newsfirstkannada.com

ನನ್ನ ಪತ್ನಿಯ ಅರೆ ನಗ್ನಗೊಳಿಸಿ ಎದೆಗೆ ಒದ್ದು ಮಂಗಳಸೂತ್ರ ಕಿತ್ಕೊಂಡಿದ್ದಾರೆ -ಕಣ್ಣೀರಿಟ್ಟ ಯೋಧ

Share :

Published June 12, 2023 at 4:49am

    40 ಮಂದಿಯಿಂದ ಅಟ್ಯಾಕ್ ಆಗಿದೆಂದು ಆರೋಪ

    ದೇಶಾದ್ಯಂತ ಸೆನ್ಸಷನ್ ಕ್ರಿಯೇಟ್ ಮಾಡಿರುವ ಕೇಸ್

    ಹಲ್ಲೆಯೇ ಆಗಿಲ್ಲ ಎಂದ ತಮಿಳುನಾಡಿನ ಪೊಲೀಸರು

ತಮಿಳುನಾಡಿನ ತಿರುವನಂತಪುರಂ ಜಿಲ್ಲೆಯಲ್ಲಿ ಇತ್ತೀಚೆಗೆ ಯೋಧರೊಬ್ಬರ ಪತ್ನಿ ಮೇಲೆ ದೌರ್ಜನ್ಯ ನಡೆದಿದೆ ಎನ್ನಲಾಗಿರುವ ಆರೋಪ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.

ಯೋಧನ ಆರೋಪ ಏನು..?
‘ನನ್ನ ಪತ್ನಿಯನ್ನು ಅರೆ ನಗ್ನಗೊಳಿಸಿ ಅಮಾನವೀಯವಾಗಿ ಥಳಿಸಿದ್ದಾರೆ. ಸುಮಾರು 40 ಹೆಚ್ಚು ಕಿರಾತಕರು ಪತ್ನಿಯ ಎದೆ ಮತ್ತು ಕೆಳಹೊಟ್ಟೆಯ ಭಾಗಕ್ಕೆ ಒದ್ದು ಚಿತ್ರಹಿಂಸೆ ನೀಡಿದ್ದಾರೆ. ಸುಮಾರು 120 ಆರೋಪಿಗಳು ಒಂದೇ ಬಾರಿ ಅಟ್ಯಾಕ್ ಮಾಡಿದ್ದಾರೆ ಎಂದು ಸೇನೆಯಲ್ಲಿರುವ ಯೋಧ ವಿಡಿಯೋ ರಿಲೀಸ್ ಮಾಡಿ ಆರೋಪಿಸಿದ್ದಾರೆ.

ಯೋಧನ ಪತ್ನಿ ಆರೋಪ ಏನು..?
ಯೋಧನ ಪತ್ನಿ ಕೀರ್ತಿ (28) ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆ ಪ್ರಕಾರ, ಜೂನ್ 10 ರಂದು ನನ್ನ ಮೇಲೆ ಜಾಗ ಕಾಲಿ ಮಾಡುವ ವಿಚಾರಕ್ಕೆ ದಾಳಿಯಾಗಿದೆ. ಸುಮಾರು 40 ಮಂದಿ ಬಂದು ನನ್ನ ಮೇಲೆ ಅಟ್ಯಾಕ್ ಮಾಡಿದ್ದಾರೆ. ಅಂಗಡಿಯಲ್ಲಿದ್ದ ನನ್ನನ್ನು ಎಳೆದು, ಹೊರ ಹಾಕಲು ಪ್ರಯತ್ನಿಸಿದ್ದಾರೆ. ಅದಕ್ಕೆ ನಾನು ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ವೇಳೆ ನನ್ನ ಎದೆ ಮತ್ತು ಹೊಟ್ಟೆ ಭಾಗಗಕ್ಕೆ ಒದ್ದು ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲ, ನನ್ನ ಮಂಗಳ ಸೂತ್ರ ಹಾಗೂ ಮೊಬೈಲ್ ಫೋನ್​​​​ ಕದ್ದೊಯ್ದಿದ್ದಾರೆ ಎಂದು ಆರೋಪಿಸಿದ್ದಾಳೆ. ಸದ್ಯ ಕೀರ್ತಿ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಾರು ಈ ಯೋಧ..?
ಜವಾನ್ ಆಗಿರುವ ಪ್ರಭಾಕರನ್, ಸದ್ಯ ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಪತ್ನಿ ಮೇಲೆ ದಬ್ಬಾಳಿಕೆ ಆಗಿರುವ ಬಗ್ಗೆ ವಿಡಿಯೋ ಒಂದನ್ನು ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ನನ್ನ ಪತ್ನಿ ಮೇಲೆ ಸುಮಾರು 120 ಮಂದಿ ಅಟ್ಯಾಕ್ ಮಾಡಿದ್ದಾರೆ. ಮಾತ್ರವಲ್ಲ ಅವರಿಂದ ನನ್ನ ಕುಟುಂಬಕ್ಕೂ ಅಪಾಯ ಇದೆ. ದಯಮಾಡಿ ಕುಟುಂಬಕ್ಕೆ ರಕ್ಷಣೆ ನೀಡಿ ಎಂದು ಕಣ್ಣೀರಿಟ್ಟಿದ್ದಾರೆ.

