ಚಿನ್ನದ ಅಂಗಡಿಯನ್ನೇ ಗುಡಿಸಿ ಗುಂಡಾಂತರ ಮಾಡಿದ್ದ ಕೆಲಸಗಾರ!
ಒಳ್ಳೆಯವನು ಅಂತ ಕೆಲಸಕ್ಕೆ ಸೇರಿಸಿಕೊಂಡ ಮಾಲೀಕ ಶಾಕ್!
2 ಅರೆಸ್ಟ್ ಪರಾರಿಯಾದ ಓರ್ವ ಆರೋಪಿಗಾಗಿ ಪೊಲೀಸರ ಬಲೆ
ಬೆಂಗಳೂರಲ್ಲಿ ಯಾರಾದರೂ ಕೆಲಸ ಕೇಳ್ಕೊಂಡು ಬರ್ತಾರೆ ಅಂದ್ರೆ ಕೆಲಸಕ್ಕೆ ಸೇರಿಸಿಕೊಳ್ಳೋದೇ ದೊಡ್ಡ ತಪ್ಪು ಅನ್ನೋವಂತಾಗಿದೆ. ಎಷ್ಟೇ ಒಳ್ಳೆಯವನು ಅಂತ ಅನಿಸಿದ್ರು, ಒಳ್ಳೆ ಕೆಲಸ ಮಾಡಿದ್ರು ನಂಬೋಕು ಮುಂಚೆ ಎರಡೆರಡು ಸಲ ಕ್ರಾಸ್ ಚೆಕ್ ಮಾಡಿಕೊಳ್ಳಿ. ಯಾಕಂದ್ರೆ ಇಲ್ಲೊಬ್ಬ ವ್ಯಕ್ತಿ ಒಳ್ಳೆಯವನಂತೆ ನಟಿಸಿ ಚಿನ್ನದ ಅಂಗಡಿಯನ್ನೇ ಗುಡಿಸಿ ಗುಂಡಾಂತರ ಮಾಡಿದ್ದಾನೆ. ಬರೋಬ್ಬರಿ ನಾಲ್ಕು ಮೂಟೆಯಲ್ಲಿ ಚಿನ್ನ, ಬೆಳ್ಳಿ ಕದ್ದು ಎಸ್ಕೇಪ್ ಆಗಿದ್ದಾನೆ.
ಈಗಿನ ಕಾಲದಲ್ಲಿ ಯಾರನ್ನ ನಂಬೋದು ಯಾರನ್ನ ಬಿಡೋದು ಅಂತಾನೋ ಗೊತ್ತಾಗಲ್ಲ. ಯಾಕಂದ್ರೆ ಯಾರೂ ಒಳ್ಳೆಯವರು, ಯಾರೂ ಒಳ್ಳೆಯವರಲ್ಲ ಅನ್ನೋದು ಗೊತ್ತೇ ಆಗಲ್ಲ. ಮನೆ, ಅಂಗಡಿಗಳಲ್ಲಿ ಕೆಲಸಕ್ಕೆ ಯಾರನ್ನಾದರೂ ಸೇರಿಸಿಕೊಳ್ಳಬೇಕು ಅಂದ್ರೆ ಎರಡೆರಡು ಸಲ ಯೋಚನೆ ಮಾಡಬೇಕು ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಲ್ಪ ಎಚ್ಚರ ತಪ್ಪಿದ್ರೂ ಮನೆ-ಮಠ ಎಲ್ಲವನ್ನೂ ಗುಡಿಸಿ ಗುಂಡಾಂತರ ಮಾಡೋ ಖದೀಮರು ನಮ್ಮ ನಡುವೆ ಇದ್ದಾರೆ.
ಒಳ್ಳೆಯವನು ಅಂತ ಕೆಲಸಕ್ಕೆ ಸೇರ್ಕೊಂಡ! ಸ್ಕೆಚ್ ಹಾಕಿ ಕನ್ನ ಹಾಕಿದ!
ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಘಟನೆ ನಡೆದಿದೆ. ಕೆಲಸ ಕಳೆದುಕೊಂಡು ಬಂದ ರಾಜಸ್ಥಾನಿ ವ್ಯಕ್ತಿಯೊಬ್ಬ ಮಾಲೀಕನಿಗೆ ಕನ್ನಾ ಹಾಕಿ ಕೋಟ್ಯಾಂತರ ಮೌಲ್ಯದ ಚಿನ್ನಾಭರಣವನ್ನ ಕದ್ದು ಪರಾರಿಯಾಗಿದ್ದಾನೆ. ಈ ಕೇಸ್ನ ಬೆಂಗಳೂರು ಪೊಲೀಸರು ಚೇಸ್ ಮಾಡಿದ್ದು ಖತರ್ನಾಕ್ ಖದೀಮರ ಹೆಡೆಮುರಿ ಕಟ್ಟಿದ್ದಾರೆ. ಅರವಿಂದ್ ಕುಮಾರ್ ತಾಡೆ ಬಹಳ ವರ್ಷಗಳಿಂದ ಬೆಂಗಳೂರಿನಲ್ಲಿ ಚಿನ್ನದ ವ್ಯಾಪಾರ ಮಾಡ್ತಿದ್ದಾರೆ. ಹಲಸೂರ್ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಂಚಾನಾ ಜ್ಯೂವಲೆರ್ಸ್ ಎನ್ನುವ ಅಂಗಡಿ ಇಟ್ಟು ಚಿನ್ನ, ಬೆಳ್ಳಿಯ ವ್ಯಾಪಾರದ ಜೊತೆ ಪುರಾತನ ವಸ್ತುಗಳ ಮಾರಾಟ ಸಹ ಮಾಡ್ತಿದ್ದರು.
