newsfirstkannada.com

ಪಂಕ್ಚರ್ ಆಗಿ ನಿಂತಿದ್ದ ಬಸ್​​ಗೆ ಡಿಕ್ಕಿ ಹೊಡೆದ ಟ್ರಕ್.. ಸ್ಥಳದಲ್ಲೇ 6 ಮಂದಿ ಸಾವು, 25ಕ್ಕೂ ಹೆಚ್ಚು ಜನರಿಗೆ ಗಾಯ

Share :

10-11-2023

    ಬಸ್‌ನ ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬದಿ ನಿಲ್ಲಿಸಿದ್ದ ಚಾಲಕ

    ಗೋರಖ್‌ಪುರ ಕುಶಿನಗರ ಹೆದ್ದಾರಿಯ ಜಗದೀಶ್‌ಪುರ ಬಳಿ ಘಟನೆ

    ಗಂಭೀರವಾಗಿ ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು

ಲಕ್ನೋ: ಪಂಕ್ಚರ್‌ ಆಗಿ ನಿಂತಿದ್ದ ಬಸ್‌ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಉತ್ತರಪ್ರದೇಶದಲ್ಲಿ ನಡೆದಿದೆ. ಗೋರಖ್‌ಪುರ ಕುಶಿನಗರ ಹೆದ್ದಾರಿಯ ಜಗದೀಶ್‌ಪುರ ಬಳಿ ನಡೆದಿದೆ. ಶೈಲೇಶ್ ಪಟೇಲ್ (25), ಸುರೇಶ್ ಚೌಹಾಣ್ (35), ನಿತೇಶ್ ಸಿಂಗ್ (25) ಮತ್ತು ಹಿಮಾಂಶು ಯಾದವ್ (24) ಮೃತ ದುರ್ದೈವಿಗಳು. ಇವರ ಪೈಕಿ ಇಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ.

ಬಸ್‌ನ ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬದಿ ನಿಲ್ಲಿಸಿದ್ದರು. ಇದೇ ವೇಳೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದೆ. ಪರಿಣಾಮ 6 ಮಂದಿ ಸಾವನ್ನಪ್ಪಿದ್ದು, 25 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೂಡಲೇ ಗಂಭೀರವಾಗಿ ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಪಂಕ್ಚರ್ ಆಗಿ ನಿಂತಿದ್ದ ಬಸ್​​ಗೆ ಡಿಕ್ಕಿ ಹೊಡೆದ ಟ್ರಕ್.. ಸ್ಥಳದಲ್ಲೇ 6 ಮಂದಿ ಸಾವು, 25ಕ್ಕೂ ಹೆಚ್ಚು ಜನರಿಗೆ ಗಾಯ

https://newsfirstlive.com/wp-content/uploads/2023/11/accident-73.jpg

Load More