newsfirstkannada.com

578 ಕೋಟಿ ದೇವಾಸ್ ಹಗರಣದ ರಾಮಚಂದ್ರನ್ ದೇಶಭ್ರಷ್ಟ; ಸಿಬಿಐ ವಿಶೇಷ ಕೋರ್ಟ್ ಮಹತ್ವದ ತೀರ್ಪು

Share :

09-06-2023

    578 ಕೋಟಿ ರೂಪಾಯಿ ಭ್ರಷ್ಟಾಚಾರದ ಕಥೆಯೇನು?

    ಬೆಂಗಳೂರಲ್ಲಿ ಕಂಪನಿ ಶುರು ಮಾಡಿದ್ದ ರಾಮಚಂದ್ರನ್

    ದೇವಾಸ್ ಮಲ್ಟಿಮೀಡಿಯಾ ಸಿಇಓ ಈಗ ಭಾರತದಲ್ಲಿಲ್ಲ

ಬೆಂಗಳೂರು: ದೇವಾಸ್ ಮಲ್ಟಿಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಿಇಓ ರಾಮಚಂದ್ರನ್ ವಿಶ್ವನಾಥನ್ ಅವರನ್ನ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಘೋಷಿಸಿದೆ. ದೇಶಭ್ರಷ್ಟ ಆರ್ಥಿಕ ಅಪರಾಧಗಳ ಸೆಕ್ಷನ್ 12(2)ರ ಅಡಿ ರಾಮಚಂದ್ರನ್ ಆಸ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸೂಚಿಸಲಾಗಿದೆ.

ಏನಿದು ದೇವಾಸ್ ಹಗರಣ?
ಇದು ಬರೋಬ್ಬರಿ 578 ಕೋಟಿ ರೂಪಾಯಿಯ ಹಗರಣ. 2004ರಲ್ಲಿ ರಾಮಚಂದ್ರನ್ ವಿಶ್ವನಾಥನ್ ಬೆಂಗಳೂರಿನಲ್ಲಿ ಉಪಗ್ರಹ ಆಧಾರಿತ ದೇವಾಸ್‌ ಮಲ್ಟಿಮೀಡಿಯಾ ಸೇವೆಗಳ ಕಂಪನಿ ಆರಂಭಿಸಿದ್ದರು. ಈ ಕಂಪನಿ ಭಾರತೀಯ ಮೊಬೈಲ್ ಬಳಕೆದಾರರಿಗೆ S-ಬ್ಯಾಂಡ್ ಟ್ರಾನ್ಸ್ಪಾಂಡರ್ಸ್ ಸಂವಹನ ಉಪಗ್ರಹದ ಮೂಲಕ ಮಲ್ಟಿಮೀಡಿಯಾ ಸೇವೆ ನೀಡಲು ಉದ್ದೇಶಿಸಿತ್ತು. ಇದಕ್ಕೆ ಹಲವು ಹೂಡಿಕೆದಾರರು ಬೆಂಬಲ ನೀಡಿ ಹೂಡಿಕೆ ಮಾಡಿದ್ರು. ದೇವಾಸ್ ಸಂಸ್ಥೆ, ಆಂತರಿಕ್ಷ್ ಕಾರ್ಪೊರೇಶನ್ ಜೊತೆ ಉಪಗ್ರಹಗಳನ್ನು ನಿರ್ಮಿಸಬೇಕಾದ ಒಪ್ಪಂದವಾಗಿತ್ತು. ಆದ್ರೆ ಆಂತರಿಕ್ಷ್-ದೇವಾಸ್ ಒಡಂಬಡಿಕೆಯಲ್ಲಿ ಭ್ರಷ್ಟಾಚಾರ ನಡೆದಿತ್ತು. ಈ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಸಿತ್ತು.

