ಹೆಚ್ಚಾಗಿದೆ ಭಾರತ -ಪಾಕ್ ನಡುವಿನ ಏಷ್ಯಾಕಪ್ ಪಂದ್ಯದ ಕಾವು
ಶ್ರೀಲಂಕಾಗೆ ಬಂದಿಳಿದ ಪಾಕಿಸ್ತಾನ ತಂಡ
ಕೌಂಟಿ ಕ್ರಿಕೆಟ್ ಆಡಲು ಸಜ್ಜಾದ ಸಾಯಿ ಸುದರ್ಶನ್
5963 ಕೋಟಿಗೆ ಪ್ರಸಾರ ಹಕ್ಕುಗಳ ಮಾರಾಟ
ಭಾರತದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಹಾಗೂ ಡೊಮೆಸ್ಟಿಕ್ ಪಂದ್ಯಗಳ ಪ್ರಸಾರದ ಹಕ್ಕಿನಿಂದ ಕೋಟಿ ಕೋಟಿ ಹಣ ಬಿಸಿಸಿಐ ಖಜಾನೆ ಸೇರಲಿದೆ. ನಿನ್ನೆ ನಡೆದ ಹರಾಜಿನಲ್ಲಿ ಹಕ್ಕುಗಳು ಬರೋಬ್ಬರಿ 5963 ಕೋಟಿಗೆ ಮಾರಾಟಗೊಂಡಿವೆ. ಹರಾಜು ಪ್ರಕ್ರಿಯೆಯಲ್ಲಿ ನಾಲ್ಕು ಪ್ರಮುಖ ವಾಹಿನಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ವಯೋಕಾಮ್ 18 ಪ್ರೈವೇಟ್ ಲಿಮಿಟೆಡ್ 5963 ಕೋಟಿ ಹಕ್ಕನ್ನ ಖರೀದಿಸಿತು. ಈ ಹಿಂದೆ ಸ್ಟಾರ್ಸ್ಪೋರ್ಟ್ಸ್ ಪಂದ್ಯಗಳ ಪ್ರಸಾರ ಹಕ್ಕನ್ನ ಹೊಂದಿತ್ತು.
ಕೊಹ್ಲಿಯ ಗುಣಗಾನ ಮಾಡಿದ ಬಾಬರ್ ಅಝಂ
ಏಷ್ಯಾಕಪ್ ಟೂರ್ನಿಯಲ್ಲಿ ಭಾರತ – ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ನಾಳೆ ಪೆಲ್ಲೆಕೆಲೆ ಮೈದಾನದಲ್ಲಿ ಭಾರತ – ಪಾಕ್ ಮುಖಾಮುಖಿಯಾಗಲಿದ್ದು, ವಿಶ್ವ ಕ್ರಿಕೆಟ್ ಲೋಕದಲ್ಲಿ ಇಂಡೋ – ಪಾಕ್ ಪಂದ್ಯದ ಫೀವರ್ ಹೆಚ್ಚಿದೆ. ಇದರ ಪಾಕಿಸ್ತಾನದ ನಾಯಕ ಬಾಬರ್ ಅಝಂ, ವಿರಾಟ್ ಕೊಹ್ಲಿಯ ಗುಣಗಾನ ಮಾಡಿದ್ದಾರೆ. 2019ರ ವಿಶ್ವಕಪ್ ವೇಳೆ ನಾನು ಕೊಹ್ಲಿಯನ್ನ ಭೇಟಿಯಾಗಿ ಬ್ಯಾಟಿಂಗ್ ಬಗ್ಗೆ ಹಲವು ಪ್ರಶ್ನೆಗಳನ್ನ ಕೇಳಿದೆ. ಅವರು ಪ್ರಾಮಾಣಿಕವಾಗಿ ನನಗೆ ಎಲ್ಲವನ್ನೂ ವಿವರಿಸಿದರು. ಇದ್ರಿಂದ ನಾನು ತುಂಬಾ ಕಲಿತೆ. ಅವರು ಆಗಲೂ ಎತ್ತರದಲ್ಲಿದ್ರು, ಈಗಲೂ ಎತ್ತರದಲ್ಲಿದ್ದಾರೆ ಎಂದು ಬಾಬರ್ ಅಝಂ ಹೇಳಿಕೊಂಡಿದ್ದಾರೆ.
