newsfirstkannada.com

ಅಯ್ಯೋ ಚೊಂಬೇಶ್ವರ! ಈ ಕೋಟ್ಯಾಧೀಶ 27ನೇ ಬಾರಿ ಬರೆದ ಕಾಲೇಜು ಪರೀಕ್ಷೆಯೂ ಫೇಲ್​

Share :

03-07-2023

  ಅಯ್ಯೋ ಶಿವ.. ಈ ಕೋಟ್ಯಾಧೀಶನ ಆಸೆ ಈಡೇರೋದ್ಯಾವಾಗ?

  ಇತ್ತೀಚೆಗೆ ಬರೆದ 27ನೇ ಪರೀಕ್ಷೆಯಲ್ಲೂ ಫೇಲ್​ ಆದ ಕೋಟ್ಯಾಧೀಶ

  56ನೇ ವಯಸ್ಸಲ್ಲೂ ಎಕ್ಸಾಂ ಬರೆಯುವ ಹಂಬಲ..ಆದ್ರೆ ಪಾಸಾಗಲು ಹರಸಾಹಸ

ಜೀವನದಲ್ಲಿ ಕೆಲವೊಂದು ಹಂತಗಳನ್ನು ದಾಟಿ ಬರಬೇಕು ಎಂದು ದೊಡ್ಡವರು ಹೇಳುತ್ತಾರೆ. ಆದರೆ ಕೆಲವರು ಕೆಲವೊಂದು ಹಂತಗಳನ್ನು ದಾಟಿ ಬಂದರು ಇನ್ನು ಕೆಲವೊಂದು ಹಂತಗಳಲ್ಲಿ ಫೇಲ್​ ಆದ ಅದೆಷ್ಟೋ ಉದಾಹರಣೆಗಳಿವೆ. ಅದರಂತೆಯೇ ಇಲ್ಲೊಬ್ಬ ಕೋಟ್ಯಾಧೀಶ್ವರನ ಕಥೆಯೂ ಹೀಗೆ ಆಗಿದೆ. ಕೋಟ್ಯಾಧಿಪತಿಯಾದರೇನಂತೆ ತನ್ನಿಷ್ಟದ ಕಾಲೇಜು ಪ್ರವೇಶ ಪರೀಕ್ಷೆಯನ್ನು 27 ಬಾರಿ ಬರೆದರು ಸಹ ಒಂದು ಬಾರಿಯೂ ಪಾಸ್​ ಆಗಿಲ್ಲ.

27ನೇ ಬಾರಿಯೂ ಫೇಲ್​

ಹೌದು. ಇದು ಸತ್ಯ. ಒಂದಲ್ಲಾ, ಎರಡಲ್ಲಾ ಬರೋಬ್ಬರಿ 26 ಬಾರಿ ಕಾಲೇಜು ಪ್ರವೇಶ ಪರೀಕ್ಷೆ ಬರೆದರೂ ಸಹ 26 ಬಾರಿಯೂ ಸ ಫೇಲ್​ ಆಗಿದ್ದರು. ಆದರೆ ಇತ್ತೀಚೆಗೆ 27ನೇ ಬಾರಿ ಎಕ್ಸಾಂ ಬರೆದರು ಅದೃಷ್ಟ ಕೈಗೆಟಕಲಿಲ್ಲ. ಮತ್ತೆ ಅನುತ್ತೀರ್ಣರಾಗಿದ್ದಾರೆ. ಅಂದಹಾಗೆಯೇ ಆ ಕೋಟ್ಯಾಧೀಶ ಯಾರು ಗೊತ್ತಾ? ಮುಂದಕ್ಕೆ ಓದಿ.

56 ವರ್ಷದ ಕೋಟ್ಯಾಧೀಶ

ಲಿಯಾಂಗ್​ ಶಿ. ಚೀನಾ ಮೂಲದ ಈ ಕೋಟ್ಯಾಧೀಶನಿಗೆ ಆಸ್ತಿಗೇನು ಕೊರತೆಯಿಲ್ಲ. 56 ವರ್ಷದ ಲಿಯಾಂಗ್​ ಶಿಗೆ ತನ್ನ ಕನಸಿನ ಕಾಲೇಜಿನ ಪ್ರವೇಶ ಪರೀಕ್ಷೆಯನ್ನು ಇನ್ನೂ ಬರೆದು ಪಾಸ್​ ಮಾಡಲಾಗಲಿಲ್ಲ ಎಂಬುದೇ ವಿಪರ್ಯಾಸ.

‘ಗಾವೊಕಾವೊ’ ಪರೀಕ್ಷೆ

ಲಿಯಾಂಗ್​ ಶಿ ಕಳೆದ 4 ದಶಕಗಳಿಂದ ‘ಗಾವೊಕಾವೊ’ ಪರೀಕ್ಷೆ ಬರೆಯುತ್ತಿದ್ದಾರೆ. ಸಿಚುವಾನ್​​ ವಿಶ್ವವಿದ್ಯಾನಿಲಯದಲ್ಲಿ ಸ್ಥಾನ ಗಳಿಸಲು ಮತ್ತು ಪದವಿದರನಾಗುವ ಕನಸನ್ನು ಹೊತ್ತಿರುವ ಲಿಯಾಂಗ್​ ಶಿ ಪ್ರವೇಶ ಪರೀಕ್ಷೆ ಬರೆಯುತ್ತಲೇ ಇದ್ದಾರೆ.

ಲೈಫು ಇಷ್ಟೇನೆ

ಅಂದಹಾಗೆಯೇ ಲಿಯಾಂಗ್​ ಕಟ್ಟಡ ನಿರ್ಮಾಣದ ಸಾಮಾನ್ಯ ಕೂಲಿ ಕಾರ್ಮಿಕನಾಗಿ ಬದುಕು ಕಟ್ಟಿಕೊಂಡವರು. ಬಳಿಕ ಸ್ವಂತ ಪರಿಶ್ರಮದ ಮೂಲಕ ಕಟ್ಟಡ ನಿರ್ಮಾಣ ಸಾಮಾಗ್ರಿಗಳ ವ್ಯಾಪಾರ ಮಾಡುತ್ತಾ ಕೋಟ್ಯಾಧೀಶ ಎಂದೆನಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಇದ್ದರು ಪರೀಕ್ಷೆ ಮಾತ್ರ ಪಾಸಾಗದೆ ಪ್ರಯತ್ನ ಮಾಡುತ್ತಲೇ ಇದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯ್ಯೋ ಚೊಂಬೇಶ್ವರ! ಈ ಕೋಟ್ಯಾಧೀಶ 27ನೇ ಬಾರಿ ಬರೆದ ಕಾಲೇಜು ಪರೀಕ್ಷೆಯೂ ಫೇಲ್​

https://newsfirstlive.com/wp-content/uploads/2023/07/liang-shi-1.jpg

Load More