newsfirstkannada.com

ಶಾಲಾ ಬಸ್‌ ಭೀಕರ ಅಪಘಾತ.. ರಾಯಚೂರಲ್ಲಿ ಹೃದಯವಿದ್ರಾವಕ ಘಟನೆ; ₹5 ಲಕ್ಷ ಪರಿಹಾರ!

Share :

Published September 5, 2024 at 3:36pm

    ಬೆಳ್ಳಂಬೆಳಗ್ಗೆ ಮಕ್ಕಳು ಶಾಲಾ ಬಸ್‌ ಹತ್ತಿ ಹೋಗುವಾಗ ಬಸ್‌ಗೆ ಡಿಕ್ಕಿ

    ಭೀಕರ ಅಪಘಾತದಲ್ಲಿ 4 ವಿದ್ಯಾರ್ಥಿಗಳ ಕಾಲು ತುಂಡರಿಸಿ ಹೋಗಿದೆ

    40 ವಿದ್ಯಾರ್ಥಿಗಳ ಪೈಕಿ 17 ವಿದ್ಯಾರ್ಥಿಗಳಿಗೆ ಗಾಯ, ಆಸ್ಪತ್ರೆಗೆ ದಾಖಲು

ರಾಯಚೂರು: ಮಾನ್ವಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಹೃದಯವಿದ್ರಾವಕ ಘಟನೆ ನಡೆದಿದೆ. ಶಾಲಾ ಬಸ್ ಹಾಗೂ ಸರ್ಕಾರಿ ಬಸ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮಕ್ಕಳ ಸಾವಿನ ದುರಂತ ಒಂದು ಕಡೆಯಾದ್ರೆ, ಭೀಕರ ಅಪಘಾತದಲ್ಲಿ ನಾಲ್ಕು ವಿದ್ಯಾರ್ಥಿಗಳ ಕಾಲು ತುಂಡಾಗಿರೋ ದೃಶ್ಯ ಘನಘೋರವಾಗಿದೆ. ಹೃದಯ ದೌರ್ಬಲ್ಯ ಇರೋರು ನಿಜಕ್ಕೂ ಈ ದೃಶ್ಯವನ್ನು ನೋಡಲು ಸಾಧ್ಯವೇ ಇಲ್ಲ.

ಇದನ್ನೂ ಓದಿ: ಹಗ್ಗದಿಂದ ಕಟ್ಟಿ ಹಾಕಿ ಲಾಠಿ ಪುಡಿಯಾಗೋ ಹಾಗೆ ಹಲ್ಲೆ; ದರ್ಶನ್ ಗ್ಯಾಂಗ್ ಭೀಕರತೆ ಬಿಚ್ಚಿಟ್ಟ 3 ಫೋಟೋ ಇಲ್ಲಿವೆ 

ಇಂದು ಬೆಳ್ಳಂಬೆಳಗ್ಗೆ ಮಕ್ಕಳು ಶಾಸಗಿ ಶಾಲಾ ಬಸ್‌ನಲ್ಲಿ ಮಾನ್ವಿಯಿಂದ ರಾಯಚೂರು ಕಡೆಗೆ ಹೊರಟಿದ್ದರು. ರಾಯಚೂರಿನ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ಈ ಭಯಾನಕ ಘಟನೆ ನಡೆದಿದೆ. 40 ವಿದ್ಯಾರ್ಥಿಗಳ ಪೈಕಿ 17 ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಮೂವರ ಸ್ಥಿತಿ ಇನ್ನೂ ಗಂಭೀರವಾಗಿದೆ. ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಶಾಲಾ ಬಸ್ ಹಾಗೂ ಸರ್ಕಾರಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಈ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳ ದಾರುಣವಾಗಿ ಸಾವನ್ನಪ್ಪಿದ್ದಾರೆ. ಬಸ್‌ನಲ್ಲಿದ್ದ ಉಳಿದ ವಿದ್ಯಾರ್ಥಿಗಳಿಗೂ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ: ಅಂಗಲಾಚಿ, ಚೀರಾಡಿದ ರೇಣುಕಾಸ್ವಾಮಿ.. ಒಂದಲ್ಲ 10ಕ್ಕೂ ಹೆಚ್ಚು ಫೋಟೋ ರಿಟ್ರೀವ್‌; ಏನಿದರ ರಹಸ್ಯ? 

5 ಲಕ್ಷ ಪರಿಹಾರ ಘೋಷಣೆ!
ಖಾಸಗಿ ಶಾಲಾ ಬಸ್ ಹಾಗೂ ಸರ್ಕಾರಿ ಬಸ್ ಅಪಘಾತದಲ್ಲಿ ಮೃತಪಟ್ಟ ಮಕ್ಕಳ ಕುಟುಂಬಸ್ಥರಿಗೆ KSRTC ಕಡೆಯಿಂದ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ. ಗಂಭೀರ ಗಾಯಗೊಂಡ ವಿದ್ಯಾರ್ಥಿಗಳಿಗೆ 3 ಲಕ್ಷ ಪರಿಹಾರ ನೀಡುವ ಭರವಸೆ ನೀಡಲಾಗಿದೆ. ಈ ಅಪಘಾತದ ಬಗ್ಗೆ ಜಿಲ್ಲಾಧಿಕಾರಿ ನಿತೀಶ್ ಕೆ ಹೇಳಿಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಲಾ ಬಸ್‌ ಭೀಕರ ಅಪಘಾತ.. ರಾಯಚೂರಲ್ಲಿ ಹೃದಯವಿದ್ರಾವಕ ಘಟನೆ; ₹5 ಲಕ್ಷ ಪರಿಹಾರ!

https://newsfirstlive.com/wp-content/uploads/2024/09/Raichur-KSRTC-Bus-Accident.jpg

Load More