ಧಗಧಗ ಹೊತ್ತಿ ಉರಿದ 40ಕ್ಕೂ ಹೆಚ್ಚು ದೋಣಿಗಳು
ಬೆಂಕಿ ಜ್ವಾಲೆಗೆ ಮುಗಿಲೆತ್ತರಕ್ಕೆ ಆವರಿಸಿದ ಹೊಗೆ..!
ವಿಶಾಖಪಟ್ಟಣಂ ಮೀನುಗಾರಿಕಾ ಬಂದರ್ನಲ್ಲಿ ಘಟನೆ
ವಿಶಾಖಪಟ್ಟಣಂ: ಧಗಧಗನೇ ಹೊತ್ತಿ ಉರಿಯುತ್ತಿರುವ ಬೋಟ್ಗಳು.. ಬೆಂಕಿಯ ಜ್ವಾಲೆಗೆ ಮುಗಿಲೆತ್ತರಕ್ಕೆ ಆವರಿಸಿದ ಹೊಗೆ.. ಮತ್ತೊಂದೆಡೆ ನೀರು ಹಾಕಿ ಬೆಂಕಿ ಕಂಟ್ರೋಲ್ಗೆ ಮುಂದಾದ ಜನರು ಈ ಅವಘಡ ನಡೆದಿದ್ದು, ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಮೀನುಗಾರಿಕಾ ಬಂದರಿನಲ್ಲಿ..!
ಒಂದಲ್ಲ, ಎರಡಲ್ಲ, ಮೂರಲ್ಲ ಸುಮಾರು 40 ಬೆಲೆಬಾಳುವ ಬೋಟ್ಗಳು ನೀರಿನ ಮೇಲೆ ಧಗಧಗ ಹೊತ್ತಿ ಉರಿಯುತ್ತಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ನೀರು ಹಾಕಿ ಬೆಂಕಿ ನಿಯಂತ್ರಣಕ್ಕೆ ತರಲು ಯತ್ನಿಸುತ್ತಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನ ಮೀನುಗಾರಿಕಾ ಬಂದರಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಸುಮಾರು 40ಕ್ಕೂ ಹೆಚ್ಚು ಬೋಟ್ಗಳು ಸುಟ್ಟು ಕರಕಲಾಗಿವೆ.
ರಾತ್ರಿ ದೋಣಿಯಲ್ಲಿ ಪಾರ್ಟಿ ಮಾಡುವ ವೇಳೆ ಬೆಂಕಿ ಹೊತ್ತಿಕೊಂಡಿದೆ ಅಂತ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೊದಲು ಒಂದು ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಅಕ್ಕಪಕ್ಕದಲ್ಲಿದ್ದ ಎಲ್ಲಾ ದೋಣಿಗಳಿಗೂ ಬೆಂಕಿ ವ್ಯಾಪಿಸಿದೆ. ಇನ್ನು ಬೆಂಕಿ ನಂದಿಸಲು ನೌಕಾಪಡೆಯ ಹಡಗಿನಿಂದ ಬೆಂಕಿಯನ್ನು ಹತೋಟಿಗೆ ತರಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