newsfirstkannada.com

ವಾರದಲ್ಲಿ 4 ದಿನ 4 ಗಂಟೆ ಕೆಲಸಕ್ಕೆ 50 ಸಾವಿರ ಸಂಬಳ ಕೊಡಿ; ಉದ್ಯೋಗಾಕಾಂಕ್ಷಿ ಉತ್ತರಕ್ಕೆ ಸಂದರ್ಶಕ ಫುಲ್ ಶಾಕ್!

Share :

24-07-2023

    ಆಗಷ್ಟೇ LLB ಮುಗಿಸಿದ್ದ ಉದ್ಯೋಗಾಕಾಂಕ್ಷಿ ಸಂದರ್ಶನಕ್ಕೆ ಬಂದಿದ್ದ

    ಉದ್ಯೋಗಾಕಾಂಕ್ಷಿಯ ಈ ಸ್ಮಾರ್ಟ್ ಉತ್ತರಕ್ಕೆ ಸಂದರ್ಶಕ ಕಂಗಾಲು

    50 ಸಾವಿರ ಸಂಬಳನೇ ಬೇಕು ಅನ್ನೋ ಡಿಮ್ಯಾಂಡ್ ಯಾಕೆ ಗೊತ್ತಾ?

ಕೋಲ್ಕತ್ತಾ: ಡಿಗ್ರಿ ಮುಗಿಸಿ ಕೆಲಸ ಹುಡುಕೋ ಉದ್ಯೋಗಾಕಾಂಕ್ಷಿಗಳು ಒಳ್ಳೆ ಹುದ್ದೆ, ಕೈ ತುಂಬಾ ಸಂಬಳ ನಿರೀಕ್ಷೆ ಮಾಡೋದು ತಪ್ಪಲ್ಲ. ಆದರೆ, ಕೆಲಸ ಮಾಡೋದು ದಿನಕ್ಕೆ ನಾಲ್ಕೇ ಗಂಟೆ, ವಾರದಲ್ಲಿ ನಾಲ್ಕೇ ದಿನ. ಆದ್ರೆ 50 ಸಾವಿರ ರೂಪಾಯಿ ಸಂಬಳನೇ ಬೇಕು ಅಂತಾ ಡಿಮ್ಯಾಂಡ್ ಮಾಡಿರೋದನ್ನ ಕೇಳಿದ್ದೀರಾ. ಪಶ್ಚಿಮ ಬಂಗಾಳದಲ್ಲಿ ಇಂತಹದೊಂದು ಅಪರೂಪದ ಘಟನೆ ನಡೆದಿದೆ. ಉದ್ಯೋಗಾಕಾಂಕ್ಷಿಯ ಈ ಉತ್ತರಕ್ಕೆ ಸಂದರ್ಶಕರೇ ಫುಲ್ ಶಾಕ್ ಆಗಿದ್ದು, ತಮ್ಮ ರೋಚಕ ಅನುಭವವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕೋಲ್ಕತ್ತಾ ಮೂಲದ ವಕೀಲರೊಬ್ಬರು ಇತ್ತೀಚೆಗೆ ಒಂದು ಸಂದರ್ಶನ ನಡೆಸಿದ್ದಾರೆ. ಆ ಸಂದರ್ಶನಕ್ಕೆ ಆಗಷ್ಟೇ LLB ಮುಗಿಸಿದ್ದ ಉದ್ಯೋಗಾಕಾಂಕ್ಷಿ ಆಗಮಿಸಿದ್ದಾರೆ. ಈ ವೇಳೆ ಆ ಯುವ ವಕೀಲ ನನಗೆ ಕೋರ್ಟ್‌ಗೆ ಹೋಗಲು ಇಷ್ಟವಿಲ್ಲ. ಹೀಗಾಗಿ ಆಫೀಸ್‌ನಲ್ಲಿ ಕೆಲಸ ಮಾಡಲು ಬಯಸುತ್ತಿದ್ದೇನೆ ಎಂದಿದ್ದಾರೆ. ಇದಾದ ಮೇಲೆ ನಾನು ಕೆಲಸ ಮಾಡೋದು ದಿನಕ್ಕೆ ನಾಲ್ಕೇ ಗಂಟೆ, ವಾರದಲ್ಲಿ ನಾಲ್ಕೇ ದಿನ. ಆದ್ರೆ 50 ಸಾವಿರ ರೂಪಾಯಿ ಸಂಬಳನೇ ಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಉದ್ಯೋಗಾಕಾಂಕ್ಷಿಯ ಈ ಉತ್ತರಕ್ಕೆ ಎದುರಿದ್ದ ಸಂದರ್ಶಕರು ನಿಜಕ್ಕೂ ಶಾಕ್ ಆಗಿದ್ದಾರೆ.

ಉದ್ಯೋಗಾಕಾಂಕ್ಷಿಯ ಈ ಸ್ಮಾರ್ಟ್ ಉತ್ತರಕ್ಕೆ ಶಾಕ್ ಆದವರು ಕೋಲ್ಕತ್ತಾದ ಜುಮಾ ಸೇನ್. ಇವರು ಟ್ವಿಟರ್‌ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಇಂದಿನ ಯುವಪೀಳಿಗೆಗೆ ಒಳ್ಳೆಯದಾಗಲಿ ಎಂದು ಶುಭ ಕೋರಿದ್ದಾರೆ. ಜುಮಾ ಸೇನ್ ಅವರ ಈ ಟ್ವೀಟ್‌ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗುರಿಯಾಗಿದೆ. ಉದ್ಯೋಗಕಾಂಕ್ಷಿಯ ಉತ್ತರಕ್ಕೆ ಬಹಳಷ್ಟು ಮಂದಿ ಕಾಲೆಳೆದಿದ್ದಾರೆ. ಜೊತೆಗೆ ಕೆಲವರು ಕೋಲ್ಕತ್ತಾ ದೇಶದಲ್ಲೇ ದುಬಾರಿ ನಗರ. ಈ ಮಹಾನಗರದಲ್ಲಿ ಬದುಕಲು 50 ಸಾವಿರ ಸಂಬಳದ ಅಗತ್ಯವಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ವಾರದಲ್ಲಿ 4 ದಿನ 4 ಗಂಟೆ ಕೆಲಸಕ್ಕೆ 50 ಸಾವಿರ ಸಂಬಳ ಕೊಡಿ; ಉದ್ಯೋಗಾಕಾಂಕ್ಷಿ ಉತ್ತರಕ್ಕೆ ಸಂದರ್ಶಕ ಫುಲ್ ಶಾಕ್!

https://newsfirstlive.com/wp-content/uploads/2023/07/Interview.jpg

Load More