newsfirstkannada.com

ಒಂದು ಬಾಳೆಹಣ್ಣಿಗಾಗಿ ನಡೆಯಿತು ಭಯಾನಕ ಕಿಡ್ನ್ಯಾಪ್ ಮತ್ತು ರಾಬರಿ.. ಒಮ್ಮೊಮ್ಮೆ ಹೀಗೂ ಆಗುತ್ತೆ ಹುಷಾರ್..!

Share :

27-08-2023

    ಮಾರತ್ ಹಳ್ಳಿ ಪೊಲೀಸರಿಂದ ಆರೋಪಿಗಳು ಅರೆಸ್ಟ್!

    ಸ್ಮಶಾನದಲ್ಲಿ ಬರ್ತ್​ ಡೇ ಪಾರ್ಟಿ ಮಾಡಿದ್ದ ಆರೋಪಿಗಳು

    ಬೀಡಾ ಅಂಗಡಿಗೆ ಬಂದು ಸಿಗರೇಟ್ ವಿಚಾರದಲ್ಲಿ ಗಲಾಟೆ

ಬೆಂಗಳೂರು: ಕಿಡ್ನಾಪ್ ಮಾಡಿ ರಾಬರಿ ಮಾಡಿದ್ದ ಆರು ಆರೋಪಿಗಳನ್ನು ಮಾರತ್ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮೋಹನ್, ನವೀನ್, ಪುನೀತ್​, ಅ​ಭಿ, ರೂಪೇಶ್, ಪ್ರಶಾಂತ್ ಬಂಧಿತ ಆರೋಪಿಗಳು.

ಆರೋಪಿಗಳು ಸ್ಮಶಾನದಲ್ಲಿ ಬರ್ತ್​ ಡೇ ಪಾರ್ಟಿ ಮಾಡುತ್ತಿದ್ದರು. ಅಲ್ಲಿಯೇ ಮದ್ಯ ಸೇವನೆ ಮಾಡಿದ್ದಾರೆ. ಈ ವೇಳೆ ಆರೋಪಿ ರೂಪೇಶ್ ಎಂಬಾತ ಬೀಡಾ ಅಂಗಡಿಗೆ ಬಂದು ಸಿಗರೇಟ್ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದಾನೆ. ಗಲಾಟೆ ನಡೆಯುವ ಸಮಯದಲ್ಲಿ ತರುಣ್​ ಎಂಬಾತನ ಅಂಗಡಿ ಬಳಿ ಹೋಗಿ ಬಾಳೆಹಣ್ಣು ಕೇಳಿದ್ದ. ನಾನು ಇಲ್ಲಿ ಇರುವಾಗ ನೀನು ಯಾರು ಮಧ್ಯದಲ್ಲಿ ಬಂದು ವ್ಯಾಪಾರ ಮಾಡೊಕ್ಕೆ ಎಂದು ಜಗಳ ಮಾಡಿಕೊಂಡಿದ್ದಾನೆ. ಇದೇ ವಿಚಾರಕ್ಕೆ ತರುಣ್ ಜೊತೆ ಆರೋಪಿ ರೂಪೇಶ್ ಜಗಳ ತೆಗೆದಿದ್ದಾನೆ. ಈ ವೇಳೆ ನನಗೆ ಹಣ್ಣು ಕೊಡು ನಾನು ಹೋಗ್ತಿನಿ ಎಂದು ಹೇಳಿದ್ದಾನೆ. ಹೀಗೆ ಮಾತಿಗೆ ಮಾತು ಬೆಳೆದು ರೂಪೇಶ್​ ಕೋಪಗೊಂಡು ತರುಣ್​ಗೆ ಬೀಗದ ಕೀಯಿಂದ ಹಲ್ಲೆ ಮಾಡಿದ್ದಾನೆ.

ಬಂಧಿತ ಆರೋಪಿಗಳು

ಹೀಗೆ ಹಲ್ಲೆ ಮಾಡಿ ಬೈಕ್​ನಲ್ಲಿ ಕಿಡ್ನಾಪ್ ಮಾಡಿದ್ದಾರೆ. ಮೊಬೈಲ್ ಫೋನ್ ಕಸಿದುಕೊಂಡು ರಾಬರಿ ಮಾಡಿದ್ದಾರೆ. ಬಳಿಕ ತರುಣ್ ಮನೆ ತೋರಿಸಲು ಹೇಳಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾನೆ. ದೂರನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿ ಮಹೇಶ್​ಗೆ ವಿಡಿಯೋ ಕಾಲ್ ಮಾಡಿದ್ದಾರೆ. ವಿಡಿಯೋ ಕಾಲ್​ನಲ್ಲಿ ಪೊಲೀಸರನ್ನು ನೋಡಿದ ಆರೋಪಿಗಳು ಮಹೇಶ್​ನನ್ನು ರಸ್ತೆಯಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಸದ್ಯ ಕೃತ್ಯದಲ್ಲಿ ಭಾಗಿಯಾಗಿದ್ದ ಏಳು ಆರೋಪಿಗಳು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದು ಬಾಳೆಹಣ್ಣಿಗಾಗಿ ನಡೆಯಿತು ಭಯಾನಕ ಕಿಡ್ನ್ಯಾಪ್ ಮತ್ತು ರಾಬರಿ.. ಒಮ್ಮೊಮ್ಮೆ ಹೀಗೂ ಆಗುತ್ತೆ ಹುಷಾರ್..!

https://newsfirstlive.com/wp-content/uploads/2023/08/bng-4.jpg

Load More