟ ಗಾಯ
ತಮಿಳುನಾಡು: ಪಟಾಕಿ ಸಿಡಿದು 4 ವರ್ಷದ ಹೆಣ್ಣು ಮಗು ಸಾವನ್ನಪ್ಪಿದ ಘಟನೆ ರಾಣಿಪೇಟೆಯಲ್ಲಿ ನಡೆದಿದೆ. ನಿಮಿಷಾ ಎಂಬ ಮಗು ಕುಟುಂಬದವರೊಂದಿಗೆ ದೀಪಾವಳಿ ಆಚರಿಸುವ ವೇಳೆ ಈ ದುರಂತ ಸಂಭವಿಸಿದೆ.
ರಮೇಶ್ ಮತ್ತು ಆತನ ಕುಟುಂಬದವರು ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಸಿಡಿಸುತ್ತಿದ್ದಾಗ ಆಕಸ್ಮಿಕವಾಗಿ ಮಗುವಿನ ಮೇಲೆ ಬಿದ್ದು ಸಿಡಿದಿದೆ. ಪರಿಣಾಮ ಮಗುವಿನ ಎದೆ ಮತ್ತು ಕೈಗಳಿಗೆ ಸುಟ್ಟ ಗಾಯಗಳಾಗಿತ್ತು.
ತಕ್ಷಣವೇ ಮಗುವನ್ನು ಚೇಯಾರ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟರಲ್ಲಿ ಮಗು ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಸದ್ಯ ಸ್ಥಳೀಯ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