newsfirstkannada.com

×

ayushman bharat: ಹಿರಿಯ ನಾಗರಿಕರಿಗೆ ಮೋದಿ ಸರ್ಕಾರದಿಂದ ಗುಡ್‌ನ್ಯೂಸ್‌; ಯಾರಿಗೆಲ್ಲ ಲಾಭ?

Share :

Published September 11, 2024 at 9:45pm

Update September 11, 2024 at 9:47pm

    ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ

    ದೇಶದ 4.5 ಕೋಟಿ ಕುಟುಂಬಗಳಿಗೆ 5 ಲಕ್ಷದವರೆಗೆ ಆರೋಗ್ಯ ವಿಮೆ

    ಆಯುಷ್ಮನ್ ಭಾರತ್ ಯೋಜನೆಯಲ್ಲಿ ಮಹತ್ವದ ಬದಲಾವಣೆ

ನವದೆಹಲಿ: ದೇಶದ ಹಿರಿಯ ನಾಗರಿಕರಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿಹಿಸುದ್ದಿ ಕೊಟ್ಟಿದೆ. ಆಯುಷ್ಮನ್ ಭಾರತ್ ಯೋಜನೆಯಲ್ಲಿ ಇನ್ಮುಂದೆ 70 ವರ್ಷ ಮೇಲ್ಮಟ್ಟ ಪ್ರತಿಯೊಬ್ಬರಿಗೂ ಆರೋಗ್ಯ ವಿಮೆ ಉಚಿತವಾಗಿ ಸಿಗಲಿದೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಆಯುಷ್ಮನ್ ಭಾರತ್ ಯೋಜನೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ಹೊಸ ನಿಯಮದ ಅನ್ವಯ ದೇಶದಲ್ಲಿ ಹಿರಿಯ ನಾಗರಿಕರಿಗೆ 5 ಲಕ್ಷದವರೆಗೂ ಉಚಿತ ಆರೋಗ್ಯ ಸೇವೆ ನೀಡಲಾಗುತ್ತದೆ.

70 ವರ್ಷ ಮೇಲ್ಮಟ್ಟ ಪ್ರತಿಯೊಬ್ಬರಿಗೂ ಈ ಯೋಜನೆ ಫಲಾನುಭವಿಗಳಾಗಲು ಅವಕಾಶ ನೀಡಲಾಗಿದೆ. ಹಿರಿಯ ನಾಗರಿಕರ ಆದಾಯ ಎಷ್ಟೇ ಇದ್ದರೂ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು. 5 ಲಕ್ಷ ರೂಪಾಯಿವರೆಗಿನ ಉಚಿತ ಆರೋಗ್ಯ ವಿಮೆ ಪಡೆಯಲು ಹಿರಿಯ ನಾಗರಿಕರು ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಕಾರ್ಡ್ ಹೊಂದಿರಬೇಕು.

ಇದನ್ನೂ ಓದಿ: ಸಿಎಂಗಳಿಗೆ ಸಿಗದ ಮೋದಿ ಡಿಕೆಶಿಗೆ ಸಿಕ್ಕಿದ್ದು ಹೇಗೆ? ಕಾಂಗ್ರೆಸ್‌ ಹೈಕಮಾಂಡ್ ಅಸಮಾಧಾನ; ಏನಿದರ ಸೀಕ್ರೆಟ್‌? 

ಕೇಂದ್ರ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ದೇಶದಲ್ಲಿ ಆಯುಷ್ಮನ್ ಭಾರತ್ ಯೋಜನೆಯಿಂದ ಸದ್ಯ ನಾಲ್ಕೂವರೆ ಕೋಟಿ ಕುಟುಂಬಗಳು ಪ್ರಯೋಜನ ಪಡೆದುಕೊಳ್ಳುತ್ತಿವೆ. ಈ ಯೋಜನೆಯಲ್ಲಿ ಇನ್ಮುಂದೆ ಯಾವುದೇ ಆದಾಯ, ಸಾಮಾಜಿಕ ಸ್ಥಾನದ ಬೇಧವಿಲ್ಲದೆ ಎಲ್ಲಾ 70 ವರ್ಷ ಮೇಲ್ಪಟ್ಟ ನಾಗರಿಕರು ಆರೋಗ್ಯ ವಿಮೆ ಯೋಜನೆಗೆ ಅರ್ಹರಾಗುತ್ತಾರೆ ಎಂದಿದ್ದಾರೆ.

ಆಯುಷ್ಮನ್ ಯೋಜನೆಯಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ವಿಶಿಷ್ಟ ಗುರುತಿನ ಕಾರ್ಡ್‌ ನೀಡಲಾಗುತ್ತಿದೆ. ಆ ಕಾರ್ಡ್ ಬಳಸಿ ನಾಗರಿಕರು ವರ್ಷಕ್ಕೆ 5 ಲಕ್ಷದವರೆಗೂ ಆರೋಗ್ಯ ವಿಮೆಯ ಪ್ರಯೋಜನ ಪಡೆಯಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ayushman bharat: ಹಿರಿಯ ನಾಗರಿಕರಿಗೆ ಮೋದಿ ಸರ್ಕಾರದಿಂದ ಗುಡ್‌ನ್ಯೂಸ್‌; ಯಾರಿಗೆಲ್ಲ ಲಾಭ?

https://newsfirstlive.com/wp-content/uploads/2024/09/Modi-Ayushman-Bharath.jpg

Load More