newsfirstkannada.com

ಅನುಮಾನಸ್ಪದ ರೀತಿಯಲ್ಲಿ ಮಹಿಳೆ ಸಾವು; ಅಂತ್ಯ ಸಂಸ್ಕಾರದ ವೇಳೆ ಬಯಲಾಯ್ತು ಸಾವಿನ ರಹಸ್ಯ!

Share :

13-08-2023

    ಹೆಬ್ಬೆಟ್ಟುನಿಂದ ಸಹಿ ಮಾಡಿಸಿದ ಗುರುತು ಪತ್ತೆ

    ಗಂಡನ ಮನೆಯವರು ಕೊಲೆ ಮಾಡಿರುವ ಶಂಕೆ!

    ಅಂತ್ಯ ಸಂಸ್ಕಾರ ಅರ್ಧಕ್ಕೆ ಕೈಬಿಟ್ಟ ಪೋಷಕರು

ಗದಗ: ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿರೋ ಘಟನೆ ಸಾಯಿ ನಗರದಲ್ಲಿ ನಡೆದಿದೆ. ನಗರ ನಿವಾಸಿ ಹಸೀನಾ ಬೇಪಾರಿ (40) ಮೃತ ಮಹಿಳೆ.

ಹಸೀನಾ ಬೇಪಾರಿ ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಪತಿಯ ಮನೆಯವರು ಹೇಳಿದ್ದಾರೆ. ಆದರೆ ಅಂತ್ಯ ಸಂಸ್ಕಾರ ಮಾಡುವ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಮೃತ ಮಹಿಳೆ ಕತ್ತಿನ ಭಾಗದಲ್ಲಿ ಹಗ್ಗದಿಂದ ಬಿಗಿದಿರುವ ಗುರುತು ಪತ್ತೆಯಾಗಿದೆ. ಜೊತೆಗೆ ಆಕೆಯ ಹೆಬ್ಬೆಟ್ಟಿನಿಂದ ಸಹಿ ಮಾಡಿಸಿದ ಗುರುತು ಸಹ ಪತ್ತೆಯಾಗಿದೆ. ಹಸೀನಾ ಬೇಪಾರಿಯನ್ನು ಆಕೆಯ ಪತಿಯೇ ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

ಇನ್ನು ಪೋಷಕರು ಈ ಕುರಿತು ಗದಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಗದಗದ ಬೆಟಗೇರಿ ಬಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನುಮಾನಸ್ಪದ ರೀತಿಯಲ್ಲಿ ಮಹಿಳೆ ಸಾವು; ಅಂತ್ಯ ಸಂಸ್ಕಾರದ ವೇಳೆ ಬಯಲಾಯ್ತು ಸಾವಿನ ರಹಸ್ಯ!

https://newsfirstlive.com/wp-content/uploads/2023/08/death-3.jpg

Load More