Advertisment

ಭಾರತದಲ್ಲಿ ಕೋಟಿ, ಕೋಟಿ ಬೆಲೆಬಾಳುವ ಐಷಾರಾಮಿ ಬಂಗಲೆಗಳು; ಟಾಪ್ 6 ಮನೆಗಳ ರೇಟ್ ಇಲ್ಲಿದೆ!

author-image
Gopal Kulkarni
Updated On
ಭಾರತದಲ್ಲಿ ಕೋಟಿ, ಕೋಟಿ ಬೆಲೆಬಾಳುವ ಐಷಾರಾಮಿ ಬಂಗಲೆಗಳು; ಟಾಪ್ 6 ಮನೆಗಳ ರೇಟ್ ಇಲ್ಲಿದೆ!
Advertisment
  • ರಾಷ್ಟ್ರ ರಾಜಧಾನಿಯಲ್ಲಿವೆ 6 ಟಾಪ್​ ಐಷಾರಾಮಿ ಬಂಗಲೆಗಳು
  • ಈ 6 ಬಂಗಲೆಗಳ ಬೆಲೆಗಳನ್ನು ಕೇಳಿದ್ರೆ ನೀವು ಹೌಹಾರೋದು ಪಕ್ಕಾ
  • ಟಾಪ್​ 1 ಬಂಗಲೆಯ ಬೆಲೆ ಎಷ್ಟು ನೂರು ಕೋಟಿ ರೂಪಾಯಿ ಗೊತ್ತಾ?

ಪುರಾತನ ಕಾಲದಿಂದಲೂ, ರಾಜ ಆಳ್ವಿಕೆಯ ಕಾಲದಿಂದಲೂ, ಬ್ರಿಟೀಶರ ಆಳ್ವಿಕೆಯಿಂದ ಹಿಡಿದು ಇಂದಿನ ಭಾರತೀಯ ಆಡಳಿತದವರೆಗೂ ದೆಹಲಿ ಒಂದು ಚರ್ಚೆಯ ಕೇಂದ್ರಬಿಂದು. ದೆಹಲಿಯ ಪಟ್ಟಕ್ಕಾಗಿ ಮಹಾಭಾರತ ಕಾಲದಿಂಲೂ ಕೂಡ ಯುದ್ಧಗಳು ಸಾಗಿ ಬಂದಿವೆ. ದೆಹಲಿ ಅಂದಿನಿಂಲೂ ಸಂಸ್ಕೃತಿಯ, ಶ್ರೀಮಂತಿಕೆಯ, ಪರಂಪರೆಯ ಒಂದು ಗುರುತನ್ನು ತನ್ನೊಂದಿಗೆ ಅಂಟಿಸಿಕೊಂಡೇ ಬಂದಿದೆ. ದೆಹಲಿ ಒಂದಲ್ಲ ಒಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿರುವ ರಾಷ್ಟ್ರ ರಾಜಧಾನಿ. 2024ರ ಫೋರ್ಬ್ಸ್ ಪಟ್ಟಿಯಲ್ಲಿ ಹಲವಾರು ಕೋಟ್ಯಾಧಿಪತಿಗಳು ದೆಹಲಿಯಲ್ಲಿ ವಾಸವಿದ್ದಾರೆ. ಈ ವರ್ಷದ ಪಟ್ಟಿಯಲ್ಲಿ ದೆಹಲಿಯಲ್ಲಿರುವ ಮಿಲೆನಿಯರ್​ಗಳ ಪಟ್ಟಿ 200ಕ್ಕೆ ಮುಟ್ಟಿದೆ. ಕಳೆದ ವರ್ಷ ಇದರ ಸಂಖ್ಯೆ 169 ರಷ್ಟಿತ್ತು

Advertisment

ಇತ್ತೀಚೆಗೆ ಹುರುನ್ ಗ್ಲೊಬಲ್ ರಿಚ್​​ನಲ್ಲಿ ಪ್ರಕಟವಾದ ವರದಿಯಲ್ಲಿ 57 ಕೋಟ್ಯಾಧಿಪತಿಗಳ ಐಷಾರಾಮಿ ಬಂಗಲೆಗಳು ಚರ್ಚೆಗೆ ಬಂದಿದ್ದವು. ಅದರಲ್ಲಿ ನಗರದ ಟಾಪ್ ಆರು ಐಷಾರಾಮಿ ಬಂಗಲೆಗಳ ಬಗ್ಗೆ ಅವುಗಳ ಬೆಲೆಗಳ ಬಗ್ಗೆಯೂ ಕೂಡ ದೊಡ್ಡ ಚರ್ಚೆಯಾಗಿತ್ತು. ದೆಹಲಿಯಲ್ಲಿರುವ ಅತ್ಯಂತ ದುಬಾರಿ ಬಂಗಲೆಗಳ ಒಂದು ಮಾಹಿತಿ ಇಲ್ಲಿದೆ

