Advertisment

ಇಂದು ದಿಢೀರ್ ದೆಹಲಿಗೆ ಸಿದ್ದರಾಮಯ್ಯ.. ಕಾಂಗ್ರೆಸ್‌ನಲ್ಲಿ ಮಹತ್ವದ ಬದಲಾವಣೆ; 5 ಕಾರಣಗಳು!

author-image
admin
Updated On
ರಾಜ್ಯಾದ್ಯಂತ ಗೊಂದಲ ಸೃಷ್ಟಿಸಿದ BPL ಕಾರ್ಡ್​ ರದ್ದು.. ಬಡವರಿಗೆ ಸಚಿವ ಮುನಿಯಪ್ಪ ಹೇಳಿದ್ದೇನು?
Advertisment
  • ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ
  • 2 ದಿನಗಳ ಕಾಲ ದೆಹಲಿಯಲ್ಲಿ ಬಿರುಸಿನ ರಾಜಕೀಯ ಬೆಳವಣಿಗೆ
  • ಈ ಬಾರಿ ಸಚಿವ ಸಂಪುಟದಿಂದ ಯಾರು, ಯಾರು ಔಟ್ ಆಗ್ತಾರೆ?

ಬೆಂಗಳೂರು: ಉಪಚುನಾವಣೆಯ ಬಿಸಿ ಆರಿದ ಮೇಲೆ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗುವ ಮುನ್ಸೂಚನೆ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ದಿಢೀರ್‌ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. 2 ದಿನಗಳ ಕಾಲ ದೆಹಲಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಗರಿಗೆದರಲಿದೆ.

Advertisment

ರಾಜ್ಯ ಕಾಂಗ್ರೆಸ್‌ ಪಾಳಯದಲ್ಲಿ ಸದ್ಯ 2 ಪ್ರಮುಖ ವಿಚಾರ ಬಹಳಷ್ಟು ಚರ್ಚೆಗೆ ಗುರಿಯಾಗಿದೆ. ಸಂಪುಟ ಪುನಾರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ವಿಚಾರವಾಗಿ ಕಾಂಗ್ರೆಸ್ ನಾಯಕರು ಸುಳಿವು ಬಿಟ್ಟುಕೊಡುತ್ತಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​​ಗೆ ಮಹಾ ಸೋಲು.. ರಾಹುಲ್​ ಗಾಂಧಿ ಕಡೆ ಬೊಟ್ಟು; ಕಾರಣವೇನು? 

ಸಂಪುಟ ಪುನಾರಚನೆಯ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸಿಎಂ ಸಿದ್ದರಾಯ್ಯ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ದೆಹಲಿ ಭೇಟಿ ವೇಳೆ ಕಾಂಗ್ರೆಸ್‌ ಹೈಕಮಾಂಡ್ ನಾಯಕರ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.

Advertisment

publive-image

ಸಿಎಂ ದೆಹಲಿ ಪ್ರವಾಸವೇಕೆ?
ಕಾರಣ 01: ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಭಾಗಿಯಾಗಲಿರೋ ಸಿದ್ದರಾಮಯ್ಯ
ಕಾರಣ 02: ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ
ಕಾರಣ 03: ಸಂಪುಟಕ್ಕೆ ಯಾರ ಸೇರ್ಪಡೆ? ಯಾರಿಗೆ ಕೊಕ್ ಎಂಬ ಚರ್ಚೆ
ಕಾರಣ 04: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿಯೂ ಚರ್ಚೆ
ಕಾರಣ 05: 4 ಪರಿಷತ್ ಸ್ಥಾನಗಳ ನೇಮಕ ಕುರಿತು ಸಮಾಲೋಚನೆ

ಮಗಳ ಪರ ಮುನಿಯಪ್ಪ ಬ್ಯಾಟಿಂಗ್‌!
ಸಂಪುಟ ಪುನಾರಚನೆಯ ಚರ್ಚೆ ಹಿನ್ನೆಲೆಯಲ್ಲಿ ಆಹಾರ ಸಚಿವ ಕೆ.ಹೆಚ್‌ ಮುನಿಯಪ್ಪ ಅವರು ಅಲರ್ಟ್‌ ಆಗಿದ್ದಾರೆ. ಈ ಬಾರಿ ಸಚಿವ ಸಂಪುಟದಿಂದ ತಮ್ಮನ್ನು​ ಕೈಬಿಡೋ ಸಾಧ್ಯತೆ ಇದೆ. ಹೀಗಾಗಿ ತನ್ನ ಖಾತೆ ತಮ್ಮ ಪುತ್ರಿ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರಿಗೆ ನೀಡುವಂತೆ ಮುನಿಯಪ್ಪ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಉಪಚುನಾವಣೆ ಮಹಾ ವಿಜಯ, ಕೈ ಪಾಳಯದ ಹೊಸ ಲೆಕ್ಕಾಚಾರ; ಗೃಹಲಕ್ಷ್ಮೀ ಸಂಘಗಳ ಸ್ಥಾಪನೆಗೆ ಚಿಂತನೆ 

Advertisment

ಸಚಿವ ಕೆ.ಹೆಚ್‌ ಮುನಿಯಪ್ಪನವರು ಹೈಕಮಾಂಡ್ ನಾಯಕರ ಭೇಟಿಯಾಗಲು ಮುಂದಾಗಿದ್ದಾರೆ. ಈ ವೇಳೆ ಸಚಿವ ಸ್ಥಾನಕ್ಕೆ ನಾನು ರಾಜೀನಾಮೆ ನೀಡಲು ಸಿದ್ಧ. ಆದರೆ ನನ್ನ ಖಾತೆಯನ್ನ ನನ್ನ ಪುತ್ರಿಗೆ ನೀಡಬೇಕು. ರೂಪಕಲಾ ಶಶಿಧರ್ 2 ಬಾರಿ ಶಾಸಕಿಯಾಗಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಯಾರಿಗೂ ಮಂತ್ರಿಗಿರಿ ಸಿಕ್ಕಿಲ್ಲ. ಮಹಿಳಾ ಖೋಟಾದಡಿ ನನ್ನ ಪುತ್ರಿಗೆ ಸ್ಥಾನ ನೀಡಿ. ನನ್ನ ಪುತ್ರಿಗೆ ಸಚಿವ ಸ್ಥಾನ ನೀಡಿದ್ರೆ, ಮಹಿಳಾ ಮತ ಭದ್ರ ಆಗುತ್ತದೆ ಎಂದು ಮನವಿ ಮಾಡಲು ನಿರ್ಧಾರ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment