newsfirstkannada.com

ಭೀಕರ ಅಪಘಾತ.. ವಿಸಿ ನಾಲೆಗೆ ಬಿದ್ದ ಕಾರು.. ಸ್ಥಳದಲ್ಲೇ ಐವರು ಜಲಸಮಾಧಿ

Share :

07-11-2023

  ಮಂಡ್ಯದಲ್ಲಿ ಮತ್ತೊಂದು ಭೀಕರ ಕಾರು ಅಪಘಾತ

  ವಿಸಿ ನಾಲೆಗೆ ಬಿದ್ದ ಮೈಸೂರಿನಿಂದ ಬರುತ್ತಿದ್ದ ಕಾರು

  ಕಾರಿನಲ್ಲಿದ್ದ ಐವರು ಜಲಸಮಾಧಿ, ಅಸಲಿಗೆ ಆಗಿದ್ದೇನು?

ಮಂಡ್ಯ: ಪಾಂಡವಪುರ ತಾಲೂಕಿನ ಬನಘಟ್ಟದ ಬಳಿಯಿರೋ ವಿಸಿ ನಾಲೆಗೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಬಿದ್ದಿದೆ. ಈ ಭೀಕ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಐವರೂ ಜಲಸಮಾಧಿ ಆಗಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು, ಐವರು ಮೈಸೂರಿನಿಂದ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಕಾರು ವಿಸಿ ನಾಲೆಗೆ ಬಿದ್ದಿದೆ. ಸದ್ಯ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಕಾರ್​ ಹೊರ ತೆಗೆದಿದ್ದಾರೆ. ಐವರ ಮೃತದೇಹಗಳು ಪತ್ತೆಯಾಗಿವೆ.

ಕಾರು ಎದುರಿಗೆ ಬರುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆಯಬೇಕಿತ್ತು. ಇದನ್ನು ತಪ್ಪಿಸಲು ಹೋಗಿ ಕಾರು ನಾಲೆಗೆ ಬಿದ್ದಿದೆ ಎಂದು ಮಂಡ್ಯ ಎಸ್.ಪಿ ಯತೀಶ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ಅಪಘಾತ.. ವಿಸಿ ನಾಲೆಗೆ ಬಿದ್ದ ಕಾರು.. ಸ್ಥಳದಲ್ಲೇ ಐವರು ಜಲಸಮಾಧಿ

https://newsfirstlive.com/wp-content/uploads/2023/11/VC-Nale.jpg

Load More