578 ಕೋಟಿ ರೂಪಾಯಿ ಹಗರಣದ ವಿಚಾರಣೆಯಲ್ಲಿ ರಾಮಚಂದ್ರನ್ ವಿಶ್ವನಾಥನ್ ಅವರು ವಿಚಾರಾಣಾಧೀನ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗಿಲ್ಲ. ಆದ್ದರಿಂದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿ ಆಗಿರುವ ರಾಮಚಂದ್ರನ್ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಲು EDಯು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಕೋರಿತ್ತು. ಜಾರಿ ನಿರ್ದೇಶಾಲಯದ ಪರ ಎಸ್‌ಪಿಪಿ ಪಿ. ಪ್ರಸನ್ನ ಕುಮಾರ್ ವಾದಿಸಿದ್ರು. ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ. ದೇಶಭ್ರಷ್ಟ ಆರ್ಥಿಕ ಅಪರಾಧಗಳ ಕಾಯಿದೆ 2018ರ ಸೆಕ್ಷನ್ 4, ಸೆಕ್ಷನ್ 10 ಮತ್ತು 12ರ ಅಡಿ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಲಾಗಿದ್ದು, ಪ್ರಕರಣದ ವಿಚಾರಣೆಯನ್ನು ಜೂನ್ 26ಕ್ಕೆ ನ್ಯಾಯಾಲಯ ಮುಂದೂಡಿದೆ.
ರಾಮಚಂದ್ರನ್ ವಿಶ್ವನಾಥನ್ ಅವರು ಈಗಾಗಲೇ ದೇಶ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಭಾರತ ಮೂಲದ ರಾಮಚಂದ್ರನ್ ಅಮೆರಿಕದ ನಿವಾಸಿಯಾಗಿದ್ದಾರೆ. ಹೀಗಾಗಿ ದೇಶ ಬಿಟ್ಟ ಆರೋಪಿಗಳ ಲಿಸ್ಟ್‌ಗೆ ರಾಮಚಂದ್ರನ್ ಸೇರಿಕೊಂಡಿದ್ದಾರೆ.

ವಿಶ್ವನಾಥನ್ ವಿರುದ್ಧದ ಪ್ರಕರಣವೇನು.?

