newsfirstkannada.com

‘ಗೃಹಲಕ್ಷ್ಮಿ’ ನೋಂದಣಿ ಹೆಸರಲ್ಲಿ ಯಾಮಾರಿಸಿದ ಕಳ್ಳ; 40 ಗ್ರಾಂ ಚಿನ್ನದ ಸರ ಕಳೆದುಕೊಂಡ ವೃದ್ಧೆ ಕಂಗಾಲು

Share :

27-07-2023

    ಗೃಹಲಕ್ಷ್ಮಿ ಯೋಜನೆ ನೋಂದಣಿ ಮಾಡಿಸಿಕೊಡುವುದಾಗಿ ವೃದ್ಧೆಗೆ ಮೋಸ

    ಯೋಜನೆಗೆ ವೈದ್ಯರ ಸಹಿ ಬೇಕು ಎಂದು ಹೇಳಿ ಆಸ್ಪತ್ರೆಗೆ ಕರೆದುಕೊಂಡು ಹೋದ

    ಒಂಟಿಯಾಗಿದ್ದ ವೃದ್ಧೆಯನ್ನು ಟಾರ್ಗೆಟ್ ಮಾಡಿ ಮಾಸ್ಟರ್​ ಪ್ಲ್ಯಾನ್ ಮಾಡಿದ ಕಳ್ಳ

ರಾಮನಗರ: ಗೃಹಲಕ್ಷ್ಮಿ ಅರ್ಜಿ ಸಲ್ಲಿಸಲು ಮಹಿಳೆಯರು ನಾ ಮುಂದು, ತಾ ಮುಂದು ಎಂದು ಕಚೇರಿಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಗೃಹಲಕ್ಷ್ಮಿ ಯೋಜನೆ ನೋಂದಣಿಯ ಹೆಸರಿನಲ್ಲಿ ವೃದ್ಧೆಯೊಬ್ಬರಿಗೆ ಮೋಸ ಮಾಡಿರೋ ಪ್ರಕರಣ ಬೆಳಕಿಗೆ ಬಂದಿದೆ.

ಗೃಹಲಕ್ಷ್ಮಿ ಅರ್ಜಿ ನೋಂದಣಿ ಮಾಡಿಸಿಕೊಡುವುದಾಗಿ ಹೇಳಿ ವೃದ್ಧೆಯನ್ನು ನಂಬಿಸಿದ ಅಪರಿಚಿತ ವ್ಯಕ್ತಿಯೊಬ್ಬ 40 ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿಯಾಗಿರುವ ಘಟನೆ ತಾಲೂಕಿನ ಚನ್ನಪಟ್ಟಣ ನಗರದ ಅಂಚೆ ಕಚೇರಿ ಸಮೀಪ ನಡೆದಿದೆ. ಚನ್ನಪಟ್ಟಣ ತಾಲೂಕಿನ ಹಾರೋಕೊಪ್ಪ ಗ್ರಾಮದ ಸಾವಿತ್ರಮ್ಮ (62) ಎಂಬ ಮಹಿಳೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಮ್ಮ ಮಗನನ್ನು ನೋಡಲು ಮಂಡ್ಯ ಆಸ್ಪತ್ರೆಗೆ ಹೋಗಿದ್ದವರು. ಈ ವೇಳೆ ಸ್ವಗ್ರಾಮಕ್ಕೆ ಹಿಂದಿರುಗಲು ಚನ್ನಪಟ್ಟಣಕ್ಕೆ ಬಂದಿದ್ದಾಗ ಈ ಕಳ್ಳತನ ನಡೆದಿದೆ.

ಒಂಟಿಯಾಗಿದ್ದ ವೃದ್ಧೆಯನ್ನು ಟಾರ್ಗೆಟ್ ಮಾಡಿದ ಕಳ್ಳನೊಬ್ಬ ಆಕೆಯ ಬಳಿ ಬಂದು ನಿಮಗೆ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಮಾಡಿಸಿ ಕೊಡುತ್ತೇನೆ ಎಂದು ನಂಬಿಸಿ ವೈದ್ಯರ ಸಹಿ ಬೇಕು ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆಸ್ಪತ್ರೆ ಬಳಿ ವೈದ್ಯರು ನಿನ್ನ ಕುತ್ತಿಗೆಯಲ್ಲಿರುವ ಸರವನ್ನು ನೋಡಿದರೆ ಸಹಿ ಮಾಡುವುದಿಲ್ಲ ಎಂದು ನಂಬಿಸಿ ಒಡವೆ ತೆಗೆಸಿ ಪರ್ಸ್​ನಲ್ಲಿ ಹಾಕುವಂತೆ ಹೇಳಿದ್ದಾನೆ. ಆತನ ಮಾತನ್ನು ನಂಬಿದ ವೃದ್ಧೆ ಪರ್ಸ್​ನಲ್ಲಿ ಒಡವೆ ಹಾಗೂ ಹಣ ಹಾಕಿದ್ದಾಳೆ.

ಈ ಸಮಯದಲ್ಲಿ ಆಕೆಯ ಗಮನ ಬೇರೆಡೆಗೆ ಸೆಳೆದು 40 ಗ್ರಾಂ ಚಿನ್ನದ ಸರವನ್ನು ತೆಗೆದುಕೊಂಡು ಅಂಚೆ ಕಚೇರಿ ಬಳಿ ಕರೆತಂದು ಕೂರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಚಿನ್ನದ ಸರವನ್ನು ಕಳೆದುಕೊಂಡ ವೃದ್ಧೆಯು ಕಂಗಾಲಾಗಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಚನ್ನಪಟ್ಟಣ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಗೃಹಲಕ್ಷ್ಮಿ’ ನೋಂದಣಿ ಹೆಸರಲ್ಲಿ ಯಾಮಾರಿಸಿದ ಕಳ್ಳ; 40 ಗ್ರಾಂ ಚಿನ್ನದ ಸರ ಕಳೆದುಕೊಂಡ ವೃದ್ಧೆ ಕಂಗಾಲು

https://newsfirstlive.com/wp-content/uploads/2023/07/gruhalakshmi-8.jpg

Load More