ಮಳೆಯ ಕೊರತೆ, ಅನ್ನದಾತರ ಮೊಗದಲ್ಲಿ ಕಾರ್ಮೋಡ
ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು ರೈತರು ಆತ್ಮಹತ್ಯೆ..?
ಕರುನಾಡಿನ ರೈತರ ಬದುಕಿಗೆ ಗ್ಯಾರಂಟಿ ಕೊಡಿ: ಹೆಚ್ಡಿಕೆ
ಕಳೆದೆರಡು ತಿಂಗಳಲ್ಲಿ ಬರೋಬ್ಬರಿ 42 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆಂಬ ವರದಿ ಹೊರಬಿದ್ದಿರೋದು ದೊಟ್ಟ ಮಟ್ಟದ ಚರ್ಚೆ ಹುಟ್ಟುಹಾಕಿದೆ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ ಅಂತಾ ಪ್ರತಿಪಕ್ಷಗಳು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿವೆ. ಆದ್ರೆ ಕೃಷಿ ಸಚಿವರು ಮಾತ್ರ ರೈತರ ಆತ್ಮಹತ್ಯೆ ವರದಿಯೇ ಸುಳ್ಳು ಅಂತಾ ತಳ್ಳಿಹಾಕಿದ್ದಾರೆ.
ಕರುನಾಡಲ್ಲಿ ಹಲವೆಡೆ ಮುಂಗಾರು ಕೈಕೊಟ್ಟಿದೆ. ಬಿತ್ತನೆ ಮಾಡಿದ್ದ ಬೀಜಗಳು ಭೂಮಿಯಲ್ಲೇ ಕೊಳೆಯುತ್ತಿದೆ. ರಾಜ್ಯದಲ್ಲಿ ಬರಗಾಲದ ಕಾರ್ಮೋಡ ಆವರಿಸಿದೆ. ಅಯ್ಯೂ ಇವತ್ತಾದ್ರೂ ಧರೆಗೆ ಬಾರಯ್ಯ.. ಈಗಲೋ.. ಆಗಲೋ.. ಬೇಗ ಬಂದುಬಿಡು ಅಂತ ರೈತರು ಮುಗಿಯದ ದೇವರಿಲ್ಲ. ಮಾಡದ ಪೂಜೆ ಪುನಸ್ಕಾರಗಳಿಲ್ಲ. ನಿಜಕ್ಕೂ ಅನ್ನದಾತರ ಗೋಳು ಹೇಳಿ ತೀರದ್ದಾಗಿದೆ.
2 ತಿಂಗಳಲ್ಲಿ 42 ಮಂದಿ ರೈತರು ಆತ್ನಹತ್ಯೆಗೆ ಶರಣಾದ ಬಗ್ಗೆ ವರದಿ
ಮಳೆಯ ಕೊರತೆಯಿಂದಾಗಿ ರಾಜ್ಯದ ಅನ್ನದಾತರ ಮೊಗದಲ್ಲಿ ಆತಂಕದ ಕಾರ್ಮೋಡ ಆವರಿಸಿದೆ. ಇದಕ್ಕೆ ಇಂಬು ನೀಡುವಂತೆ ಕಳೆದ 2 ತಿಂಗಳ ಅವಧಿಯಲ್ಲಿ ರಾಜ್ಯಾದ್ಯಂತ ಬರೋಬ್ಬರಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿ ಹೊರಬಿದ್ದಿದೆ. ನಿಜ್ಜಕೂ ಇಂಥದ್ದೊಂದು ವರದಿ ಕರುನಾಡನ್ನು ಕಂಗಾಲು ಮಾಡಿದೆ.
ಎಲ್ಲಿ ಎಷ್ಟು ಆತ್ಮಹತ್ಯೆ?
ಹಾವೇರಿ ಜಿಲ್ಲೆ – 18
ಹು-ಧಾರವಾಡ ಜಿಲ್ಲೆ- 6
ಮೈಸೂರು ಜಿಲ್ಲೆ – 3
ಶಿವಮೊಗ್ಗ ಜಿಲ್ಲೆ -3
ಬೀದರ್ ಜಿಲ್ಲೆ – 3
ವಿಜಯನಗರ ಜಿಲ್ಲೆ -3
ಬಳ್ಳಾರಿ ಜಿಲ್ಲೆ – 2
ಯಾದಗಿರಿ, ಚಿಕ್ಕಬಳ್ಳಾಪುರ
ಕೊಪ್ಪಳ, ಗದಗ – ತಲಾ 1
ಹಾವೇರಿ ಜಿಲ್ಲೆಯಲ್ಲಿ ಅತ್ಯಧಿಕ ಅಂದ್ರೆ 18 ಜನ ಅನ್ನದಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿ 6 ರೈತರು, ಮೈಸೂರು, ಶಿವಮೊಗ್ಗ, ಬೀದರ್, ವಿಜಯನಗರ ಜಿಲ್ಲೆಗಳಲ್ಲಿ ತಲಾ ಮೂವರು ಅನ್ನದಾತರು ಸಾವಿನ ದಾರಿ ತುಳಿದಿದ್ದಾರೆ. ಇನ್ನು ಬಳ್ಳಾರಿ ಜಿಲ್ಲೆಯಲ್ಲಿ ಇಬ್ಬರು, ಯಾದಗಿರಿ, ಚಿಕ್ಕಬಳ್ಳಾಪುರ, ಕೊಪ್ಪಳ ಗದದ ಜಿಲ್ಲೆಯಲ್ಲಿ ತಲಾ ಒಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಹೇಳಲಾಗ್ತಿದೆ.
ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್ಡಿಕೆ ಕಿಡಿ
ಇನ್ನು ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಇದೊಂದು ದರಿದ್ರ ಸರ್ಕಾರ ಅಂತಾ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ಕಳೆದ ಎರಡು ತಿಂಗಳಿಂದ 42 ರೈತ ಕುಟುಂಬಗಳ ಆತ್ಮಹತ್ಯೆ ಆಗಿದೆ. ಈ ಸರ್ಕಾರಕ್ಕೆ ರೈತರ ಆತ್ಮಹತ್ಯೆ ಬಗ್ಗೆ ಚಿಂತೆ ಇಲ್ಲ. ಬಜೆಟ್‌ನಲ್ಲೂ ಐದು ಗ್ಯಾರಂಟಿಗಳ ಹೆಸರಲ್ಲಿ ಕೃಷಿ ಇಲಾಖೆಯನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಅಂತಾ ಕಿಡಿಕಾರಿದ್ದಾರೆ.
ಕೇವಲ ಹೆಚ್.ಡಿ ಕುಮಾರಸ್ವಾಮಿ ಮಾತ್ರ ಅಲ್ಲ. ಮಾಜಿ ಸಿಎಂ ಬೊಮ್ಮಾಯಿ ಕೂಡ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈತರ ಆತ್ಮಹತ್ಯೆ ಮರುಕಳಿಸುವಂತೆ ಕಾಣಿಸುತ್ತಿದೆ ಅಂತಾ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ
ಹಲವಾರು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ವರದಿಗಳು ಬರುತ್ತಿವೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸದೇ, ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಈ ಹಿಂದೆ 2013-18 ರಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆಯಾಗಿರುವುದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಅದು ಮರುಕಳಿಸುವಂತೆ ಕಾಣಿಸುತ್ತಿದೆ.
ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ
ರೈತರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ ಅಂತಾ ಪ್ರತಿಪಕ್ಷಗಳು ಆರೋಪಿಸಿದ್ರೆ, ಇತ್ತ ಅನ್ನದಾರ ಆತ್ನಹತ್ಯೆಯ ವರದಿಯನ್ನ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಳ್ಳಿ ಹಾಕಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ರೈತರ ಆತ್ಮಹತ್ಯೆ ಸಂಖ್ಯೆ ಕಡಿಮೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ 6 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಲ್ಲಿ 18 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಸುಳ್ಳು ಎಂದಿದ್ದಾರೆ. ರೈತರ ಆತ್ಮಹತ್ಯೆಯಲ್ಲೂ ರಾಜಕಾರಣ ಬೆರೆಸುವುದು ಒಳ್ಳೆಯದಲ್ಲ ಅಂತಾ ಕಿಡಿಕಾರಿದ್ದಾರೆ.
ಪ್ರತಿಪಕ್ಷಗಳೇನೋ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಆತ್ಮಹತ್ಯೆ ಬಗ್ಗೆ ಚಿಂತೆಯಿಲ್ಲ ಅಂತಾ ಕಿಡಿಕಾರಿವೆ. ಆದ್ರೆ ರಾಜ್ಯ ಸರ್ಕಾರ ಮಾತ್ರ ಪ್ರತಿಪಕ್ಷಗಳ ಆರೋಪವೇ ಸುಳ್ಳು ಅಂತಾ ತಳ್ಳಿಹಾಕಿದೆ. ರೈತರ ಆತ್ಮಹತ್ಯೆ ವರದಿಯೇ ಸುಳ್ಳು ಅಂತಾ ಗುಡುಗಿದೆ. ಈ ಆರೋಪ ಪ್ರತ್ಯಾರೋಪಗಳ ಮಧ್ಯೆ ಮಳೆ ಇಲ್ಲದೇ ಅನ್ನದಾತರು ಕಂಗಾಲಾಗಿರೋದು ಮಾತ್ರ ಸುಳ್ಳಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