ಈ ನಡುವೆ ರಾಜಸ್ಥಾನ ಮೂಲದ ಕೇತರಾಮ್ ಎಂಬಾತ ಅರವಿಂದ್ ತಾಡೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಚೆನ್ನಾಗಿ ಕಲಸ ಮಾಡಿ ಭೇಷ್ ಎನಿಸಿಕೊಂಡಿದ್ದ ಕೇತರಾಮ್, ಮಾಲೀಕ ಹೇಳಿದ ಕೆಲಸವನ್ನೆಲ್ಲಾ ಚಾಚು ತಪ್ಪದೇ ಮಾಡ್ತಿದ್ದ. ಮಾಲೀಕನ ಜೊತೆ ಸುತ್ತಾಡಿ ವ್ಯವಹಾರವನ್ನೆಲ್ಲಾ ತಿಳಿದುಕೊಂಡಿದ್ದ. ಒಳ್ಳೆ ವ್ಯಕ್ತಿ ಅಂತ ನಂಬಿಕೆನೂ ಗಳಿಸಿಕೊಂಡಿದ್ದ. ಆದ್ರೆ ಇಷ್ಟು ಒಳ್ಳೆಯವನಾಗಿದ್ದ ಕೇತರಾಮ್ ತನ್ನ ಅಂಗಡಿಯನ್ನೇ ಗುಡಿಸಿ ಗುಂಡಾಂತರ ಮಾಡ್ತಾನೆ ಅಂತ ಮಾಲೀಕನಿಗೇ ಗೊತ್ತೇ ಆಗಲಿಲ್ಲ. ಒಳ್ಳೆಯವನು ಅಂತ ಕೆಲಸ ಕೊಟ್ಟಿದ್ದರು. ಅದೇ ಒಳ್ಳೆತನವನ್ನ ಅಸ್ತ್ರವನ್ನಾಗಿ ಮಾಡ್ಕೊಂಡು ನಂಬಿಸಿದ ಕೇತರಾಮ್, ಕೋಟ್ಯಾಂತರ ಮೌಲ್ಯದ ಬೆಲೆ ಬಾಳುವ ಚಿನ್ನಾಭರಣಗಳನ್ನ ಕದ್ದು ಪರಾರಿಯಾಗಿದ್ದ.
ಅದು ದಸರಾ ಹಬ್ಬದ ಸಂದರ್ಭ. ಹಬ್ಬದ ವಿಶೇಷವಾಗಿ ಚಿನ್ನದ ಅಂಗಡಿ ಮಾಲೀಕ ಅರವಿಂದ್ ಕುಮಾರ್ ತಾಡೆ ತನ್ನ ಫ್ಯಾಮಿಲಿ ಜೊತೆ ಮುಂಬೈಗೆ ತೆರಳಿದ್ದ. ಇದೇ ಸಮಯಕ್ಕಾಗಿ ಸಂಚು ಹಾಕಿ ಕೂತಿದ್ದ ಕೇತರಾಮ್ ತನ್ನ ಇಬ್ಬರು ಗೆಳಯರನ್ನ ಕರೆಸಿಕೊಂಡು ಕಾಂಚಾನ ಜ್ಯೂವಲೆರ್ಸ್ ಶಾಪ್ನ ಲೂಟಿ ಮಾಡಿದ್ದಾರೆ. ಮೂಲತಃ ರಾಜಸ್ಥಾನದವನಾಗಿದ್ದ ಕೇತರಾಮ್, ಮಾಲೀಕ ಊರಿಗೆ ಹೋಗುವ ಮುನ್ನವೇ ಬ್ಯಾಗ್ನಲ್ಲಿದ್ದ ಕೀಯನ್ನ ಕಳ್ಳತನ ಮಾಡಿದ್ದಾನೆ. ಅಂಗಡಿ ಕೀ ಸಿಕ್ಕಿದ ನಂತರ ಸ್ನೇಹಿತ ರಾಕೇಶ್ ಮತ್ತು ಇನ್ನೊಬ್ಬ ಗೆಳಯ ಸುರೇಶ್ಗೆ ಫೋನ್ ಮಾಡಿ ಕರೆಸಿಕೊಂಡು ಅಂಗಡಿಯಲ್ಲಿದ್ದ ಎಲ್ಲಾ ಚಿನ್ನಾಭರಣಗಳನ್ನ ಹೊತ್ತೊಯ್ದಿದ್ದಾರೆ. ಅಂಗಡಿಗೆ ಹೋಗುವ ಮುನ್ನ ಅನ್ನಪೂರ್ಣೆಶ್ವರಿ ನಗರದ ವ್ಯಾಪ್ತಿಯಲ್ಲಿ ಒಂದು ಬೈಕ್ನ್ನ ಕಳ್ಳತನ ಮಾಡಿ ಆ ಬೈಕ್ನಲ್ಲೇ ಎಸ್ಕೇಪ್ ಆಗಿದ್ದಾರೆ. ಹೆಚ್ಚು ಕಡಿಮೆ ಅಂಗಡಿಯಲ್ಲಿದ್ದ ಎಲ್ಲಾ ಬೆಲೆ ಬಾಳುವ ವಸ್ತುಗಳನ್ನ ಹೊತ್ತೊಯ್ದಿರುವ ಕಳ್ಳರು ಬರೋಬ್ಬರಿ ನಾಲ್ಕು ಮೂಟೆಯಲ್ಲಿ ಕದ್ದು ವಸ್ತುಗಳನ್ನ ತೆಗೆದುಕೊಂಡು ಹೋಗಿದ್ದರಂತೆ.
