/newsfirstlive-kannada/media/post_attachments/wp-content/uploads/2024/10/SIDDU1.jpg)
ಬೆಂಗಳೂರು: ಹೆಣ್ಣೂರಿನ ಬಾಬುಸಪಾಳ್ಯದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವನ್ನಪ್ಪಿದ್ದು ಇದೀಗ ಸಿಎಂ ಸಿದ್ದರಾಮಯ್ಯ ಅವರು ಮೃತರ ಪ್ರತಿ ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಘಟನೆಯಲ್ಲಿ ಗಾಯಗೊಂಡವರಿಗೆ ಸಂಪೂರ್ಣ ಚಿಕಿತ್ಸೆ ವೆಚ್ಚವನ್ನ ಸರ್ಕಾರವೇ ನೋಡಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/10/Bangalore-Building-Collapse-3.jpg)
ಸಿಎಂ ಸಿದ್ದರಾಮಯ್ಯ ಅವರು ಇಂದು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಘಟನೆ ನೋಡಿದ ಮೇಲೆ ನನಗೂ ತುಂಬಾ ನೋವಾಗಿದೆ. ಇದರಲ್ಲಿ ಸಾವನ್ನಪ್ಪಿದ 8 ಮಂದಿ ಕುಟುಂಸ್ಥರಿಗೆ ಪರಿಹಾರ ನೀಡಲಾಗುವುದು. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿಗಳನ್ನು ನೀಡಲಾಗುವುದು. ಅಲ್ಲದೇ ಗಾಯಗೊಂಡವರಿಗೂ ಆಸ್ಪತ್ರೆಯ ಖರ್ಚು ಅನ್ನು ಸರ್ಕಾರವೇ ಭರಿಸಲಿದೆ ಎಂದು ಸಿಎಂ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/10/SIDDU.jpg)
ಒಂದು ವಾರಗಳಿಂದ ಸುರಿಯುತ್ತಿರೋ ಧಾರಾಕಾರ ಮಳೆಯ ಜೊತೆ, ಜೊತೆಗೆ ಸಿಲಿಕಾನ್​ ಸಿಟಿ ಒಂದಾದ ಮೇಲ್ಲೊಂದು ಆಘಾತವನ್ನು ಎದುರಿಸುತ್ತಿದೆ. ಮೊನ್ನೆ ಸಂಜೆ ಬಾಬುಸಾಪಾಳ್ಯದಲ್ಲಿ ನೋಡ ನೋಡ್ತಿದ್ದಂತೆ ಕ್ಷಣಾರ್ಧದಲ್ಲೇ ಕುಸಿದ ಆರು ಅಂತಸ್ತಿನ ಕಟ್ಟಡ ನೆಲಸಮವಾಗಿತ್ತು. ಒಳಗಿದ್ದ ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದರು. ಅಕ್ಕಪಕ್ಕದವರು ಏನಾಗ್ತಿದೆ ಅಂತ ನೋಡೋವಷ್ಟರಲ್ಲಿ ಪಕ್ಕದಲ್ಲಿದ್ದ ಕಟ್ಟಡ ಕಣ್ಮರೆಯಾಗಿತ್ತು. ಅವಶೇಷಗಳಡಿ ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಬಂದವರ ಉಸಿರುಗಟ್ಟಿತ್ತು.
ಇದೇ ವಿಚಾರವಾಗಿ ಮಾತಾಡಿದ ಸಿಎಂ, ಜೋನಲ್ ಆಫೀಸರ್ ನೊಟೀಸ್ ನೀಡಲು ಸೂಚನೆ ನೀಡಿದ್ದೇವೆ. ಗಾಯಾಳುಗಳ ಆಸ್ಪತ್ರೆ ಖರ್ಚು ಸರ್ಕಾರ ನೋಡಿಕೊಳ್ಳುತ್ತೆ. ಇದು ಮಳೆಯಿಂದ ಆಗಿರೋದಲ್ಲ, ಕಳಪೆ ಕಾಮಗಾರಿಯಿಂದ ಆಗಿರೋದು. ಇನ್ಮುಂದೆ ಅನ್ ಆಥರೈಸ್ಡ್ ಆಗಿ ಯಾರು ಮನೆ ಕಟ್ಟೋ ಆಗಿಲ್ಲ. ಕಟ್ಟಿದ್ರೆ ಇದಕ್ಕೆ ನೇರ ಹೊಣೆ ಜೋನಲ್ ಆಫೀಸರ್ ಹೊಣೆ. ಈ ಕುರಿತು ಬಿಬಿಎಂಪಿ ಆಯುಕ್ತರಿಗೆ ತಿಳಿಸಿದ್ದೇನೆ ಅಂತ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಯಾವುದೇ ಅನಧಿಕೃತ ಕಟ್ಟಡ ರಾಜಧಾನಿಯಲ್ಲಿ ನಿರ್ಮಾಣ ಆಗಬಾರದು. ಹಾಗೇನಾದರೂ ಆದರೆ ಅದಕ್ಕೆ ಸ್ಥಳೀಯ ಬಿಬಿಎಂಪಿ ಆಯುಕ್ತರು, ಸ್ಥಳೀಯ ಅಧಿಕಾರಿಗಳೇ ಹೊಣೆ ಆಗುತ್ತಾರೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us