ಇಂಡೋ – ಪಾಕ್ ಫೀವರ್, ಹೋಟೆಲ್ಗಳಿಗೆ ಡಿಮ್ಯಾಂಡ್
ಭಾರತ – ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯದ ಕಾವು ಹೆಚ್ಚಾಗಿದೆ. ಶ್ರೀಲಂಕಾಗೆ ಪ್ರವಾಸಿಗರ ದಂಡು ಹರಿದು ಬರ್ತಿದ್ದು, ಕ್ಯಾಂಡಿಯ ಹೋಟೆಲ್ ಹಾಗೂ ರೆಸಾರ್ಟ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಕ್ಯಾಂಡಿಯಲ್ಲಿರುವ ಎಲ್ಲಾ ಹೇಟೆಲ್ ಹಾಗೂ ರೆಸಾರ್ಟ್ಗಳು ಸಂಪೂರ್ಣ ಭರ್ತಿಯಾಗಿವೆ ಎಂದು ತಿಳಿದುಬಂದಿದೆ. ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದ ಆರ್ಥಿಕತೆ ಚೇತನ ಸಿಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗ್ತಿವೆ. ಗ್ರೂಪ್ ಹಂತದ ಹೊರತಾಗಿ ಸೂಪರ್ 4 ಹಾಗೂ ಫೈನಲ್ನಲ್ಲಿಯೂ ಕೂಡ ಭಾರತ – ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವ ಸಾಧ್ಯತೆಯಿದೆ.
ಅಭಿಮಾನಿಗಳೊಂದಿಗೆ ಕಾಲ ಕಳೆದ ಬಾಬರ್ ಅಝಂ
ಏಷ್ಯಾಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಜಯ ಸಾಧಿಸಿದ ಬಳಿಕ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಝಂ ವಿಶೇಷ ಅಭಿಮಾನಿಗಳನ್ನ ಭೇಟಿಯಾಗಿದ್ದಾರೆ. ಬಾಬರ್ ಅಝಂಗೆ ಕೋಚ್ ಮಿಕ್ಕಿ ಆರ್ಥರ್ ಸಾಥ್ ನೀಡಿದ್ದಾರೆ. ಮುಲ್ತಾನ್ ಸ್ಟೇಡಿಯಂನಲ್ಲಿ ಪಂದ್ಯ ಮುಗಿದ ಬಳಿಕ ಭೇಟಿಯಾಗಿದ್ದು, ಈ ವೇಳೆ ವಿಶೇಷ ಚೇತನ ಅಭಿಮಾನಿಗಳು ಹಾಗೂ ಇಬ್ಬರು ಪುಟ್ಟ ಮಕ್ಕಳಿಗೆ ಜೆರ್ಸಿ ಹಾಗೂ ಕ್ಯಾಪ್ ನೀಡಿದ್ದಾರೆ. ಬಾಬರ್ ಭೇಟಿಯಾದ ಅಭಿಮಾನಿಗಳು ಫುಟ್ ಖುಷ್ ಆಗಿದ್ದಾರೆ.
ಶ್ರೀಲಂಕಾ ತಲುಪಿದ ಪಾಕಿಸ್ತಾನ ಆಟಗಾರರು
ಏಷ್ಯಾಕಪ್ ಟೂರ್ನಿಯ ಭಾರತದ ವಿರುದ್ಧದ ಪಂದ್ಯವನ್ನಾಡಲು ಪಾಕಿಸ್ತಾನ ತಂಡ ಶ್ರೀಲಂಕಾಗೆ ಬಂದಿಳಿದಿದೆ. ಬಾಬರ್ ಅಝಂ ನೇತೃತ್ವದ ಪಾಕ್ ಪಡೆ ಕೊಲಂಬೋ ತಲುಪಿದ್ದು, ಇಂದು ಅಭ್ಯಾಸ ನಡೆಸಲಿದೆ. ನಾಳೆ ಪಲ್ಲೆಕೆಲೆಯಲ್ಲಿ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ ಪಂದ್ಯವನ್ನಾಡಲಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಪಾಕಿಸ್ತಾನ ಪಡೆ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನ ಬೆನ್ನಲ್ಲೇ ಪಾಕ್ ಆಟಗಾರರು ಲಂಕಾಗೆ ಹಾರಿದ್ರು.

ಭಾರತದ ಯುವ ಕ್ರಿಕೆಟಿಗ, ಗುಜರಾತ್ ಟೈಟನ್ಸ್ ತಂಡದ ಬ್ಯಾಟ್ಸ್ಮನ್ ಸಾಯಿ ಸುದರ್ಶನ ಕೌಂಟಿ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ತಂಡ ಸರ್ರೆ ಪರ ಆಡಲು ಸಾಯಿ ಸುದರ್ಶನ ಮುಂದಾಗಿದ್ದಾರೆ. ಇಂಗ್ಲೀಷ್ ಕೌಂಟಿ ಚಾಂಪಿಯನ್ಶಿಪ್ ಸೀಸನ್ನ ಕೊನೆಯ 3 ಪಂದ್ಯಗಳು ಬಾಕಿ ಉಳಿದಿದ್ದು, ಆ ಪಂದ್ಯಗಳನ್ನ ಸಾಯಿ ಸುದರ್ಶನ್ ಆಡಲಿದ್ದಾರೆ. ಈ ಸೀಸನ್ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸಾಯಿ ಸುದರ್ಶನ್, 51.71ರ ಸರಾಸರಿಯಲ್ಲಿ 362 ರನ್ಗಳಿಸಿದ್ರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