publive-image

ರೇಣುಕಾ ತಲ್ವಾರ್ ಬಂಗಲೆ
ಡಿಎಲ್​ಎಪ್​ ಲಿಮಿಟೆಡ್​ನ ಸಿಇಓ ರೇಣುಕಾ ತಲ್ವಾರ್ ಅವರ ಬಂಗಲೆ ದೆಹಲಿಯ ಅತ್ಯಂತ ಐಷಾರಾಮಿ ಬಂಗಲೆಗಳಲ್ಲಿ ಒಂದು. ರೇಣುಕಾ ತಲ್ವಾರ್ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಅದು ಅವರ ಕುಟುಂಬದಿಂದ ನಡೆದುಕೊಂಡು ಬಂದಿರುವ ಒಂದು ಪರಂಪರೆಯನ್ನು ಅವರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಅತ್ಯಂತ ದುಬಾರಿ ಬಂಗಲೆಯ ಸಾಲುಗಳಲ್ಲಿ ಬಂದು ನಿಲ್ಲುವ ಮನೆಯಲ್ಲಿ ಅವರು ವಾಸಿಸುತ್ತಾರೆ. 2016ರಲ್ಲಿ ರೇಣುಕಾ ತಲ್ವಾರ್​, ಟಿಡಿಐ ಇನ್​ಫ್ರಾಕಾರ್ಪ್ ಡೈರೆಕ್ಟರ್ ಕಮಲ್ ತನೇಜಾ ಅವರಿಂದ ಈ ಮನೆಯನ್ನು ಖರೀದಿಸಿದರು. 5 ಸಾವಿರ ಸ್ಕ್ವೇರ್ ಮೀಟರ್​ನಲ್ಲಿ ಇರುವ ಈ ಬಂಗಲೆಯನ್ನು ಒಂದು ಸ್ಕ್ವೇರ್ ಮೀಟರ್​ಗೆ 8.8 ಲಕ್ಷ ರೂಪಾಇಯ ಕೊಟ್ಟು ಖರೀದಿಸಲಾಗಿದೆಯಂತೆ.ಈ ಐಷಾರಾಮಿ ಬಂಗಲೆಯ ಒಟ್ಟು ಬೆಲೆ 435 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ.

publive-image

ಲಕ್ಷ್ಮೀ ಮಿತ್ತಲ್ ಬಂಗಲೆ
ಲಕ್ಷ್ಮೀ ಮಿತ್ತಲ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿರುವ ಒಬ್ಬ ಭಾರತೀಯ ಕೋಟ್ಯಾಧಿಪತಿ. ಇವರು ಹಾಗೂ ಇವರ ಕುಟುಂಬ ಸ್ಟೀಲ್ ಬ್ಯುಸಿನೆಸ್​ನಲ್ಲಿ ತೊಡಗಿಸಿಕೊಂಡಿದೆ. ಲಕ್ಷ್ಮೀ ಮಿತ್ತಲ್​ ದೆಹಲಿಯ ಲೂಟೆನ್ಸ್​ನಲ್ಲಿ 1996ರಲ್ಲಿ ಒಂದು ಮನೆ ಖರೀದಿಸಿದ್ದಾರೆ. ಅದರ ಬೆಲೆ 31 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ.

Advertisment

ಜಿಂದಾಲ್ ಹೌಸ್​
1970ರಲ್ಲಿ ಜನಿಸಿದ ನವೀನ್ ಜಿಂದಾಲ್ ವಿಶ್ವ ಉದ್ಯಮದ ಜಗತ್ತಿನಲ್ಲಿ ತಮ್ಮದೇ ಆದ ಒಂದು ಹೆಸರನ್ನು ಹೊಂದಿದ್ದಾರೆ. ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್​ನಿಂದ ಅವರು ಹೆಸರುವಾಸಿಯಾದವರು. ದೆಹಲಿಯ ಹೃದಯ ಭಾಗದಲ್ಲಿ ಇವರು ಒಂದು ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ. ಅದರ ಬೆಲೆ 125 ರಿಂದ 150 ಕೋಟಿ ರೂಪಾಯಿ ಎಂದು ಅಂದಾಜಿಸಲಾಗುತ್ತದೆ. ಈ ಒಂದು ಮನೆ ದೆಹಲಿಯ ಲುಟ್ಯೂನ್ಸ್ ಬಂಗ್ಲೋವ್ ಝೋನ್​ನಲ್ಲಿ ಇದೆ.

