newsfirstkannada.com

ಅಕ್ರಮ ‘ಪ್ಯಾಕೆಟ್ ಅರಕ್’ ಕುಡಿದು 5 ಮಂದಿ ಸಾವು.. 20ಕ್ಕೂ ಹೆಚ್ಚು ಜನ ಗಂಭೀರ

Share :

Published June 20, 2024 at 6:23am

  ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಸಿಬ್ಬಂದಿ

  ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ರಾಜ್ಯದ ವಿರೋಧ ಪಕ್ಷಗಳು

  ಘಟನೆ ಹಿನ್ನೆಲೆ ಪೊಲೀಸ್ ವರಿಷ್ಠಾಧಿಕಾರಿ, ಸಿಬ್ಬಂದಿ ಅಮಾನತು

ಚೆನ್ನೈ: ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದ ಪ್ಯಾಕೆಟ್ ಅರಕ್ (ಮದ್ಯಪಾನ) ಕುಡಿದು 5 ಜನರು ಸಾವನ್ನಪ್ಪಿದ್ದು 20ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಪಾಲಾಗಿದ್ದಾರೆ. ಈ ಘಟನೆಯು ತಮಿಳುನಾಡಿನ ಉತ್ತರ ಭಾಗದ ಕಲ್ಲಾಕುರಿಚಿ ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿ: ಸ್ಮೃತಿ ಮಂದನಾ, ಕೌರ್​ ಭರ್ಜರಿ ಸೆಂಚುರಿ.. ಟೀಮ್ ಇಂಡಿಯಾ ನೀಡಿದ ಬೃಹತ್​ ಟಾರ್ಗೆಟ್​ಗೆ ಬೆಚ್ಚಿಬಿದ್ದ ಆಫ್ರಿಕಾ

ಈ ಪ್ರಕರಣ ಸಂಬಂಧ ಕೆ.ಕನ್ನುಕುಟ್ಟಿ (49) ಎನ್ನುವ ವ್ಯಕ್ತಿಯನ್ನು ಬಂಧಿಸಲಾಗಿದೆ. ಅಲ್ಲದೇ ಬಂಧಿತನಿಂದ ಸುಮಾರು 200 ಲೀಟರ್ ಅಕ್ರಮ ಅರಕ್‌ ಅನ್ನು ವಶಕ್ಕೆ ಪಡೆದು ತಪಾಷಣೆ ಮಾಡಲಾಗಿದೆ. ಈ ವೇಳೆ ಇದರಲ್ಲಿ ಮಾರಣಾಂತಿಕ ಮೆಥನಾಲ್ ಅನ್ನು ಹೆಚ್ಚಾಗಿ ಬಳಕೆ ಮಾಡಲಾಗಿದೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕಾರಣ ತಿಳಿದು ಬರುತ್ತದೆ. ಇನ್ನು ಘಟನೆ ಸಂಬಂಧ ಕಲ್ಲಾಕುರಿಚಿ ಜಿಲ್ಲಾಧಿಕಾರಿ ಶ್ರವಣ್ ಕುಮಾರ್​ನ್ನ ವರ್ಗಾವಣೆ ಮಾಡಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಸಮಯ್ ಸಿಂಗ್ ಮೀನಾ ಮತ್ತು 9 ಸಿಬ್ಬಂದಿಯನ್ನ ಅಮಾನತುಗೊಳಿಸಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಹೆಂಡತಿ ಮೃತಪಟ್ಟ 10 ನಿಮಿಷದಲ್ಲಿ ICUನಲ್ಲಿ ಶೂಟ್​ ಮಾಡಿಕೊಂಡ IPS ಅಧಿಕಾರಿ.. ಇದು ಮನಕಲಕುವ ಸ್ಟೋರಿ

ಡಿಎಂಕೆ ಸರ್ಕಾರದ ಅಜಾಗೃತಿಯಿಂದಲೇ ಈ ಕೃತ್ಯ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ರಮ ಮದ್ಯ ಮಾರಾಟ ರಾಜ್ಯದಲ್ಲಿ ಹೆಗ್ಗಿಲ್ಲದೇ ನಡೆಯುತ್ತಿದೆ. ಇದರಿಂದ ಇಂತಹ ಸಾವುಗಳು ಸಂಭವಿಸುತ್ತಿವೆ ಎಂದಿದ್ದಾರೆ. ಮಾಜಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದವರು 20 ಅಲ್ಲ 40 ಜನರು ಎಂದು ಹೇಳಿದ್ದಾರೆ. ಇದಕ್ಕೆಲ್ಲ ಎಂ.ಕೆ ಸ್ಟಾಲಿನ್ ಸರ್ಕಾರ ನೇರ ಕಾರಣ ಎಂದು ಆರೋಪಿಸಿದ್ದಾರೆ.  ಅಲ್ಲದೇ ಮೃತರ ಕುಟುಂಬಗಳಿಗೆ ತಲಾ ₹ 10 ಲಕ್ಷ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಕ್ರಮ ‘ಪ್ಯಾಕೆಟ್ ಅರಕ್’ ಕುಡಿದು 5 ಮಂದಿ ಸಾವು.. 20ಕ್ಕೂ ಹೆಚ್ಚು ಜನ ಗಂಭೀರ

https://newsfirstlive.com/wp-content/uploads/2024/06/TN_LIQUER_1.jpg

Load More