  • 2004ರಲ್ಲಿ ಬೆಂಗಳೂರಿನಲ್ಲಿ ಕಂಪನಿ ಶುರು ಮಾಡಿದ್ದ ರಾಮಚಂದ್ರನ್
  • ಉಪಗ್ರಹ ಆಧಾರಿತ ಮಲ್ಟಿಮೀಡಿಯಾ ಸೇವೆಗಳ ಕಂಪನಿ ಆರಂಭ
  • ದೇವಾಸ್ ಮಲ್ಟಿಮೀಡಿಯಾ ಪ್ರೈ.ಲಿ ಎಂಬ ಕಂಪನಿ ಆರಂಭಿಸಿದ್ದರು
  • ದೇವಾಸ್ ಸಂಸ್ಥೆ, ಆಂತರಿಕ್ಷ್ ಕಾರ್ಪೊರೇಶನ್ ಜೊತೆ ಒಪ್ಪಂದ
  • ಆಂತರಿಕ್ಷ್ ಸಂಸ್ಥೆ 2 ಉಪಗ್ರಹಗಳ ನಿರ್ಮಿಸಬೇಕಿದ್ದ ಒಪ್ಪಂದ
  • ಭಾರತೀಯ ಮೊಬೈಲ್ ಬಳಕೆದಾರರಿಗೆ ಮಲ್ಟಿಮೀಡಿಯಾ ಸೇವೆ ಪ್ರಾಜೆಕ್ಟ್
  • S-ಬ್ಯಾಂಡ್ ಟ್ರಾನ್ಸ್ಪಾಂಡರ್ಸ್ ಸಂವಹನ ಉಪಗ್ರಹದ ಮೂಲಕ
  • ದೇವಾಸ್ ಸಂಸ್ಥೆ ಮೊಬೈಲ್ ಬಳಕೆ ಗ್ರಾಹಕರಿಗೆ ನೀಡಬೇಕಿತ್ತು
  • ಇದಕ್ಕೆ ಹಲವು ಹೂಡಿಕೆದಾರರು ಬೆಂಬಲ ನೀಡಿ ಹೂಡಿಕೆ ಮಾಡಿದ್ರು
  • ಆದ್ರೆ ಆಂತರಿಕ್ಷ್-ದೇವಾಸ್ ಒಡಂಬಡಿಕೆಯಲ್ಲಿ ಭ್ರಷ್ಟಾಚಾರ
  • ಅಕ್ರಮದ ಹಿನ್ನೆಲೆಯಲ್ಲಿ FIR ದಾಖಲಿಸಿ ಸಿಬಿಐ ತನಿಖೆ ಆರಂಭಿಸಿತ್ತು
  • ಆಂತರಿಕ್ಷ್ ಸಂಸ್ಥೆಯು ದೇವಾಸ್ ಸಂಸ್ಥೆ ವಿರುದ್ಧ NCLT ಮುಂದೆ ಅರ್ಜಿ
  • ಭಾರತದ ಆರ್ಥಿಕ ಚಟುವಟಿಕೆಗಳ ಹಾಳು ಮಾಡ್ತಿದೆ ಎಂದು ಆರೋಪ
  • ವಂಚನೆಯ ಉದ್ದೇಶದಿಂದ ಸಂಸ್ಥೆಯನ್ನು ಆರಂಭಿಸಲಾಗಿದೆ ಎಂದು ತೀರ್ಪು
  • ಆಂತರಿಕ್ಷ್ ಪರವಾಗಿ NCLT ತೀರ್ಪು ನೀಡಿ ಆದೇಶ ಮಾಡಿತ್ತು
  • ಇದನ್ನು ಪ್ರಶ್ನಿಸಿ ದೇವಾಸ್ ಮೇಲ್ಮನವಿ NCLTಯಲ್ಲಿ ಸಲ್ಲಿಸಿತ್ತು
  • ಆದ್ರೆ ಈ ಅರ್ಜಿಯನ್ನು NCLT ತಿರಸ್ಕಾರ ಮಾಡಿ ಆದೇಶ ಮಾಡಿತ್ತು
  • ಇತ್ತ ಸುಪ್ರೀಂಕೋರ್ಟ್ ಸಹ NCLT ತೀರ್ಪನ್ನು ಎತ್ತಿಹಿಡಿದಿತ್ತು
  • ಈ ನಡುವೆ ED ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಲು ಅರ್ಜಿ
  • ಇಸ್ರೋದ ಆರ್ಥಿಕ ವಿಭಾಗದ ಆಂತರಿಕ್ಷದಿಂದ ಅಕ್ರಮ ಹಣ ಮಾಡಿತ್ತು
  • ಬರೋಬ್ಬರಿ 578 ಕೋಟಿ ರೂಪಾಯಿಗಳನ್ನು ದೇವಾಸ್ ಲಾಭ ಮಾಡಿತ್ತು
  • ಖಾಸಗಿ ಮಲ್ಟಿಮೀಡಿಯಾ ಕಂಪೆನಿ ದೇವಾಸ್ ಲಾಭ ಮಾಡಿಕೊಂಡಿತ್ತು
  • ಇದಕ್ಕೆ ಇಡಿ ಸಹ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

578 ಕೋಟಿ ದೇವಾಸ್ ಹಗರಣದ ರಾಮಚಂದ್ರನ್ ದೇಶಭ್ರಷ್ಟ; ಸಿಬಿಐ ವಿಶೇಷ ಕೋರ್ಟ್ ಮಹತ್ವದ ತೀರ್ಪು

https://newsfirstlive.com/wp-content/uploads/2023/06/Devas-Scam.jpg

Load More