ಅಹುಜಾ ಬಂಗಲೆ
ಹರೀಶ್ ಅಹುಜಾ ಬಂಗಲೆ ಶಶಿ ಎಕ್ಸ್​ಪೋರ್ಟ್​ನ ಮ್ಯಾನೆಜಿಂಗ್ ಡೈರೆಕ್ಟರ್ ಹರೀಶ್ ಅಹುಜಾ ಅವರ ಹೆಸರು ಯಾರಿಗೆ ತಾನೆ ಗೊತ್ತಿಲ್ಲ. ಗಾರ್ಮೆಂಟ್ಸ್​ ಉತ್ಪಾದನೆಯಲ್ಲಿ ಭಾರತದಲ್ಲಿ ಅತಿದೊಡ್ಡ ಹೆಸರು ಹರೀಶ್ ಅಹುಜಾ ಅವರದು. ಇವರ ಕಂಪನಿ ಜಾಗತಿಕವಾಗಿ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿರುವ ಹೆಚ್​ಅಂಡ್ ಎಮ್, ಯುನಿಕ್ಲೊ ಹಾಗೂ ಡೆಕತಲಾನ್​ಗೆ ಇವರ ಕಂಪನಿ ತಮ್ಮ ಉತ್ಪನ್​ಗಳನ್ನು ಪೂರೈಕೆ ಮಾಡುತ್ತದೆ. ಹರೀಶ್ ಅಹುಜಾ ಅವರ ಒಟ್ಟು ಆಸ್ತಿ 5900 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ. ಅದರಲ್ಲಿ ದೆಹಲಿಯ ಪೃಥ್ವಿರಾಜ್​ ರೋಡ್​ನಲ್ಲಿರುವ ಅತ್ಯಂತ ಐಷಾರಾಮಿ ಬಂಗಲೆಯೂ ಕೂಡ ಒಂದು ಅದರ ಬೆಲೆ 173 ಕೋಟಿ ರೂಪಾಯಿ. 2015ರಲ್ಲಿ ಅಹುಜಾ ಅವರು 3170 ಸ್ಕ್ವೇರ್ ಯಾರ್ಡ್​​ನಷ್ಟು ಜಾಗದಲ್ಲಿದ್ದ ಬಂಗಲೆಯನ್ನು 173 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದರು.

publive-image

ವಿಜಯ ಶೇಖರ್ ಶರ್ಮಾ ಬಂಗಲೆ
ವಿಜಯ್ ಶೇಖರ್ ಶರ್ಮಾ ಪೇಟಿಎಮ್​ನ ಸಂಸ್ಥಾಪಕ ಇತ್ತೀಚೆಗೆ ಅವರನ್ನು ದೇಶದ ಅತ್ಯಂತ ಕಿರಿಯ ಕೋಟ್ಯಾಧಿಪತಿ ಎಂದು ಕರೆಯಲಾಗುತ್ತದೆ. ಅವರು ಇತ್ತೀಚೆಗೆ 82 ಕೋಟಿ ರೂಪಾಯಿ ಮೌಲ್ಯದ ಗೊಲ್ಫ್​ ಲಿಂಕ್ ಏರಿಯಾವನ್ನು ಖರೀದಿಸಿದರು., ಎಲ್​ಬಿಝಡ್​ನ ಬಳಿ ಅದರಲ್ಲಿ ಒಂದು ಐಶಾರಾಮಿ ಬಂಗಲೆಯೂ ಕೂಡ ಇದೆ.

Advertisment

publive-image

ರುಯಿಯಾ ಮಾನ್ಷನ್​
ದೆಹಲಿಯಲ್ಲಿ ಅತ್ಯಂತ ದುಬಾರಿ ನಿವಾಸಗಳಲ್ಲಿ ಒಂದು ಅಂತ ಗುರುತಿಸಿಕೊಳ್ಳುವುದು ರುಯಿಯಾ ಮಾನ್ಷನ್​ ಕೂಡ ಒಂದು ಆಸ್ತಟಿಕ್ ವಾಸ್ತುಶೈಲಿಯಲ್ಲಿ ಇದನ್ನು ಕಟ್ಟಲಾಗಿದೆ. ಇದು 2.2 ಎಕರೆ ಜಾಗದಲ್ಲಿ ಹರಡಿಕೊಂಡಿರುವ ಆಸ್ತಿ. ಐಷಾರಾಮಿ ಸ್ವಿಮ್ಮಿಂಗ್​ಪೂಲ್​ನ್ನು ಕೂಡ ಹೊಂದಿರುವ ಈ ಬಂಗೆಲೆಯ ಬೆಲೆ ಸುಮಾರು 92 ಕೋಟಿ ರೂಪಾಯಿ ಎನ್ನಲಾಗುತ್ತದೆ.

ದೆಹಲಿಯಲ್ಲಿ ಎಲ್ಲಿ ನೋಡಿದರು ನಿಮಗೆ ಗಗನಚುಂಬಿ ಕಟ್ಟಡಗಳು ಸಿಗುತ್ತವೆ. ಐಷಾರಾಮಿ ವಿಲ್ಲಾಗಳು ಸಿಗುತ್ತವೆ. ಆದರೆ ಈ ಆರು ಬಂಗಲೆಗಳು ದೆಹಲಿ ನಗರ ಕಂಡ ಅತ್ಯಂದ ದುಬಾರಿ ಬಂಗಲೆಗಳು ಎಂದು ಗುರುತಿಸಿಕೊಂಡಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment