6ನೇ ಸ್ಪರ್ಧಿಯಾಗಿ ನವಗ್ರಹ ನಟ ಧರ್ಮ ಕೀರ್ತಿ ರಾಜ್ ಎಂಟ್ರಿ!
ನಾನು ಮೊದಲು ಸ್ವರ್ಗಕ್ಕೆ ಹೋಗಬೇಕು ಎಂದವರಿಗೆ ನರಕದ ಬಾಗಿಲು
ಬಿಗ್ ಬಾಸ್ ಸೀಸನ್ 11ರ ಗ್ರ್ಯಾಂಡ್ ಓಪನಿಂಗ್‌ನಲ್ಲಿ ಬಿಗ್ ಟ್ವಿಸ್ಟ್!
ಬಿಗ್ ಬಾಸ್ ಸೀಸನ್ 11ರಲ್ಲಿ ಎಲ್ಲವೂ ಸ್ಪೆಷಲ್. ಅದೆಷ್ಟು ಸ್ಪೆಷಲ್ ಅಂದ್ರೆ ಮನೆಗೆ ಎಂಟ್ರಿ ಕೊಡುತ್ತಿರುವ ಸ್ಪರ್ಧಿಗಳು ಫುಲ್ ಶಾಕ್ ಆಗುತ್ತಿದ್ದಾರೆ. ಗ್ರ್ಯಾಂಡ್ ಓಪನಿಂಗ್‌ನಲ್ಲಿ ಸದ್ಯ 5 ಮತ್ತು 6ನೇ ಸ್ಪರ್ಧಿಯ ಎಂಟ್ರಿಯಾಗಿದೆ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಮನೆಗೆ ಮತ್ತೆ ಇಬ್ಬರು ಸ್ಪರ್ಧಿಗಳನ್ನ ಬರಮಾಡಿಕೊಂಡಿದ್ದಾರೆ.
ಬಿಗ್ ಬಾಸ್ ಸೀಸನ್ 11ರಲ್ಲಿ 5ನೇ ಸ್ಪರ್ಧಿಯಾಗಿ ಯುವ ನಟಿ ಅನುಷಾ ರೈ ಎಂಟ್ರಿಕೊಟ್ಟಿದ್ದಾರೆ. ಅನುಷಾ ಫುಲ್ ಮಿಂಚುತ್ತಾ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದು, ಕಿಚ್ಚ ಸುದೀಪ್ ಅವರು ಅಷ್ಟೇ ಸಖತ್ ಆಗಿ ಕಾಲೆಳೆದಿದ್ದಾರೆ.
ಇದನ್ನೂ ಓದಿ: ಅಬ್ಬಾ.. ಭವ್ಯಾ, ಯಮುನಾಗೆ ಸಿಕ್ತು ಬಂಪರ್ ಆಫರ್.. ಬಿಗ್ ಬಾಸ್ 11 ಅಸಲಿ ಆಟನೇ ಬೇರೆ!
ಗ್ರ್ಯಾಂಡ್ ಓಪನಿಂಗ್ ಕೊಟ್ಟ ನಟಿ ಅನುಷಾ ರೈ ಅವರಿಗೆ ಬಿಗ್ ಬಾಸ್ ವೇದಿಕೆಯಲ್ಲಿ ಖುಷಿ ಹಾಗೂ ಡಬಲ್ ಶಾಕ್ ಸಿಕ್ಕಿದೆ. ಅನುಷಾ ರೈ ಅವರು ಎಂಟ್ರಿ ಕೊಟ್ಟಾದ ಮೇಲೆ ಕಣ್ಣಿಗೆ ಪಟ್ಟಿ ಕಟ್ಟಿಸಿ 6ನೇ ಕಂಟೆಸ್ಟೆಂಟ್ ಅನ್ನು ವೆಲ್ ಕಮ್ ಮಾಡಲಾಗಿದೆ.
ಬಿಗ್ ಬಾಸ್ ಸೀಸನ್ 11ರ 6ನೇ ಸ್ಪರ್ಧಿಯಾಗಿ ನವಗ್ರಹ ನಟ ಧರ್ಮ ಕೀರ್ತಿ ರಾಜ್ ಅವರು ಎಂಟ್ರಿಕೊಟ್ಟಿದ್ದಾರೆ. 5ನೇ ಸ್ಪರ್ಧಿ ಅನುಷಾ ಅವರಿಗೆ ಧರ್ಮ ಕೀರ್ತಿರಾಜ್ ಅವರ ಹೆಸರನ್ನು ಗೆಸ್ ಮಾಡೋ ಟಾಸ್ಕ್ ನೀಡಲಾಗಿದ್ದು, ಕಿಚ್ಚ ಸುದೀಪ್ ಸುಳಿವು ನೀಡುತ್ತಿದ್ದಂತೆ ಅನುಷಾ ರೈ, ಧರ್ಮನ ಹೆಸರು ಕಂಡು ಹಿಡಿದಿದ್ದಾರೆ.
ಅನುಷಾ ರೈ ಹಾಗೂ ಧರ್ಮ ಕೀರ್ತಿ ರಾಜ್ ಅವರ ಮೊದಲೇ ಸ್ನೇಹಿತರು. ಈಗ ಈ ಬೆಸ್ಟ್ ಫ್ರೆಂಡ್ಸ್ ಬಿಗ್ ಬಾಸ್ ಮನೆಯಲ್ಲಿ ಒಂದಾಗಿದ್ದಾರೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಟ್ವಿಸ್ಟ್ ನೀಡಲಾಗಿದೆ. ಅನುಷಾ ರೈ ಅವರು ನಾನು ಮೊದಲು ಸ್ವರ್ಗಕ್ಕೆ ಹೋಗಬೇಕು ಎಂದಿದ್ದರು. ಆದರೆ ಭವ್ಯಾ ಗೌಡ ಹಾಗೂ ಯಮುನಾ ಅವರ ನಿರ್ಧಾರದ ಮೇಲೆ ಅನುಷಾ ರೈ ಅವರು ನರಕಕ್ಕೆ ಹೋಗಿದ್ದಾರೆ. ಧರ್ಮ ಕೀರ್ತಿ ರಾಜ್ ಸ್ವರ್ಗಕ್ಕೆ ಕಾಲಿಟ್ಟಿದ್ದರೆ ಅನುಷಾ ಅವರು ಬಿಗ್ ಬಾಸ್ ಸೀಸನ್ 11ರಲ್ಲಿ ನರಕಕ್ಕೆ ಕಾಲಿಟ್ಟ ಮೊದಲ ಸ್ಪರ್ಧಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