newsfirstkannada.com

16 ವರ್ಷದ ಬಾಲಕನ ಜೊತೆ 41 ವರ್ಷದ ಮಹಿಳೆಯ ಮದುವೆ; ಈ ವಿಚಿತ್ರ ವಿವಾಹಕ್ಕೆ ಕಾರಣವೇ ಬೇರೆ!

Share :

12-08-2023

    ಸ್ನೇಹಿತೆಯ ಮಗನ ಜತೆ ಮದುವೆಯಾದ 41 ವರ್ಷದ ಮಹಿಳೆ

    25 ವರ್ಷ ವಯಸ್ಸಿನ ಅಂತರವಿದ್ರೂ ಅಪರೂಪದ ಮದುವೆ

    ನವದಂಪತಿ ಫೋಟೋ ನೋಡಿ ನೆಟ್ಟಿಗರು ಫುಲ್ ಕಕ್ಕಾಬಿಕ್ಕಿ

ಮದುವೆಯೆಂಬುದು ಜನುಮ ಜನುಮದ ಅನುಬಂಧ. ತಲತಲಾಂತರದಿಂದಲೂ ಗಂಡು ತನ್ನ ವಯಸ್ಸಿಗಿಂತ ಕಿರಿಯ ಹೆಣ್ಣನ್ನು ಮದುವೆಯಾಗುವ ಸಂಪ್ರದಾಯ ರೂಢಿಯಲ್ಲಿದೆ. ಆದರೆ ಇತ್ತೀಚಿನ ಕಾಲದಲ್ಲಿ ವಯಸ್ಸಿನ ಅಂತರವನ್ನು ಗಮನಿಸದೆ ಅದೆಷ್ಟೋ ಜನರು ಮದುವೆಯಾಗಿ ಬಿಡುತ್ತಾರೆ. ಸದ್ಯ ಇದಕ್ಕೆ ಸಾಕ್ಷಿಯೆಂಬಂತೆ ಹೊಸ ಮದುವೆಯ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಯಸ್ಸಾದ ಗಂಡ ಮತ್ತು ಚಿಕ್ಕ ಹೆಂಡತಿಯಂತಹ ಅನೇಕ ಜೋಡಿಗಳನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲಿ 16 ವರ್ಷದ ಬಾಲಕನೊರ್ವ 41 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾನೆ. ಈ ಘಟನೆ ನಡೆದಿದ್ದು ಇಂಡೋನೇಷ್ಯಾದಲ್ಲಿ.

41 ವರ್ಷದ ಮಹಿಳೆಯೊಬ್ಬಳು ತನ್ನ ಸ್ನೇಹಿತನ ಮಗನಾದ 16 ವರ್ಷದ ಹುಡುಗನನ್ನು ಮದುವೆಯಾಗಿದ್ದಾಳೆ. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಜೋಡಿಯು ಅದ್ಧೂರಿಯಾಗಿ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ.  ಜುಲೈ 30ರಂದು ಪಶ್ಚಿಮ ಕಲಿಮಂಟನ್ ಸ್ಥಳದಲ್ಲಿ ಈ ಜೋಡಿ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ. 41 ವರ್ಷದ ಮಹಿಳೆಯ ಹೆಸರು ಮರಿಯಾನಾ. 16 ವರ್ಷದ ಬಾಲಕ ಹೆಸರು ಕೆವಿನ್. ಈ ಇಬ್ಬರ 25 ವರ್ಷಗಳ ವಯಸ್ಸಿನ ಅಂತರವನ್ನು ಹೊಂದಿರುವ ದಂಪತಿಗಳಾಗಿದ್ದಾರೆ. ಮರಿಯಾನಾ ಬಿಳಿ ಬಣ್ಣದ ಗೌನ್‌ನಲ್ಲಿ ಫೋಟೋಗೆ ಪೋಸ್​ ಕೊಟ್ಟಿದ್ದಾಳೆ. ಕೆವಿನ್ ಡ್ಯಾಶಿಂಗ್ ಸೂಟ್ ಧರಿಸಿಕೊಂಡಿದ್ದಾನೆ. ಈ ಇಬ್ಬರು ಉಂಗುರವನ್ನು ಬದಲಾಯಿಸಿಕೊಳ್ಳುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೋ ನೋಡಿದ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್ ಮಾಡಿದ್ದಾರೆ. ಇಬ್ಬರನ್ನು ನೋಡುತ್ತಿದ್ದರೆ ತಾಯಿ ಮತ್ತು ಮಗನ ರೀತಿಯಲ್ಲಿ ಕಾಣುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.

41 ವರ್ಷದ ಮರಿಯಾನಾ ತಮ್ಮ ಸ್ನೇಹಿತೆಯ ಮಗನನ್ನೇ ಮದುವೆಯಾಗಿರುವುದು ವಿಶೇಷ. ಕೆವಿನ್‌ನ ತಾಯಿ ಲಿಸಾ ಮರಿಯಾನಾರನ್ನು ಸೊಸೆಯೆಂದು ಸ್ವೀಕರಿಸಿ ಶುಭ ಹಾರೈಸಿದ್ದಾರೆ. ಕೆವಿನ್‌ನ ತಾಯಿ ಲಿಸಾ ಮರಿಯಾನಾ ಸ್ನೇಹಿತೆಯಾಗಿದ್ದಾಳೆ. ಈ ಮದುವೆಯನ್ನು ಮಾಡಲು ಮುಖ್ಯ ಕಾರಣವೆಂದರೆ ಕಿರಾಣಿ ಅಂಗಡಿಯ ಮಾಲೀಕೆಯಾಗಿರುವ ಮರಿಯಾನಾಗೆ ಈ ಹಿಂದೆ ವ್ಯಕ್ತಿಯೊಬ್ಬನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆದರೆ ಹಲವು ಕಾರಣಗಳಿಂದ ಮರಿಯಾನಾ ಎಂಗೇಜ್‌ಮೆಂಟ್ ಮುರಿದುಬಿದ್ದಿತ್ತು. ಹೀಗಾಗಿ ಖಿನ್ನತೆಗೆ ಒಳಗಾಗಿದ್ದ ಮರಿಯಾನಾ ನೋಡಿದ ಲಿಸಾ ತನ್ನ ಮಗನ ಜೊತೆ ಖುಷಿಯಿಂದ ಮದುವೆ ಮಾಡಿಸಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

16 ವರ್ಷದ ಬಾಲಕನ ಜೊತೆ 41 ವರ್ಷದ ಮಹಿಳೆಯ ಮದುವೆ; ಈ ವಿಚಿತ್ರ ವಿವಾಹಕ್ಕೆ ಕಾರಣವೇ ಬೇರೆ!

https://newsfirstlive.com/wp-content/uploads/2023/08/marrige.jpg

Load More