ಉತ್ತರ ಪ್ರದೇಶದಲ್ಲಿ ಬಿಸಿಲಿನ ಬೇಗೆಗೆ ತತ್ತರಿಸಿದ ಜನ
ತೀವ್ರ ಶಾಖದಿಂದಲೇ ಬರೋಬ್ಬರಿ 54 ಮಂದಿ ಸಾವು
ಸದ್ಯ 400ಕ್ಕೂ ಅಧಿಕ ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ!
ಲಕ್ನೋ: ಕೇವಲ 72 ಗಂಟೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಸಿಲಿನ ಬೇಗೆಗೆ ಬರೋಬ್ಬರಿ 54 ಮಂದಿ ಜೀವ ಕಳೆದುಕೊಂಡಿದ್ದಾರೆ. ಸದ್ಯ ಹೆಚ್ಚುತ್ತಿರೋ ಹೀಟ್ ಸ್ಟ್ರೋಕ್ಗೆ 50 ಮಂದಿ ಸಾವನ್ನಪ್ಪಿದ್ದು, ಕನಿಷ್ಠ ಎಂದರೆ 400ಕ್ಕೂ ಅಧಿಕ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಬಲ್ಲಿಯಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲೇ ಕೇವಲ 24 ಗಂಟೆಗಳ ಅವಧಿಯಲ್ಲಿ 34 ಮಂದಿ ಸಾವನ್ನಪ್ಪಿದ್ದರು. ಈ ಸಂಖ್ಯೆ ದಿಢೀರ್ 54ಕ್ಕೆ ಏರಿಕೆ ಆಗಿದೆ. ಬಿಸಿಲಿನ ತಾಪಮಾನಕ್ಕೆ ಬಲಿಯಾದ ಹೆಚ್ಚು ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ಆರೋಗ್ಯ ಇಲಾಖೆ ಹೇಳಿದೆ.
ಈ ಸಂಬಂಧ ಮಾತಾಡಿದ ಹಿರಿಯ ವೈದ್ಯರು, 54 ಮಂದಿ ಸಾವಿಗೆ ಕೇವಲ ಬಿಸಿಲು ಮಾತ್ರವಲ್ಲ ಬೇರೆ ಬೇರೆ ಅಂಶಗಳು ಕಾರಣ. ಆದರೆ, ಆಸ್ಪತ್ರೆಗೆ ದಾಖಲಾದ ಹೆಚ್ಚು ಮಂದಿ ತೀವ್ರ ಶಾಖದಿಂದ ಅನಾರೋಗ್ಯಕ್ಕೆ ಒಳಗಾದವರು ಎಂದರು.
ಸದ್ಯ ಬಿಸಿಲಿನ ತಾಪಮಾನ ಅಲೆಯು ಉತ್ತರ ಪ್ರದೇಶವನ್ನು ಆವರಿಸಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ 40ಕ್ಕೂ ಹೆಚ್ಚು ಡಿಗ್ರಿ ಇದೆ. ಬಿಸಿಲಿನ ಬೇಗೆಯಿಂದ ಜನರಿಗೆ ದಿಢೀರ್ ಜ್ವರ ಬಂದಿದೆ. ಜತೆಗೆ ಹಲವರು ಉಸಿರಾಟದ ತೊಂದರೆಯಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