newsfirstkannada.com

×

ನಾಗಮಂಗಲ ಗಲಭೆ ಕೇಸ್​​; 52 ಮಂದಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

Share :

Published September 12, 2024 at 7:52pm

Update September 12, 2024 at 8:29pm

    ಗಣೇಶ ವಿಸರ್ಜನೆ ವೇಳೆ ನಡೆದ ಹಿಂಸಾಚಾರ ಪ್ರಕರಣ

    52 ಮಂದಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ..!

    JMFC ಹಿರಿಯ ನ್ಯಾಯಧೀಶರಾದ ಯೋಗೇಶ್​ ಆದೇಶ

ಮಂಡ್ಯ: ಗಣೇಶ ವಿಸರ್ಜನೆ ವೇಳೆ ನಡೆದ ಹಿಂಸಾಚಾರ ಪ್ರಕರಣದಲ್ಲಿ 52 ಮಂದಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ಆಗಿದೆ. ಇಂದು ಈ ಕೇಸ್​ ಕುರಿತು ವಿಚಾರಣೆ ನಡೆಸಿದ JMFC ಕೋರ್ಟ್​​ನ ಹಿರಿಯ ನ್ಯಾಯಧೀಶರಾದ ಯೋಗೇಶ್​ ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಇಂದಿನಿಂದ 25ನೇ ತಾರೀಕಿನವರೆಗೂ 52 ಮಂದಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಏನಿದು ಕೇಸ್​?

ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು. ಬದರಿಕೊಪ್ಪಲಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿ ವಿಸರ್ಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ಸಾಗಿತ್ತು. ದರ್ಗಾ ಎದುರು ಮೆರವಣಿಗೆ ಸಾಗುತ್ತಿದ್ದಂತೆ ಕೆಲ ಕಿಡಿಗೇಡಿಗಳು ಇದ್ದಕ್ಕಿದ್ದಂತೆ ಕಲ್ಲು ತೂರಿದ್ದೇ ಗಲಾಟೆಗೆ ಕಾರಣ ಆಗಿದೆ.

54 ಮಂದಿ ಅರೆಸ್ಟ್​

ಗಲಭೆ ಪ್ರಕರಣಕ್ಕೆ ಸಂಬಂಧ ಒಟ್ಟು 6 ಎಫ್ಐಎರ್ ದಾಖಲಿಸಲಾಗಿದೆ. ಅಂತೆಯೇ ಈವರೆಗೂ 54 ಮಂದಿಯನ್ನು ಬಂಧಿಸಲಾಗಿದೆ ಎಂದು ಮಂಡ್ಯದ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಮಾಹಿತಿ ನೀಡಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಗಮಂಗಲ ಗಲಭೆ ಕೇಸ್​​; 52 ಮಂದಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

https://newsfirstlive.com/wp-content/uploads/2024/09/Ganesh-Clash.jpg

Load More