ಆರೋಪ ನಿರಾಕರಿಸಿದ ಪೊಲೀಸರು
ಯೋಧ ಪ್ರಭಾಕರನ್ ಆರೋಪ ಮಾಡುತ್ತಿದ್ದಂತೆಯೇ ತಮಿಳುನಾಡಿನ ಪೊಲೀಸರು ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದಾರೆ. ಪ್ರಭಾಕರನ್ ಮಾವ ರಾಮು ಎಂಬಾತನ ತಂದೆಯಿಂದ ಅಂಗಡಿಯನ್ನು ಲೀಸ್​ಗೆ ಪಡೆದಿದ್ದರು. ರಾಮು ಅವರ ತಂದೆ ಇತ್ತೀಚೆಗೆ ನಿಧನರಾಗಿದ್ದಾರೆ. ಅಪ್ಪ ನಿಧನದ ಬೆನ್ನಲ್ಲೇ, ಅಂಗಡಿಯನ್ನು ವಾಪಸ್ ಪಡೆಯಲು ರಾಮು ನಿರ್ಧರಿಸಿದ್ದ. ಅದರಂತೆ, ಹಣವನ್ನು ಹೊಂದಿಸಿಕೊಂಡು ಪ್ರಭಾಕರನ್ ಅವರ ಹೆಂಡತಿಯ ಸಹೋದರರಾದ ಜೀವಾ ಮತ್ತು ಉದಯ ಬಳಿ ಬಂದಿದ್ದಾರೆ.

ಆಗ ರಾಮು ಮೇಲೆ ಕೀರ್ತಿ ಸಹೋದರರು ಅಟ್ಯಾಕ್ ಮಾಡಿದ್ದಾರೆ. ಈ ಘಟನೆ ಬಳಿಕ ರಾಮು ಬೆಂಬಲಿಗರು ಅಂಗಡಿಗೆ ಬಂದಾಗ ಸಣ್ಣ ಪುಟ್ಟ ಗಲಾಟೆ ಆಗಿದೆ. ಅಂಗಡಿಯಲ್ಲಿ ವಸ್ತುಗಳನ್ನು ಹೊರಗಡೆ ಎಸೆದಿದ್ದಾರೆ. ಇಲ್ಲಿ ಪ್ರಭಾಕರನ್ ಪತ್ನಿ ಹಾಗೂ ಆಕೆಯ ತಾಯಿ ಮೇಲೆ ಹಲ್ಲೆಯಾಗಿಲ್ಲ ಎಂದು ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನನ್ನ ಪತ್ನಿಯ ಅರೆ ನಗ್ನಗೊಳಿಸಿ ಎದೆಗೆ ಒದ್ದು ಮಂಗಳಸೂತ್ರ ಕಿತ್ಕೊಂಡಿದ್ದಾರೆ -ಕಣ್ಣೀರಿಟ್ಟ ಯೋಧ

https://newsfirstlive.com/wp-content/uploads/2023/06/TN_STORY.jpg

Load More