newsfirstkannada.com

ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ ಮತ್ತೆ ಹಿನ್ನಡೆ.. ಈಗ ಏನಾಯಿತು?

Share :

18-11-2023

    7ನೇ ದಿನಕ್ಕೆ ಕಾಲಿಟ್ಟ 40 ಕಾರ್ಮಿಕರ ಹೊರ ತೆಗೆಯುವ ರಕ್ಷಣಾಕಾರ್ಯ

    ಕಾರ್ಮಿಕರನ್ನು ಹೊರ ತೆಗೆಯುವ ಕಾರ್ಯಕ್ಕೆ ಮತ್ತೊಂದು ಹಿನ್ನಡೆ

    22 ಮೀಟರ್‌ಗಳಷ್ಟು ರಂಧ್ರ ಕೊರೆದ ನಂತರ ಮೆಷಿನ್ ಏನ್ ಆಗಿದೆ?

ಉತ್ತರಾಖಂಡ್​​ನ ಉತ್ತರಕಾಶಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗ ಕುಸಿದು ಅದರೊಳಗೆ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯು 7 ದಿನಕ್ಕೆ ಕಾಲಿಟ್ಟಿದೆ. ರಕ್ಷಣಾ ಕಾರ್ಯ ನಡೆಸುತ್ತಿರುವ ಸಿಬ್ಬಂದಿಗೆ ಮತ್ತೊಂದು ಹಿನ್ನೆಡೆ ಉಂಟಾಗಿದೆ.

ಸುರಂಗದೊಳಗೆ ಸಿಲುಕಿರುವ ಕಾರ್ಮಿಕರನ್ನು ರಕ್ಷಣೆ ಮಾಡಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಈಗಾಗಲೇ 130 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಕಾರ್ಮಿಕರನ್ನು ಹೊರಗೆ ತೆಗೆಯಲು ಶತ ಪ್ರಯತ್ನ ಮಾಡುತ್ತಿರುವ ರಕ್ಷಣಾ ಸಿಬ್ಬಂದಿಗೆ ಹಿನ್ನೆಡೆ ಉಂಟಾಗಿದೆ. ಹೈ-ಪವರ್ ಆಗರ್ ಡ್ರಿಲ್ಲಿಂಗ್ ಮೆಷಿನ್ 22 ಮೀಟರ್‌ಗಳಷ್ಟು ರಂಧ್ರ ಕೊರೆದ ನಂತರ ಹಾನಿಗೊಳಗಾಗಿದೆ. ಇದರಿಂದ ಕಾರ್ಯಾಚರಣೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.

ಬ್ಯಾಕ್​ಅಪ್​ಗಾಗಿ ಇನ್ನೊಂದು​ ಮೆಷಿನ್​​ ಅನ್ನು ಇಂದೋರ್​ನಿಂದ ವಿಮಾನದಲ್ಲಿ ತರಲಾಗುತ್ತಿದ್ದು, ಇಂದು ಬೆಳಗ್ಗೆ ಆಗಮಿಸುವ ನಿರೀಕ್ಷೆಯಿದೆ. ಸುರಂಗದೊಳಗೆ ಸಿಲುಕಿರುವ ಕಾರ್ಮಿಕರಿಗೆ ಪೈಪ್​ ಮೂಲಕ ಗಾಳಿ, ನೀರು ಹಾಗೂ ಆಹಾರವನ್ನು ಸಪ್ಲೇ ಮಾಡಲಾಗುತ್ತಿದ್ದು, ಕಾರ್ಮಿಕರು ಸಂಪರ್ಕದಲ್ಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ ಮತ್ತೆ ಹಿನ್ನಡೆ.. ಈಗ ಏನಾಯಿತು?

https://newsfirstlive.com/wp-content/uploads/2023/11/UK.jpg

Load More