newsfirstkannada.com

ಬರೀ 999 ರೂಪಾಯಿಗೆ 4G ಫೋನ್‌; ಹೊಸ ಜಿಯೋ ಭಾರತ್‌ನಲ್ಲಿ ಏನೆಲ್ಲಾ ಫ್ರೀ ಆಫರ್ ಇದೆ ಗೊತ್ತಾ?

Share :

03-07-2023

    999 ರೂಪಾಯಿಗೆ ಭಾರತ್ ಫೋನ್ ತಗೊಂಡ್ರೆ 14 GB ಡಾಟಾ ಫ್ರೀ

    ರಿಲಯನ್ಸ್‌ 4G ಫೋನ್ ಖರೀದಿಸಿದ್ರೆ ಶೇ. 30ರಷ್ಟು ಹಣ ಉಳಿತಾಯ

    2016ರಲ್ಲಿ ಕ್ರಾಂತಿ ಮಾಡಿದ್ದ ರಿಲಯನ್ಸ್ ಜಿಯೋ ಮತ್ತೆ ಹೊಸ ಸಂಚಲನ

ಮುಂಬೈ: ಇಂಟರ್‌ನೆಟ್‌ ಫ್ರೀ.. ವಾಯ್ಸ್‌ಕಾಲ್‌ ಫ್ರೀ.. ಸಿಮ್‌ ಕಾರ್ಡ್‌ ಫ್ರೀ.. 2016ರಲ್ಲಿ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಿದ್ದ ರಿಲಯನ್ಸ್ ಜಿಯೋ ಇವತ್ತು ಮತ್ತೊಂದು ಸಂಚಲನ ಸೃಷ್ಟಿಸಿದೆ. ಕೇವಲ 999 ರೂಪಾಯಿಗೆ ಜಿಯೋ ಭಾರತ್ ಫೋನ್ ಅನ್ನು ಮಾರಕಟ್ಟೆಗೆ ಬಿಡುಗಡೆ ಮಾಡಿದ್ದು, ಗ್ರಾಹಕರಿಗೆ ಭರ್ಜರಿ ಆಫರ್ ಕೊಟ್ಟಿದೆ.

999 ರೂಪಾಯಿಗೆ ಭಾರತ್ ಫೋನ್ ಲಾಂಚ್ ಮಾಡಿರುವ ಜಿಯೋ ಅತ್ಯಾಕರ್ಷಕ ಸೇವೆಗಳನ್ನು ಘೋಷಿಸಿದೆ. ಜಿಯೋ ಭಾರತ್ ಪೋನ್‌ಗೆ 123 ರೂಪಾಯಿ ರಿಚಾರ್ಜ್‌ ಮಾಡಿದ್ರೆ 28 ದಿನ ಅನಿಯಮಿತ ವಾಯ್ಸ್ ಕಾಲ್ ಹಾಗೂ 14 GB ಡಾಟಾ ಬಳಸಲು ಅವಕಾಶವಿದೆ. 179 ರೂಪಾಯಿ ಪ್ಲಾನ್‌ಗೆ 28 ದಿನ ವಾಯ್ಸ್ ಕಾಲ್ ಹಾಗೂ 2GB ಡಾಟಾ ಸಿಗಲಿದೆ. 1,234 ರೂಪಾಯಿ ರಿಚಾರ್ಜ್ ಮಾಡಿದ್ರೆ ಒಂದು ವರ್ಷಕ್ಕೆ ಅನಿಯಮಿತ ವಾಯ್ಸ್ ಕಾಲ್, 168 GB ಡಾಟಾ ಇದ್ದು ಪ್ರತಿದಿನ 0.5GB ಡಾಟಾ ಬಳಸಬಹುದಾಗಿದೆ.

ರಿಲಯನ್ಸ್ ಜಿಯೋ ಭಾರತ್ ಫೋನ್ ಅನ್ನು ಕಾರ್ಬನ್ ಕಂಪನಿಯ ಸಹಭಾಗಿತ್ವದೊಂದಿಗೆ ತಯಾರಿಸಲಾಗಿದೆ. 2G ಮುಕ್ತ ಭಾರತದ ಪರಿಕಲ್ಪನೆಯಲ್ಲಿ ಅತಿ ಕಡಿಮೆ ಬೆಲೆಯ 4G ಮೊಬೈಲ್ ಫೋನ್ ಪರಿಚಯಿಸಿದೆ. ಈ ಫೋನ್ ಖರೀದಿಸುವುದರಿಂದ ಶೇಕಡಾ 30ರಷ್ಟು ಹಣ ಉಳಿಸಬಹುದು. ಸದ್ಯ 1 ಮಿಲಿಯನ್ ಜಿಯೋ ಭಾರತ್ ಫೋನ್ ಅನ್ನು ಪ್ರಾಯೋಗಿಕವಾಗಿ ಮಾರುಕಟ್ಟೆ ಬಿಡಲಾಗಿದೆ. ಮುಂದಿನ ದಿನಗಳಲ್ಲಿ ಅತಿ ಕಡಿಮೆ ದರದಲ್ಲಿ 250 ಮಿಲಿಯನ್ ಗ್ರಾಹಕರನ್ನು ತಲುಪುವ ಗುರಿ ಹೊಂದಿದೆ. 6 ವರ್ಷದ ಹಿಂದೆ ಕ್ರಾಂತಿ ಮಾಡಿದ್ದ ರಿಲಯನ್ಸ್ ಜಿಯೋ ಮತ್ತೊಂದು ಕ್ರಾಂತಿಗೆ ರೆಡಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೀ 999 ರೂಪಾಯಿಗೆ 4G ಫೋನ್‌; ಹೊಸ ಜಿಯೋ ಭಾರತ್‌ನಲ್ಲಿ ಏನೆಲ್ಲಾ ಫ್ರೀ ಆಫರ್ ಇದೆ ಗೊತ್ತಾ?

https://newsfirstlive.com/wp-content/uploads/2023/07/Jio-Phone.jpg

Load More