ಅಂಗಡಿ ಕಳ್ಳತನವಾಗಿರೋದನ್ನ ಸ್ಥಳೀಯರು ಮಾಲೀಕ ಅರವಿಂದ್ ಕುಮಾರ್ ತಾಡೆಗೆ ತಿಳಿಸಿದ್ದಾರೆ. ಕೂಡಲೇ ಬೆಂಗಳೂರಿಗೆ ಬಂದ ಅರವಿಂದ್ ಹಲಸೂರ್ ಗೇಟ್ ಪೊಲೀಸ್ ಠಾಣೆಗೆ ದೂರು ಕೊಡ್ತಾರೆ. ಮನೆ ಕೆಲಸದವನ ಮೇಲೆ ಅನುಮಾನ ವ್ಯಕ್ತಪಡಿಸಿ ಅಕ್ಟೋಬರ್ 29ಕ್ಕೆ ಕಂಪ್ಲೆಂಟ್ ಕೊಡ್ತಾರೆ. ಈ ದೂರಿನ ಅನ್ವಯ ಆರೋಪಿಗಳ ಪತ್ತೆಗಿಳಿದ ಪೊಲೀಸರಿಗೆ ಖತರ್ನಾಕ್ ಖದೀಮರು ಸಿಕ್ಕಿಹಾಕಿಕೊಂಡಿದ್ದಾರೆ. ಸಿಕ್ಕವರ ಬಳಿ ಭಾರಿ ಹಣ ಮತ್ತು ಚಿನ್ನಾಭರಣವನ್ನ ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ 1 ಕೆಜಿ 650 ಗ್ರಾಂ ಚಿನ್ನ, 6 ಕೆಜಿ 450 ಗ್ರಾಂ ಬೆಳ್ಳಿ, 5 ಲಕ್ಷದ 50 ಸಾವಿರ ನಗದು, ಹಳೆಯ ನೋಟುಗಳು, ಪುರಾತನದ ಕೈ ಗಡಿಯಾರಗಳು, ಹಾಗೂ ಅನ್ನಪೂರ್ಣೆಶ್ವರಿ ನಗರ ಲಿಮಿಟ್ನಲ್ಲಿದ್ದ ಕದ್ದಿದ್ದ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ. ಮೂವರ ಪೈಕಿ ಇಬ್ಬರನ್ನ ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಸದ್ಯ ಬೆಂಗಳೂರು ಹಾಗೂ ರಾಜ್ಯದಲ್ಲಿ ಅನ್ಯರಾಜ್ಯದವರು ವಿಶೇಷವಾಗಿ ಉತ್ತರಭಾರತದವ್ರು ಹೆಚ್ಚಾಗಿ ವಲಸೆ ಬಂದಿದ್ದು, ಅಲ್ಲಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಹೊಟ್ಟೆಪಾಡಿಗಾಗಿ ಬಂದವರು ಕೆಲಸ ಮಾಡಿ ಅದಕ್ಕೆ ತಕ್ಕ ಸಂಪಾದನೆ ತಗೊಂಡು ಹೋದ್ರೆ ಪರವಾಗಿಲ್ಲ. ಆದ್ರೆ ಒಳ್ಳೆಯವರಂತೆ ನಟಿಸಿ ವಂಚಿಸೋರ ಬಗ್ಗೆ ಎಚ್ಚರವಿರಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