newsfirstkannada.com

ಹಾಲಿಗೆ ವಿಷ ಹಾಕಿ 5 ತಿಂಗಳ ಹಸುಗೂಸನ್ನೇ ಕೊಂದ ಮಲತಾಯಿ; ಕಾರಣ ಗೊತ್ತಾದ್ರೆ ಶಾಕ್ ಆಗ್ತೀರಾ

Share :

01-09-2023

  ಹಾಲಿನಲ್ಲಿ ವಿಷ ಬೆರೆಸಿ ಸಾಯಿಸೋ ಮನಸು ಮಾಡಿದ್ದೇಕೆ ಮಲತಾಯಿ?

  ಹಾಲು ಕುಡಿದ ಮೂರು ಗಂಟೆ ನಂತರ ಹಸುಗೂಸಿನ ಬಾಯಲ್ಲಿ ನೊರೆ

  5 ತಿಂಗಳ ಹಸುಗೂಸಿನ ಮೇಲೆ ಮಲತಾಯಿ ಈ ದ್ವೇಷಕ್ಕೆ ಕಾರಣವೇನು?

ಐದು ತಿಂಗಳ ಹಸುಗೂಸಿಗೆ ಮಲತಾಯಿ ಹಾಲಿನಲ್ಲಿ ವಿಷ ಬೆರೆಸಿ ಸಾಯಿಸಿರೋ ಆರೋಪ ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಬಬಲಾದ ಗ್ರಾಮದಲ್ಲಿ ಕೇಳಿ ಬಂದಿದೆ. ಸಂಗೀತಾ ಚೆಟ್ಟಿಗೇರಿ ಸಾವನ್ನಪ್ಪಿದ ಐದು ತಿಂಗಳ ಹಸುಕೂಸು. ದೇವಮ್ಮ ಚೆಟ್ಟಿಗೇರಿ, ಹಸುಗೂಸಿಗೆ ಹಾಲಿನಲ್ಲಿ ವಿಷ ಬೆರೆಸಿ ಸಾಯಿಸಿದ ಆರೋಪಿ ಮಲತಾಯಿ ಆಗಿದ್ದಾರೆ.

ಮನೆಯಲ್ಲಿ ಹಸುಗೂಸು ಸಂಗೀತಾಳಿಗೆ ತಾಯಿ ಶ್ರೀದೇವಿ ಹಾಲು ಕುಡಿಸುತ್ತಾ ಇರ್ತಾರೆ. ಆಗ ಒತ್ತಾಯ ಪೂರ್ವಕವಾಗಿ ಆರೋಪಿ ದೇವಮ್ಮ ಹಾಲುಣಿಸುತ್ತೇನೆ ಅಂತಾ ಕರೆದುಕೊಂಡು ಹೋಗಿದ್ದಾರೆ. ಮನೆಯ ರೂಮಿಗೆ ಹೋಗಿ ಡೋರ್ ಮುಚ್ಚಿಕೊಂಡಿದ್ದಾರೆ. ಆಗ ಹಾಲಿನ ಬಾಟಲ್‌ನಲ್ಲಿ ವಿಷ ಬೆರೆಸಿ ಕೂಸಿಗೆ ಹಾಲು ಕೂಡಿಸಿದ್ದಾರೆ ಎನ್ನಲಾಗಿದೆ.

ವಿಷ ಬೆರೆಸಿದ ಹಾಲು ಕುಡಿದ ಮೂರು ಗಂಟೆ ನಂತರ ಹಸುಗೂಸಿನ ಬಾಯಲ್ಲಿ ನೊರೆ ಬಂದಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಂಗೀತಾ ಚೆಟ್ಟಿಗೇರಿ ಸಾವನ್ನಪ್ಪಿದ್ದಾಳೆ. ಕಳೆದ ಆಗಸ್ಟ್ 30ರಂದು ಬಬಲಾದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿ ದೇವಮ್ಮಳನ್ನು ವಡಗೇರಾ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಮಲತಾಯಿ ದ್ವೇಷಕ್ಕೆ ಕಾರಣವೇನು?

ಬಬಲಾದ ಗ್ರಾಮದ ಸಿದ್ದಪ್ಪ ಚೆಟ್ಟಿಗೇರಿ 11 ವರ್ಷಗಳ ಹಿಂದೆ ಶ್ರೀದೇವಿ ಎಂಬಾಕೆಯನ್ನು ಮದುವೆಯಾಗಿದ್ದ. ಶ್ರೀದೇವಿಗೆ ಮಕ್ಕಳಾಗದ ಹಿನ್ನೆಲೆ ಕಳೆದ‌ 7 ವರ್ಷದ ಹಿಂದೆ ದೇವಮ್ಮಳನ್ನು ಮದುವೆಯಾಗಿದ್ದಾನೆ. ದೇವಮ್ಮಳನ್ನ ಮದುವೆಯಾದ ನಂತರ ಶ್ರೀದೇವಿ ಗಂಡನ ಮನೆ ಬಿಟ್ಟು ತನ್ನ ತವರು ಮನೆಗೆ ಹೋಗಿದ್ದಾಳೆ. ಹಿರಿಯರ ರಾಜಿ ಸಂಧಾನದ ನಂತರ ಕಳೆದ ಮೂರು ವರ್ಷಗಳ ಹಿಂದೆ ಗಂಡನ ಮನೆಗೆ ವಾಪಸ್ ಆಗಿದ್ದಳು. ಕಳೆದ ಐದು ತಿಂಗಳ ಹಿಂದೆ ಶ್ರೀದೇವಿಗೆ ಹೆಣ್ಣು ಮಗು ಜನಿಸಿದೆ. ಆರೋಪಿ ದೇವಮ್ಮಳಿಗೆ ನಾಲ್ಕು ಜನ ಮಕ್ಕಳಿದ್ದಾರೆ. ಹೀಗಾಗಿ ಆಸ್ತಿಯಲ್ಲಿ ಸವತಿ ಶ್ರೀದೇವಿ ಐದು ತಿಂಗಳ ಮಗಳು ಸಂಗೀತಾಗೆ ಪಾಲು ಹೋಗುತ್ತೆ ಅಂತಾ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಹಾಲಿಗೆ ವಿಷ ಹಾಕಿ 5 ತಿಂಗಳ ಹಸುಗೂಸನ್ನೇ ಕೊಂದ ಮಲತಾಯಿ; ಕಾರಣ ಗೊತ್ತಾದ್ರೆ ಶಾಕ್ ಆಗ್ತೀರಾ

https://newsfirstlive.com/wp-content/uploads/2023/09/Yadgiri-Mother.jpg

Load More